ETV Bharat / bharat

Lok Sabha Election 2024: ಶಿರೋಮಣಿ ಅಕಾಲಿದಳ ಜೊತೆ ಮೈತ್ರಿ ಸದ್ಯಕ್ಕಿಲ್ಲ: ವಿಜಯ್ ರೂಪಾನಿ

author img

By

Published : Jul 15, 2023, 9:56 PM IST

ಪಂಜಾಬ್​ನಲ್ಲಿ ಶಿರೋಮಣಿ ಅಕಾಲಿಕದಳದ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಗುಸುಗುಸು ಮಧ್ಯೆಯೇ ರಾಜ್ಯದ ಉಸ್ತುವಾರಿ ವಿಜಯ್ ರೂಪಾನಿ ಅವರು ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದಿದ್ದಾರೆ.

ವಿಜಯ್ ರೂಪಾನಿ
ವಿಜಯ್ ರೂಪಾನಿ

ಚಂಡೀಗಢ: ಪಂಜಾಬ್​ನಲ್ಲಿ ಹಳೆಯ ಮಿತ್ರರಾದ ಶಿರೋಮಣಿ ಅಕಾಲಿಕದಳ ಮತ್ತು ಬಿಜೆಪಿ ಮತ್ತೆ ಒಂದಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪಂಜಾಬ್ ಉಸ್ತುವಾರಿ ವಿಜಯ್ ರೂಪಾನಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದ ನಿಲುವು ಸ್ಪಷ್ಟವಾಗಿದೆ. ಸದ್ಯಕ್ಕೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ. ಎಲ್ಲವನ್ನೂ ಕಾಲವೇ ನಿರ್ಣಯಿಸಲಿದೆ ಎಂದು ಹೇಳಿದರು.

ಗುಜರಾತ್‌ ರೀತಿ ಪಂಜಾಬ್‌ ಕೂಡ ತನ್ನ ಕಳೆದುಹೋದ ವೈಭವವನ್ನು ಮರಳಿ ಪಡೆಯಲು ವೋಟ್‌ ಬ್ಯಾಂಕ್‌ ರಾಜಕಾರಣದಿಂದ ಅಭಿವೃದ್ಧಿ ರಾಜಕಾರಣಕ್ಕೆ ಬದಲಾಗಬೇಕಿದೆ. ಹೀಗಾಗಿ ಯಾವುದೇ ನಮ್ಮೊಂದಿಗೆ ಯಾವುದೇ ಪಕ್ಷಗಳ ಬಂದಲ್ಲಿ ಸ್ವಾಗತ. ಸೀಟು ಹಂಚಿಕೆ ವಿಚಾರದಲ್ಲಿ ಹೆಚ್ಚಿನ ಪಾಲು ನಮ್ಮದಾಗಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ಗೆ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿರುವ ಸುನೀಲ್ ಕುಮಾರ್ ಜಾಖರ್ ಅವರನ್ನು ಪಂಜಾಬ್ ಬಿಜೆಪಿ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಸಹಜ ಪ್ರಕ್ರಿಯೆ. ರಾಜ್ಯದಲ್ಲಿ ಬಿಜೆಪಿಯನ್ನು ಭದ್ರಗೊಳಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಜನರು ಆಪ್​ ಆಡಳಿತದ ಬಗ್ಗೆ ನಿರಾಶೆರಾಗಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ ಬಿಜೆಪಿಯನ್ನು ಮುಂದೆ ಅಧಿಕಾರಕ್ಕೆ ತರಲಿದ್ದಾರೆ ಎಂದು ಅವರು ಹೇಳಿದರು.

ಸುನೀಲ್​ ಜಾಖರ್​ ಪ್ರಭಾವಿ ನಾಯಕ: ಕಾಂಗ್ರೆಸ್​ನಿಂದ ಪರಿತ್ಯಕ್ತವಾಗಿರುವ ಸುನೀಲ್​​ ಜಾಖರ್​ ರಾಜ್ಯದ ಪ್ರಭಾವಿ ನಾಯಕ. ವರ್ಷದ ಹಿಂದೆ ಅವರು ಬಿಜೆಪಿ ಸೇರಿದ್ದರು. ಜಾಖರ್ ಅವರ ತಂದೆ ಪಂಜಾಬ್ ಮತ್ತು ದೇಶದ ಸೇವಕರಾಗಿದ್ದರು. ಹೀಗಾಗಿ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ದೊಡ್ಡ ಹೊಣೆಗಾರಿಕೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ಪಕ್ಷವನ್ನು ವಿಸ್ತರಿಸುವ ಜವಾಬ್ದಾರಿಯನ್ನು ಹೈಕಮಾಂಡ್​ ಅವರಿಗೆ ವಹಿಸಿದೆ. ಅವರು ಅನುಭವಿ ರಾಜಕಾರಣಿಯಾಗಿದ್ದು, ಶಾಸಕರಾಗಿ ಮತ್ತು ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಅನುಭವವು ಪಕ್ಷಕ್ಕೆ ಪ್ರಯೋಜನವನ್ನು ತರಲಿದೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯದಲ್ಲಿ ಸಮಯವೇ ಉತ್ತರ: ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಮೈತ್ರಿ ಕುರಿತ ಪ್ರಶ್ನೆಗೆ ಉತ್ತರಿಸಿ, ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು 2 ಬಾರಿ ಬಹಿರಂಗವಾಗಿ ಹೇಳಿದ್ದೆ. ಈ ಕುರಿತು ಸ್ಪಷ್ಟನೆಯನ್ನೂ ನೀಡಿದ್ದೇನೆ. ಆದರೆ, ಪಕ್ಷದ ಅಧ್ಯಕ್ಷ ಸುನೀಲ್ ಜಾಖರ್ ಅವರು ಮೈತ್ರಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಬಿಜೆಪಿಯು ಅಕಾಲಿದಳದೊಂದಿಗೆ ಮರು ಮೈತ್ರಿಯನ್ನು ವಿರೋಧಿಸುತ್ತಿಲ್ಲ ಎಂದರ್ಥ ಎಂದರು.

ಮೈತ್ರಿಯಾದಲ್ಲಿ ಹೆಚ್ಚಿನ ಸೀಟು ಹಂಚಿಕೆಗೆ ಬೇಡಿಕೆ ಇಡಲಿದೆಯಾ ಎಂಬ ಪ್ರಶ್ನೆಗೆ, ಮೈತ್ರಿಯನ್ನು ವಿರೋಧಿಸುತ್ತಿಲ್ಲ ಎಂದಾದ ಮೇಲೆ ಸೀಟು ಹಂಚಿಕೆಯಲ್ಲಿ ಹೆಚ್ಚಿನ ಪಾಲು ಬಯಸುತ್ತಿದೆ ಅಂತಲ್ಲ. ಸದ್ಯಕ್ಕೆ ಅಕಾಲಿದಳದೊಂದಿಗೆ ಯಾವುದೇ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವ ಮಾತುಕತೆಗಳು ನಡೆದಿಲ್ಲ. ರಾಜಕೀಯದಲ್ಲಿ ಸಮಯವೇ ಎಲ್ಲದಕ್ಕೂ ಉತ್ತರ ನೀಡಲಿದೆ. ಆದರೆ ಪಕ್ಷದ ನಿಲುವು ಇಲ್ಲಿಯವರೆಗೆ ಸ್ಪಷ್ಟವಾಗಿದೆ ಎಂದು ಮೈತ್ರಿಯ ಬಗ್ಗೆ ನಿಖರತೆ ನೀಡಲಿಲ್ಲ.

ಇದನ್ನೂ ಓದಿ: ಪ್ರಧಾನಿ ಮೋದಿ, ಯುಎಇ ಅಧ್ಯಕ್ಷ ನಹ್ಯಾನ್ ದ್ವಿಪಕ್ಷಿಯ ಮಾತುಕತೆ; ವ್ಯಾಪಾರ ಒಪ್ಪಂದಗಳಿಗೆ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.