ಝಾನ್ಸಿ (ಉತ್ತರ ಪ್ರದೇಶ): ಸರ್ಕಾರದ ಆದೇಶ ಮತ್ತು ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಝಾನ್ಸಿಯ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಕೆಳಗಿಳಿಸಲಾಗುತ್ತಿದೆ. ಜಿಲ್ಲೆಯ ಬಾಡಾ ಹಳ್ಳಿ ಪಟ್ಟಣದಲ್ಲಿನ ದೇವಾಲಯಗಳು ಮತ್ತು ಮಸೀದಿಗಳಲ್ಲಿ ಅಳವಡಿಸಲಾದ ಧ್ವನಿವರ್ಧಕಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ.
ದೇಶದ ಹಲವೆಡೆ ಧ್ವನಿವರ್ಧಕಗಳ ವಿವಾದ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಅನುಮತಿಯಿಲ್ಲದೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಅಲ್ಲದೇ ಈಗಾಗಲೇ ಅಳವಡಿಸಿರುವ ಧ್ವನಿವರ್ಧಕ, ಮೈಕ್‌ಗಳ ಶಬ್ಧ ಆಯಾ ಆವರಣದಿಂದ ಹೊರಬಾರದಂತೆ ಷರತ್ತು ವಿಧಿಸಲಾಗಿದೆ.
ಹೀಗಾಗಿ ಝಾನ್ಸಿಯ ಬಡಾ ಗ್ರಾಮದಲ್ಲಿರುವ ಸುನ್ನಿ ಜಮಾ ಮಸೀದಿಯಿಂದ ಧ್ವನಿವರ್ಧಕಗಳನ್ನು ತೆಗೆಯಲಾಗಿದೆ. ಮತ್ತೊಂದೆಡೆ, ದೇವಸ್ಥಾನದ ಧ್ವನಿವರ್ಧಕವನ್ನೂ ಸಹ ತೆಗೆಯಲಾಯಿತು. ಎರಡೂ ಸಮುದಾಯದ ಜನರು ಕುಳಿತು ಪರಸ್ಪರ ಮಾತನಾಡಿ, ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಪುಲ್ವಾಮಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಎಲ್ಇಟಿ ಉಗ್ರರು ಖತಂ