ETV Bharat / bharat

Lok Sabha Election: ಇಂದು ಪ್ರತಿಪಕ್ಷಗಳ ಮಹತ್ವದ ಸಭೆ.. ಪಾಟ್ನಾದಲ್ಲಿ ಬೀಡುಬಿಟ್ಟ ಹಿರಿಯ ನಾಯಕರ ದಂಡು!! - ಸುಶೀಲ್​ ಮೋದಿ ವಾಗ್ದಾಳಿ

Lok Sabha Election: ಬಿಹಾರದ ಪಾಟ್ನಾದಲ್ಲಿ ಪ್ರತಿಪಕ್ಷಗಳ ಏಕತೆಯ ಸಭೆಗೆ ಶುಕ್ರವಾರ ಮಹತ್ವದ ದಿನವಾಗಿದೆ. ವಿರೋಧ ಪಕ್ಷಗಳ ನಾಯಕರು ಒಟ್ಟಿಗೆ ಸೇರುತ್ತಿದ್ದು, ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಹಾಜರಾಗಲಿದ್ದಾರೆ.

Lok Sabha Election  Lok Sabha Election 2024  opposition ahead of meeting in Patna  opposition meeting in Patna  ವಿರೋಧ ಪಕ್ಷಗಳ ಸಭೆ  ಪಾಟ್ನಾದಲ್ಲಿ ಬೀಡುಬಿಟ್ಟ ಹಿರಿಯ ನಾಯಕರ ದಂಡು  ಪ್ರತಿಪಕ್ಷಗಳ ಏಕತೆಯ ಸಭೆ  ಮುಂಬರುವ ಲೋಕಸಭೆ ಚುನಾವಣೆ  ಬಿಹಾರದ ರಾಜಧಾನಿ ಪಾಟ್ನಾ  ವಿರೋಧ ಪಕ್ಷದ ಹಿರಿಯ ನಾಯಕರು  ಸುಶೀಲ್​ ಮೋದಿ ವಾಗ್ದಾಳಿ  ಸಭೆಯಿಂದ ಅಂತರ ಕಾಯ್ದುಕೊಂಡ ಪಕ್ಷಗಳು
ಪಾಟ್ನಾದಲ್ಲಿ ಬೀಡುಬಿಟ್ಟ ಹಿರಿಯ ನಾಯಕರ ದಂಡು!!
author img

By

Published : Jun 23, 2023, 9:52 AM IST

ಪಾಟ್ನಾ, ಬಿಹಾರ: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಸಂಬಂಧಿಸಿದಂತೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು (ಶುಕ್ರವಾರ) ವಿರೋಧ ಪಕ್ಷಗಳ ಸಭೆ ನಡೆಯಲಿದೆ. ರಾಜಕೀಯ ಪಕ್ಷಗಳ ಸಭೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಸಭೆಯಲ್ಲಿ ಪಾಲ್ಗೊಳ್ಳಲು ಮುಖಂಡರ ದಂಡೇ ಆಗಮಿಸುತ್ತಿದೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಎಂಕೆ ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಈಗಾಗಲೇ ಪಾಟ್ನಾದಲ್ಲಿ ಬೀಡುಬಿಟ್ಟಿದ್ದಾರೆ.

ಇನ್ನು ಪಾಟ್ನಾ ನಗರಕ್ಕೆ ಬೆಳಗ್ಗಿನಿಂದಲೇ ವಿರೋಧ ಪಕ್ಷದ ಹಿರಿಯ ನಾಯಕರು ಲಗ್ಗೆ ಇಡುತ್ತಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ, ಖರ್ಗೆ ಮತ್ತು ಹೇಮಂತ್ ಸೋರೆನ್, ಶರದ್ ಪವಾರ್ ಸೇರಿದಂತೆ ಅನೇಕ ನಾಯಕರು ಪಾಟ್ನಾಕ್ಕೆ ದೌಡಾಯಿಸಿದ್ದಾರೆ.

ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆರ್‌ಜೆಡಿ, ಜೆಡಿಯು ಸೇರಿದಂತೆ 17-18 ಪಕ್ಷಗಳು ಒಟ್ಟಿಗೆ ಸೇರಿ ತಂತ್ರ ರೂಪಿಸಲಿವೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಗುರುವಾರವೇ ಪಾಟ್ನಾ ತಲುಪಿದ್ದಾರೆ. ಇಂದು ರಾಹುಲ್ ಗಾಂಧಿ, ಖರ್ಗೆ, ಶರದ್ ಪವಾರ್, ಉದ್ಧವ್ ಠಾಕ್ರೆ ಅವರಂತಹ ಹಿರಿಯ ನಾಯಕರು ಇಂದು ನಗರಕ್ಕೆ ಭೇಟಿ ನೀಡಿದ್ದಾರೆ. ಈ ಸಭೆಯ ನಂತರ, 2024 ರ ಲೋಕಸಭೆ ಚುನಾವಣೆಗೆ ಯಾವ ರೀತಿ ರಾಜಕೀಯ ಚಳುವಳಿ ನಡೆಯಲಿದೆ ಎಂಬ ಚಿತ್ರಣವು ಬಹಳ ಮಟ್ಟಿಗೆ ಸ್ಪಷ್ಟವಾಗಲಿದೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸಹ ಇಂದು ಬೆಳಗ್ಗೆ ಪಾಟ್ನಾ ತಲುಪಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದಿಂದ ನೇರವಾಗಿ ರಾಜ್ಯ ಅತಿಥಿ ಗೃಹಕ್ಕೆ ತೆರಳಿದರು. ಇದಕ್ಕೂ ಮುನ್ನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸಚಿವರಾದ ಜಮಾ ಖಾನ್ ಮತ್ತು ರಮಾನಂದ್ ಯಾದವ್ ಅವರು ಒಮರ್ ಅಬ್ದುಲ್ಲಾ ಅವರನ್ನು ಸ್ವಾಗತಿಸಿದರು.

ಬೆಳಗ್ಗೆ 11ರಿಂದ ಸಭೆ: ಪಾಟ್ನಾದ ಬಿಹಾರ ಸಿಎಂ ಅಧಿಕೃತ ನಿವಾಸದಲ್ಲಿರುವ ನೆಕ್ ಸಂವಾದ್ ಕೊಠಡಿಯಲ್ಲಿ ಸಭೆ ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ ಬೆಳಗ್ಗೆ 11ರಿಂದ ಸಭೆ ಆರಂಭವಾಗಲಿದೆ. ಈ ಸಭೆ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟನಾ ಭಾಷಣದೊಂದಿಗೆ ಕಾರ್ಯ ಕ್ರಮ ಆರಂಭವಾಗಲಿದ್ದು, ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಲಿದ್ದಾರೆ. ಬಳಿಕ ಉಳಿದ ನಾಯಕರು ಭಾಷಣ ಮಾಡಲಿದ್ದಾರೆ. ಕೊನೆಯಲ್ಲಿ ವಿಪಕ್ಷ ನಾಯಕರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.

  • #WATCH | Nationalist Congress Party (NCP) chief Sharad Pawar leaves for Bihar's Patna from Pune to attend #OppositionMeeting

    We are meeting to discuss some important issues of the country and decide the future course of action. Manipur issue will also be discussed, he says pic.twitter.com/xNzsAccnTq

    — ANI (@ANI) June 23, 2023 " class="align-text-top noRightClick twitterSection" data=" ">

ಸಭೆಯಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ಇಲ್ಲ: ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆಯಲ್ಲಿ ಸೀಟು ಹಂಚಿಕೆ ಮತ್ತು ಪ್ರಧಾನಿ ಮುಖದ ಬಗ್ಗೆ ಯಾವುದೇ ಚರ್ಚೆ ಇಲ್ಲ. ನಿತೀಶ್ ಅವರ ಆಪ್ತ ಸಚಿವ ವಿಜಯ್ ಚೌಧರಿ ಈ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಅಭಿಯಾನ ಆರಂಭವಾಗಿದ್ದು, ಪರಿಣಾಮಕಾರಿಯಾಗಿರಲಿದೆ ಎನ್ನುತ್ತಾರೆ.

2024 ರ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲು ಮತ್ತು ನರೇಂದ್ರ ಮೋದಿ ಸರ್ಕಾರವನ್ನು ಹೊರಹಾಕಲು ಎಲ್ಲಾ ಪಕ್ಷಗಳ ನಡುವೆ ಒಮ್ಮತವನ್ನು ಹೇಗೆ ಮೂಡಲಿದೆ ಎಂಬ ಕಾರಣಕ್ಕಾಗಿ ಈ ಸಭೆಯನ್ನು ಕರೆಯಲಾಗಿದೆ. ಎರಡನೇ ಸಭೆಯಲ್ಲಿ ಸೀಟು ಹಂಚಿಕೆ ಹಾಗೂ ಪ್ರಧಾನಿ ಮುಖಾಮುಖಿ ಕುರಿತು ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಭೆಯಿಂದ ಅಂತರ ಕಾಯ್ದುಕೊಂಡ ಪಕ್ಷಗಳು: 17-18 ಪಕ್ಷಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ತಮ್ಮದೇ ಆದ ಸ್ಥಾನಮಾನ ಹೊಂದಿರುವ ಇತರ ದೊಡ್ಡ ಪಕ್ಷಗಳಿವೆ. ಆ ಪಕ್ಷಗಳು, ಯುಪಿಯಲ್ಲಿ ಮಾಯಾವತಿ, ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್, ತೆಲುಗು ದೇಶಂ ಪಕ್ಷ. ತೆಲಂಗಾಣದಲ್ಲಿ ಕೆಸಿಆರ್ ಅವರ ಬಿಆರ್​ಎಸ್​, ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ, ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಜೆಡಿಎಸ್​, ನವೀನ್ ಪಟ್ನಾಯಕ್ ಅವರ ಬಿಜೆಡಿ ಮತ್ತು ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ ಸೇರಿದಂತೆ ಇತರ ದೊಡ್ಡ ಪಕ್ಷಗಳು ಈ ಸಭೆಯಿಂದ ಅಂತರ ಕಾಯ್ದುಕೊಂಡಿವೆ.

ಸುಶೀಲ್​ ಮೋದಿ ವಾಗ್ದಾಳಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಸುಶೀಲ್ ಮೋದಿ ಅವರು ಪಾಟ್ನಾದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಯನ್ನು ಗುರಿಯಾಗಿಸಿದ್ದಾರೆ. ನಿತೀಶ್ ಕುಮಾರ್ ಆಯೋಜಿಸಿದ್ದ ಮದುವೆ ಮೆರವಣಿಗೆಯಲ್ಲಿ ಎಲ್ಲರೂ ವರರಾಗಿದ್ದಾರೆ. ಆದ್ರೆ ಈ ಮದುವೆ ಸಮಾರಂಭದಲ್ಲಿ ಜನರೇ ಇಲ್ಲ. ನಿತೀಶ್ ಕುಮಾರ್ ಇಂತಹ ಮದುವೆ ಮೆರವಣಿಗೆಯನ್ನು ಆಯೋಜಿಸಿದ್ದು, ಎಲ್ಲರೂ ತಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ಚುನಾವಣೆಯ ಗೆಲುವಿನ ನಂತರ ಕಾಂಗ್ರೆಸ್‌ನ ಆತ್ಮವಿಶ್ವಾಸ ಹೆಚ್ಚಾಗಿದೆ. ಅದು ಪ್ರಾದೇಶಿಕ ಪಕ್ಷಗಳನ್ನು ತನ್ನ ಪಾಲಕರನ್ನಾಗಿ ನೋಡಲಾರಂಭಿಸಿದೆ. ಆದರೆ, ಕಾಂಗ್ರೆಸ್‌ಗೆ ಅದೇ ರೀತಿ ಮಾಡಲು ಪ್ರಾದೇಶಿಕ ಪಕ್ಷಗಳು ಸಿದ್ಧವಿಲ್ಲ. ತಮ್ಮ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಪ್ರವೇಶ ನೀಡಲು ಅವರು ಸಿದ್ಧರಿಲ್ಲ. ಅವರು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ಇಂತಹ ಸಭೆಗಳು ಹಲವು ಬಾರಿ ನಡೆದಿದ್ದರೂ ಇದರಿಂದ ಏನೂ ಪ್ರಯೋಜನವಾಗಿಲ್ಲ ಎಂದರು.

ಓದಿ: Lok Sabha Election: ಶುಕ್ರವಾರ ವಿರೋಧ ಪಕ್ಷಗಳ ಸಭೆ.. ಪಾಟ್ನಾದಲ್ಲಿ ಬೀಡುಬಿಟ್ಟ ಮಹಾ ನಾಯಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.