ಜೈಪುರ್ (ರಾಜಸ್ಥಾನ): ಹಿರಣ್ಯಕಶ್ಯಪುನನ್ನು ಸಂಹರಿಸಲು ಉಗ್ರ ನರಸಿಂಹನ ಅವತಾರ ತಾಳಿದ ವಿಷ್ಣುವಿಗೆ ದೇಶದ ನಾನಾ ಭಾಗಗಳಲ್ಲಿ ಹತ್ತು ಹಲವು ದೇವಾಲಯಗಳಿವೆ.
ಅದೇ ರೀತಿ ರಾಜಸ್ಥಾನದ ಬಿಕಾನೆರ್ನಲ್ಲಿ ಐದಾರು ದೇವಾಲಯಗಳಿವೆ. ಅವುಗಳಲ್ಲಿ ಲಖೋಟಿಯಾ ಚೌಕ್ನಲ್ಲಿರುವ ವಿಷ್ಣು ದೇವಾಲಯ ಅತ್ಯಂತ ಹಳೆಯದ್ದು ಎನಿಸಿದೆ. ಈ ದೇವಾಲಯವು 500 ವರ್ಷಗಳಿಗಿಂತಲೂ ಹಳೆಯದು. ಈ ದೇವಾಲಯ ಬಿಕಾನೆರ್ ನಗರ ಹುಟ್ಟುವ ಮೊದಲೇ ಅಸ್ಥಿತ್ವದಲ್ಲಿತ್ತು ಎನ್ನಲಾದರೂ ಇದಕ್ಕೆ ಪುರಾವೆಗಳಿಲ್ಲ.
ಈ ದೇವಾಲಯವು ನೆಲೆಯಾಗಿರುವ ಹಳೆಯ ಬಿಕಾನೆರ್ ಪ್ರದೇಶವು ಹಿಂದೊಮ್ಮೆ ನೀರಿನಿಂದ ಜಲಾವೃತವಾಗಿತ್ತು. ಭಗವಾನ್ ನರಸಿಂಹನು ಭೂಮಿಯ ಮೇಲೆ ಅವತರಿಸಿದ ಸ್ಥಳವನ್ನು ಮುಲ್ತಾನ್ ಎಂದು ಹೇಳಲಾಗುತ್ತದೆ. ಈ ಮುಲ್ತಾನ್ ಸ್ಥಳವೀಗ ಪಾಕಿಸ್ತಾನದಲ್ಲಿದೆ.
ಮುಲ್ತಾನ್‌ನಲ್ಲಿ ನರಸಿಂಹನ ಮುಖವಾಡ ಧರಿಸಿದ ವ್ಯಕ್ತಿಯು ಹಿರಣ್ಯಕಶ್ಯಪು ಮುಖವಾಡ ಧರಿಸಿದ್ದ ವ್ಯಕ್ತಿಯನ್ನ ಹಬ್ಬದ ಆಚರಣೆಯ ವೇಳೆ ಸಂಹರಿಸಿದ ಎಂದು ಹೇಳಲಾಗುತ್ತದೆ. ಹೀಗಾಗಿ ನರಸಿಂಹನ ಮುಖವಾಡವನ್ನು ಮುಲ್ತಾನ್ನಿಂದ ಬಿಕಾನೆರ್ಗೆ ತರಲಾಯಿತು. ಇಲ್ಲಿ ಆ ಮುಖವಾಡವನ್ನು ಪ್ರತಿಷ್ಟಾಪಿಸಿ ಪೂಜಿಸಲು ಆರಂಭಿಸಲಾಯಿತು.
ಭಗವಾನ್ ನರಸಿಂಹ ಮತ್ತು ಹಿರಣ್ಯಕಶ್ಯಪು ಧರಿಸಿದ್ದ ಮುಖವಾಡಗಳನ್ನು ಅಷ್ಟ ಧಾತು ಮತ್ತು ಇತರ ರೀತಿಯಲ್ಲಿ ದೇವಾಲಯಗಳಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ. ಆದರೆ ಈ ದೇವಾಲಯದಲ್ಲಿ ಇರಿಸಲಾಗಿರುವ ಮುಖವಾಡಗಳು 500 ವರ್ಷಗಳಿಗಿಂತಲೂ ಹಳೆಯವು ಎನ್ನಲಾಗಿದೆ.
ನರಸಿಂಹ ಅವತಾರ ಮತ್ತು ಹಿರಣ್ಯಕಶ್ಯಪುನ ವಧೆ ನೋಡಲು ನರಸಿಂಹ ಚತುರ್ದಶಿ ದಿನದಂದು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಾರೆ.
ದೇವಾಲಯದಲ್ಲಿ ಚಿನ್ನದ ಕೆತ್ತನೆಗಳು ಮತ್ತು ಕಲಾಕೃತಿಗಳನ್ನು ಹೊಂದಿರುವ ಚಿತ್ರಕಲೆ ನಿಜವಾಗಿಯೂ ಬೆರಗುಗೊಳಿಸುತ್ತದೆ. ನಾಗ ಸಾಧುಗಳು ಈ ದೇವಾಲಯವನ್ನು ಸ್ಥಾಪಿಸಿದರು. ಕ್ರಮೇಣ ಜನರು ದೇವಾಲಯವನ್ನ ಭವ್ಯವಾಗಿ ನಿರ್ಮಿಸಿದರು. ಈಗ ದೇವಾಲಯ ಪೂರ್ಣವಾಗಿ ಸಿದ್ದಗೊಂಡಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.