ETV Bharat / bharat

ಕಡಿಮೆ ತೂಕದ ಮಹಿಳಾ ಸ್ನೇಹಿ ಲಾಂಗ್ ರೇಂಜ್ ರಿವಾಲ್ವರ್ 'ಪ್ರಬಲ್' ಬಿಡುಗಡೆ..

ದೇಶದ ಮೊದಲ ಲಾಂಗ್ ರೇಂಜ್ ರಿವಾಲ್ವರ್ 'ಪ್ರಬಲ್' ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ. ಈ ರಿವಾಲ್ವರ್‌ನಲ್ಲಿ ಹಲವು ವೈಶಿಷ್ಟ್ಯಗಳಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ, ಅದರ ತೂಕ ತುಂಬಾ ಕಡಿಮೆ ಹಾಗೂ ಅದರ ಫೈರ್‌ಪವರ್ ಹೆಚ್ಚು. ಕಡಿಮೆ ತೂಕದ ಕಾರಣ, ಇದು ಮಹಿಳೆಯರಿಗೆ ತುಂಬಾ ಸೂಕ್ತವೆಂದು ಪರಿಗಣಿಸಲಾಗಿದೆ. 'ಪ್ರಬಲ್​'ನ ಫೀಚರ್​ಗಳ ಬಗ್ಗೆ ತಿಳಿಯೋಣ ಬನ್ನಿ

Long Range Revolver Prabal Launch Today Useful and Friendly for Women
ಕಡಿಮೆ ತೂಕದ ಮಹಿಳಾ ಸ್ನೇಹಿ ಲಾಂಗ್ ರೇಂಜ್ ರಿವಾಲ್ವರ್ 'ಪ್ರಬಲ್' ಬಿಡುಗಡೆ...
author img

By

Published : Aug 19, 2023, 6:59 AM IST

ಕಾನ್ಪುರ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಪ್ರಬಲ್ ರಿವಾಲ್ವರ್ ಸಾಕಷ್ಟು ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಅದರ ಫೀಚರ್​ಗಳು. ಇದನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿರ್ಮಿಸಲಾಗಿದೆ. ಕಾನ್ಪುರದ ಸರ್ಕಾರಿ ಸ್ವಾಮ್ಯದ ಕಂಪನಿ ಅಡ್ವಾನ್ಸಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL) ನಲ್ಲಿ ತಯಾರಿಸಿದ ಪ್ರಬಲ್ ರಿವಾಲ್ವರ್ ಮಹಿಳೆಯರಿಗೆ ತುಂಬಾ ಅನುಕೂಲಕರ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಇದು ತೂಕದಲ್ಲಿ ತುಂಬಾ ಕಡಿಮೆ ಹಾಗೂ ಫೈರ್‌ಪವರ್‌ನಲ್ಲಿ ಹೆಚ್ಚು.

ಪ್ರಬಲ್ ರಿವಾಲ್ವರ್‌ನ ತೂಕ ಎಷ್ಟು?: ಪ್ರಬಲ್ ಹಗುರವಾದ 32 ಬೋರ್ ರಿವಾಲ್ವರ್ ಆಗಿದ್ದು, ಇದು ಮಹಿಳೆಯರಿಗೆ ತುಂಬಾ ಸೂಕ್ತವಾಗಿದೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಕಾರ್ಟ್ರಿಡ್ಜ್‌ಗಳಿಲ್ಲದೇ ಕೇವಲ 700 ಗ್ರಾಂ ತೂಗುತ್ತದೆ. ಇದನ್ನು ಯಾರಾದರೂ ಕೂಡಾ ಆರಾಮವಾಗಿ ಸಾಗಿಸಬಹುದು. ಇದರ ಟ್ರಿಗರ್ ಪುಲ್ ಕೂಡ ತುಂಬಾ ಸುಲಭ. ಇದರ ಭಾರವು ಕಡಿಮೆಯಿ ಇವುದರಿಂದ ಮಹಿಳೆಯರು ಆರಾಮವಾಗಿ ತಮ್ಮ ಕೈಚೀಲದಲ್ಲಿ ಇಟ್ಟುಕೊಳ್ಳಬಹುದು ಮತ್ತು ತಮ್ಮ ಸುರಕ್ಷತೆಗಾಗಿ ಬಳಸಬಹುದು.

ಪ್ರಬಲ್ ರಿವಾಲ್ವರ್‌ನ ಫೈರ್‌ಪವರ್: ಪ್ರಬಲ್ ರಿವಾಲ್ವರ್‌ನ ಫೈರ್‌ಪವರ್ ಬಗ್ಗೆ ತಿಳಿದುಕೊಳ್ಳುವುದಾದರೆ, ಇದು ದೇಶದ ಎಲ್ಲ ರಿವಾಲ್ವರ್‌ಗಳಲ್ಲಿ ಅತ್ಯುನ್ನತವಾಗಿದೆ. ಪ್ರಬಲ್ ತನ್ನ ಗುರಿಯನ್ನು 50 ಮೀಟರ್‌ಗಳವರೆಗೆ ಹೊಡೆಯಬಲ್ಲದು. ಇದು ಇತರ ಎಲ್ಲ ರಿವಾಲ್ವರ್‌ಗಳಿಗೆ ಹೋಲಿಸಿದರೆ, ಎರಡೂವರೆ ಪಟ್ಟು ಹೆಚ್ಚು. ಪ್ರಸ್ತುತ, ದೇಶದ ಯಾವುದೇ ರಿವಾಲ್ವರ್‌ನ ಫೈರ್‌ಪವರ್ 20 ಮೀಟರ್‌ಗಳಿಗಿಂತ ಹೆಚ್ಚಿಲ್ಲ.

ಏನಿದು ಸೈಡ್ ಸ್ವಿಂಗ್ ಸಿಲಿಂಡರ್: ಪ್ರಬಲ್ ಭಾರತದಲ್ಲಿ ತಯಾರಾದ ಮೊದಲ ರಿವಾಲ್ವರ್ ಆಗಿದ್ದು, ಸೈಡ್ ಸ್ವಿಂಗ್ ಸಿಲಿಂಡರ್ ಹೊಂದಿದೆ. ರಿವಾಲ್ವರ್‌ನ ಮೊದಲ ಆವೃತ್ತಿಯಲ್ಲಿ, ಕಾರ್ಟ್ರಿಜ್ಡ್​ಗಳನ್ನು ಸೇರಿಸಲು ಗನ್ ಅನ್ನು ತಿರುಗಿಸಬೇಕಾಗಿತ್ತು. ಆದರೆ, ಈ ರಿವಾಲ್ವರ್‌ನಲ್ಲಿ ಅದನ್ನು ಮಾಡಬೇಕಾಗಿಲ್ಲ.

ನಿರ್ಭಯಾ ಘಟನೆ ನಂತರ ಮಹಿಳೆಯರಿಗಾಗಿ ಈ ವಿಶೇಷ ರಿವಾಲ್ವರ್ ಸಿದ್ಧ: ದೆಹಲಿಯಲ್ಲಿ ನಿರ್ಭಯಾ ಘಟನೆಯ ನಂತರ, ಮಹಿಳೆಯರಿಗಾಗಿ ವಿಶೇಷ ರಿವಾಲ್ವರ್ ಅನ್ನು ತಯಾರಿಸಲಾಯಿತು. ಈ ರಿವಾಲ್ವರ್‌ಗೆ 'ನಿರ್ಭಿಕ್​' ಎಂದು ಹೆಸರಿಡಲಾಗಿದೆ. ಈ ರಿವಾಲ್ವರ್ ಅನ್ನು ಕಾನ್ಪುರದಲ್ಲಿಯೂ ತಯಾರಿಸಲಾಗಿದೆ. ಮಾರ್ಚ್ 18, 2014ರಂದು ತಯಾರಿಸಲಾದ ಈ ರಿವಾಲ್ವರ್‌ನ ಬೆಲೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು.

ನಿರ್ವಹಣೆ ಸುಲಭ, ಮಿಸ್ ಫೈರ್ ಇಲ್ಲ: ಪ್ರಬಲ್ ಅನ್ನು ತಯಾರಿಸಲು ಎಂಐಎಂ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಬಾಹ್ಯಾಕಾಶ ನೌಕೆ, ವಿಮಾನಗಳು ಮತ್ತು ಇತರ ಗಂಭೀರ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಸಣ್ಣ ಶಸ್ತ್ರಾಸ್ತ್ರ ಕಾರ್ಖಾನೆಯ ಜಿಎಂ ರಾಜೀವ್ ಶರ್ಮಾ ಹೇಳಿದರು. ಈ ತಂತ್ರಜ್ಞಾನದ ಬಳಕೆ ಮಾಡಿದ್ದರಿಂದ ಪ್ರಬಲ್‌ನಿಂದ ಮಿಸ್ ಫೈರ್‌ನ ಆಗುವುದಿಲ್ಲ. ಪ್ರಬಲ್​ನಲ್ಲಿ ನಾವು ಅನೇಕ ಸಣ್ಣ ಘಟಕಗಳನ್ನು ಬಳಸಿದ್ದೇವೆ. ಈ ಕಾರಣದಿಂದಾಗಿ ಪ್ರಬಲ್​ನ ಲೈಪ್ ಕೂಡಾ ಇತರ ರಿವಾಲ್ವರ್‌ಗಳಿಗಿಂತ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಮಣ್ಣು ಮತ್ತು ನೀರು ಪರೀಕ್ಷೆಯಲ್ಲಿ ಯಶಸ್ಸು: ಸೇನಾ ಸಿಬ್ಬಂದಿ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿದ್ದಾಗ, ಅವರು ತಮ್ಮ ಶಸ್ತ್ರಾಸ್ತ್ರಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದಕ್ಕಾಗಿ ನಾವು ಪ್ರಬಲ್ ಅನ್ನು ಮಣ್ಣು ಮತ್ತು ನೀರಿನ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಆ ಪರೀಕ್ಷೆಗಳು ಸಂಪೂರ್ಣವಾಗಿ ಯಶಸ್ವಿಗೊಂಡಿವೆ ಎಂದು ಜಿಎಂ ರಾಜೀವ್ ಶರ್ಮಾ ತಿಳಿಸಿದರು.

ಇದನ್ನೂ ಓದಿ: ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ: BSc ವಿದ್ಯಾರ್ಥಿ ಸೇರಿ ಐವರು ಸೆರೆ; 4 ಪಿಸ್ತೂಲ್ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.