ETV Bharat / bharat

ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದ ಯುವತಿ.. UPSC ಪರೀಕ್ಷೆಯಲ್ಲಿ 760ನೇ ರ‍್ಯಾಂಕ್‌ ಪಡೆದ ಛಲಗಾತಿ! - ETV bharat kannada

ತನ್ನ ಐದನೇ ವಯಸ್ಸಿನಲ್ಲಿ ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡ ಕೇರಳ ಮೂಲದ ಅಖಿಲಾ ಬಿ.ಎಸ್ ಇಂದು ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ 760 ನೇ ಸ್ಥಾನ ಪಡೆದಿಕೊಳ್ಳುವ ಮೂಲಕ ಹಲವಾರು ಜನರಿಗೆ ಸ್ಪೂರ್ತಿಯಾಗಿದ್ದಾರೆ.

lost-one-arm-at-age-of-five-akhila-bs-defies-disability-to-crack-upsc
ಅಂಗವೈಕಲ್ಯವನ್ನೇ ಮೆಟ್ಟಿ ನಿಂತ ಯುವತಿ UPSC ಪರೀಕ್ಷೆಯಲ್ಲಿ 760ನೇ ಸ್ಥಾನ
author img

By

Published : May 25, 2023, 6:11 PM IST

ತಿರುವನಂತಪುರಂ (ಕೇರಳ): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಬಹುನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆ 2022 ನೇ ಸಾಲಿನ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಕೇರಳದ ತಿರುವನಂತಪುರಂ ನಿವಾಸಿ ಅಖಿಲಾ ಬಿ.ಎಸ್​​ ಎಂಬವರು ತಮ್ಮ ಐದನೇ ವಯಸ್ಸಿನಲ್ಲಿ ಬಸ್​​​ ಅಪಘಾತದಲ್ಲಿ ತನ್ನ ಬಲಗೈಯನ್ನು ಕಳೆದುಕೊಂಡಿದ್ದ ಯುವತಿ ಇದೀಗ ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಯಲ್ಲಿ 760ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸೆಪ್ಟಂಬರ್​​ 11, 2000 ರಂದು ಅಪಘಾತಕ್ಕೊಳಗಾದ ಅಖಿಲ ಅವರು ತಮ್ಮ ಬಲಗೈಯನ್ನು ಕಳೆದುಕೊಂಡರು, ಅದರ ನಂತರ ಅಖಿಲಾ ಅವರು ತಮ್ಮ ಎಡಗೈ ನಿಂದ ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು ಮತ್ತು ಎಡಗೈನಿಂದಲೇ ಬರೆಯಲು ಅಭ್ಯಾಸ ಮಾಡಿಕೊಂಡರು. ಬೋರ್ಡ್​ ಎಕ್ಸಾಂನಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಅವರು ಐಐಟಿ ಮದ್ರಾಸ್​​ನಲ್ಲಿ ಇಂಟಿಗ್ರೇಟೆಡ್​​​​ ಎಂ.ಎ ಪದವಿ ಶಿಕ್ಷಣ ಪೂರ್ಣಗೊಳಿಸಿದ ನಂತರ ಯುಪಿಎಸ್​​​ಸಿ ಪರೀಕ್ಷೆ ಬರೆಯಲು ತಯಾರಿ ಆರಂಭಿಸಿದ್ದರು.

ಅಂಗವೈಕಲ್ಯವನ್ನೇ ಮೆಟ್ಟಿ ನಿಂತ ಯುವತಿ UPSC ಪರೀಕ್ಷೆಯಲ್ಲಿ 760ನೇ ಸ್ಥಾನ
ಅಂಗವೈಕಲ್ಯವನ್ನೇ ಮೆಟ್ಟಿ ನಿಂತ ಯುವತಿ UPSC ಪರೀಕ್ಷೆಯಲ್ಲಿ 760ನೇ ಸ್ಥಾನ

ಮೊದಲ ಎರಡು ಪ್ರಯತ್ನಗಳಲ್ಲಿ ಪ್ರಿಲಿಮ್ಸ್​​​​​ ತೇರ್ಗಡೆಯಾಗಿದ್ದ ಅಖಿಲ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ನನ್ನ ಶಿಕ್ಷಕರೊಬ್ಬರು ಕಲೆಕ್ಟರ್​​​ ವೃತ್ತಿಯ ಬಗ್ಗೆ ವಿವರಿಸಿದ್ದರು ಮತ್ತು ಯುಪಿಎಸ್​​​ಸಿ ಪರೀಕ್ಷೆಗೆ ತಯಾರುಗುವಂತೆ ಪ್ರೇರೇಪಿಸಿದ್ದರು. 2019 ರಲ್ಲಿ ಪದವಿ ಮುಗಿಸಿದ ನಂತರ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಒಂದು ವರ್ಷ ಬೆಂಗಳೂರಿನ ಇನ್ಸ್ಟಿಟ್ಯೂಟ್ ಒಂದರಲ್ಲಿ ತರಬೇತಿ ಪಡೆದು, ನಂತರ ನಾನು ಕೇರಳಕ್ಕೆ ಹಿಂತಿರುಗಿ ತಿರುವನಂತಪುರಂ ಮೂಲದ ಸಂಸ್ಥೆಯಿಂದ ಓದಲು ಸಹಾಯ ಪಡೆದುಕೊಂಡೆ" ಎಂದು ಹೇಳಿದರು. ಇದಕ್ಕಿಂತ ಮುಂಚೆ 2020 ಮತ್ತು 2021ರಲ್ಲಿ ಪ್ರಿಲಿಮ್ಸ್​​​​ನಲ್ಲಿ ಪಾಸ್​​ ಆಗಿದ್ದೆ. ಆದರೆ ಮೇನ್ಸ್​​ ಪರೀಕ್ಷೆಗೆ ಆಯ್ಕೆಯಾಗಿರಲಿಲ್ಲ ಎಂದು ತಿಳಿಸಿದರು.

ಪರೀಕ್ಷೆಗೆ ತಯಾರಿ ನಡೆಸುವಾಗ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ ಅವರು, "ಪರೀಕ್ಷೆಗೆ ತಯಾರಾಗಲು ಅಪಾರ ಪರಿಶ್ರಮದ ಜೊತೆಗೆ ಹಲವಾರು ಏಳುಬೀಳುಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಸಾಕಷ್ಟು ಶ್ರಮ ಪಡಬೇಕಾಗುತ್ತಿದೆ. ಮೊದ ಮೊದಲು ದೀರ್ಘಕಾಲ ನೇರವಾಗಿ ಕುಳಿತುಕೊಳ್ಳಲು ಬಹಳ ಕಷ್ಟವಾಯಿತು. ಎಡಗೈ ಬಳಸುವುದರಿಂದ ಬೆನ್ನುನೋವುನಿಂದ ನಿರಂತರವಾಗಿ ಬಳಲುತ್ತಿದ್ದೆ. ಪರೀಕ್ಷೆಯಲ್ಲಿ ನಿರಂತರವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಕುಳಿತುಕೊಳ್ಳುವುದು ಬಹಳ ಕಠಿಣವೆನಿಸಿತ್ತು. ಆದರೆ ಐಎಎಸ್​​​ ಸಾಧಿಸುವುದೇ ನನ್ನ ಗುರಿಯಾಗಿತ್ತು. ಆದ್ದರಿಂದ ಸತತ ಪರಿಶ್ರಮ ಪಟ್ಟು ಪರೀಕ್ಷೆಯಲ್ಲಿ ಉತ್ತೀರ್ಣಳಾದೆ ಎಂದು ತಮ್ಮ ಸಾಧನೆ ಹಾದಿ ಕುರಿತು ಸಂತಸ ಹಂಚಿಕೊಂಡರು.

ಮಂಗಳವಾರ ಪ್ರಕಟವಾದ ಕೇಂದ್ರ ಲೋಕಾ ಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗಳಲ್ಲಿ ಸತತ ಎರಡನೇ ವರ್ಷವೂ ಮಹಿಳೆಯರು ಮೊದಲ ಐದು ರ‍್ಯಾಂಕ್‌ಗಳಲ್ಲಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇಲಾಖೆಯ ಅಧಿಕೃತ ಬಿಡುಗಡೆಯ ಪ್ರಕಾರ ಒಟ್ಟು 933 ಅಭ್ಯರ್ಥಿಗಳಲ್ಲಿ 613 ಪುರುಷರು ಮತ್ತು 320 ಮಹಿಳೆಯರನ್ನು ವಿವಿಧ ಸೇವೆಗಳಿಗೆ ನೇಮಕಾತಿಗಾಗಿ ಆಯೋಗವು ಶಿಫಾರಸು ಮಾಡಿದೆ.

ಇದನ್ನೂ ಓದಿ: ಬಡತನ ಮಧ್ಯೆಯೂ ಧೃತಿಗೆಡದೇ ಯಶಸ್ಸು ಸಾಧಿಸಿದ ಮುದ್ದೇಬಿಹಾಳ ತಾಂಡಾದ ಯಲಗೂರೇಶ ನಾಯಕ: ಯುಪಿಎಸ್​ಸಿಯಲ್ಲಿ 890ನೇ ರ‍್ಯಾಂಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.