ETV Bharat / bharat

Parliament session: ಅಧಿವೇಶನದಲ್ಲಿ ಮಣಿಪುರ ವಿಡಿಯೋ ಗದ್ದಲ.. ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂಡೂಡಿಕೆ - Opposition demand for discussion on Manipur

ಮುಂಗಾರು ಅಧಿವೇಶನ ಆರಂಭವಾಗಿದ್ದು, ಮಣಿಪುರ ಮಹಿಳೆಯರ ವಿಡಿಯೋ ಕುರಿತು ಗದ್ದಲ ಶುರುವಾದ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಲಾಗಿದೆ.

ಮುಂಗಾರು ಅಧಿವೇಶನ
ಮುಂಗಾರು ಅಧಿವೇಶನ
author img

By

Published : Jul 20, 2023, 1:13 PM IST

ನವದೆಹಲಿ: ಇಂದಿನಿಂದ ಆರಂಭವಾಗಿರುವ ಮಳೆಗಾಲದ ಸಂಸತ್​ ಅಧಿವೇಶನದಲ್ಲಿ ಮಣಿಪುರ ಮಹಿಳೆಯರ ಬೆತ್ತಲೆ ವಿಡಿಯೋ ಪ್ರತಿಧ್ವನಿಸಿದ್ದು, ಇದರ ಚರ್ಚೆಗೆ ವಿಪಕ್ಷಗಳು ಒತ್ತಾಯಿಸಿವೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನೂತನ ಸದಸ್ಯರ ಪದಗ್ರಹಣ ಮತ್ತು ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದ ಬಳಿಕ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕಲಾಪ ಆರಂಭವಾದ ಬಳಿಕ ಮಣಿಪುರ ವಿಷಯವನ್ನು ಚರ್ಚೆ ನಡೆಸಲು ಕೋರಿ ಹಲವಾರು ಸಂಸದರು ನೋಟಿಸ್​ ನೀಡಿದರು. ಈ ಬಗ್ಗೆ ಕೇಂದ್ರ ಸರ್ಕಾರ ಗಾಂಭೀರ್ಯ ಪ್ರದರ್ಶಿಸಿಲ್ಲ. ಪ್ರಧಾನಿ ಮೋದಿ ಅವರು ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಆರೋಪಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಈ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಉಭಯ ಸದನಗಳು ಮಧ್ಯಾಹ್ನ ಆರಂಭವಾದ ಬಳಿಕ ಅಧಿವೇಶನ ಇನ್ನಷ್ಟು ಕೋಲಾಹಲ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರಧಾನಿ ಮೋದಿ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರ ರಕ್ಷಣೆಗಾಗಿ ಎಲ್ಲ ರಾಜ್ಯಗಳಲ್ಲಿ ಕಾನೂನು ಬಿಗಿಗೊಳಿಸಿ ಎಂದು ತಾಕೀತು ಮಾಡಿದ್ದಾರೆ.

ಲೋಕಸಭೆಯಲ್ಲಿ ಗದ್ದಲ: ಸದನ ಆರಂಭವಾದ ಬಳಿಕ ಹಾಲಿ ಸದಸ್ಯರ ಶಪಥ ಮತ್ತು ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದ ಬೆನ್ನಲ್ಲೇ ಮಣಿಪುರ ವಿಡಿಯೋ ಕುರಿತು ಪ್ರತಿಪಕ್ಷಗಳು ಕೂಗಲಾರಂಭಿಸಿದರು. ಸದನ ಹಳಿ ನಿಯಂತ್ರಣಕ್ಕೆ ಬಾರದ ಸಲುವಾಗಿ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಇಬ್ಬರು ಹಾಲಿ ಸದಸ್ಯರಿಗೆ ಶಪಥ ಮತ್ತು 11 ಸಂಸದರಿಗೆ ಸಂತಾಪ ಸೂಚಿಸಿದ ನಂತರ ರಾಜ್ಯಸಭೆ ಚೇರ್ಮನ್​​ ಜಗದೀಪ್ ಧನಕರ್ ಅವರು ಕಲಾಪವನ್ನು ಮುಂದೂಡಿದರು.

ಮಣಿಪುರದ ಅಮಾನುಷ ವಿಡಿಯೋ ಕುರಿತು ವಿರೋಧ ಪಕ್ಷಗಳ ಹಲವು ಸಂಸದರು ನೋಟಿಸ್ ನೀಡಿದ್ದು, ಮಹಿಳೆಯರಿಬ್ಬರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ನಿಯಮ 267 ರ ಅಡಿಯಲ್ಲಿ ರಾಜ್ಯಸಭೆಯಲ್ಲಿ ಬ್ಯುಸಿನೆಸ್​ ನೋಟಿಸ್ ನೀಡಿದ್ದಾರೆ. ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್​, ಮಾಣಿಕಂ ಟ್ಯಾಗೋರ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ, ಲೋಕಸಭೆಯಲ್ಲಿ, ಈಶಾನ್ಯ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಚರ್ಚೆಗೆ ಒತ್ತಾಯಿಸಿದರು.

ಸಿಪಿಐ ಸಂಸದ ಬಿನೋಯ್ ವಿಶ್ವಂ, ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಝಾ ಮತ್ತು ಕಾಂಗ್ರೆಸ್ ಸಂಸದ ರಂಜೀತ್ ರಂಜನ್ ಅವರು ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಮೇಲ್ಮನೆಯಲ್ಲಿ ನಿಯಮ 267 ರ ಅಡಿಯಲ್ಲಿ ವ್ಯವಹಾರಿಕ ನೋಟಿಸ್‌ ನೀಡಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮಣಿಪುರ ಸಂಘರ್ಷದ ಚರ್ಚೆಗಳು ನಡೆಯಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಮುಂಗಾರು ಅಧಿವೇಶನವು ಆಗಸ್ಟ್ 11 ರವರೆಗೆ ನಡೆಯಲಿದೆ. 23 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಒಟ್ಟು 17 ಕಲಾಪಗಳು ಇರಲಿವೆ. ದೆಹಲಿ ಸುಗ್ರೀವಾಜ್ಞೆ ಸೇರಿದಂತೆ 31 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ಇದನ್ನೂ ಓದಿ: ಮಣಿಪುರ ಮಹಿಳೆಯರ ಮೇಲಿನ ದುಷ್ಕೃತ್ಯ ಅಮಾನವೀಯ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.