ETV Bharat / bharat

ಕೋವಿಡ್​ ಅಬ್ಬರ: ನಾಗ್ಪುರದಲ್ಲಿ ಮಾರ್ಚ್​ 15ರಿಂದ ಸಂಪೂರ್ಣ ಲಾಕ್​ಡೌನ್​ - lockdown in Nagpur from March 15

ಮಾ.15ರಿಂದ ಮಾ.21ರ ವರೆಗೆ ನಾಗ್ಪುರ ನಗರ ಪ್ರದೇಶದಲ್ಲಿ ಲಾಕ್​ಡೌನ್​ ಜಾರಿಯಲ್ಲಿರಲಿದೆ ಎಂದು ನಾಗ್ಪುರ ಉಸ್ತುವಾರಿ ನಿತಿನ್​ ರಾವತ್​ ತಿಳಿಸಿದ್ದಾರೆ.

lockdown in Nagpur
ನಾಗ್ಪುರದಲ್ಲಿ ಮಾರ್ಚ್​ 15ರಿಂದ ಸಂಪೂರ್ಣ ಲಾಕ್​ಡೌನ್​
author img

By

Published : Mar 11, 2021, 1:31 PM IST

ನಾಗ್ಪುರ: ಮತ್ತೆ ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ನಾಗ್ಪುರದಲ್ಲಿ ಮಾರ್ಚ್​ 15ರಿಂದ ಸಂಪೂರ್ಣ ಲಾಕ್​ಡೌನ್​ ಘೋಷಿಸಲಾಗಿದೆ.

ಮಾ.15ರಿಂದ ಮಾ.21ರ ವರೆಗೆ ನಾಗ್ಪುರ ನಗರ ಪ್ರದೇಶದಲ್ಲಿ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಆಹಾರ, ಔಷಧ ಸೇರಿದಂತೆ ಅಗತ್ಯ ಸೇವೆಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ನಾಗ್ಪುರ ಉಸ್ತುವಾರಿ ನಿತಿನ್​ ರಾವತ್​ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೊನಾ ಉಪಟಳ.. 2.52 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ

ರಾಜ್ಯದಲ್ಲಿ ಕೊರೊನಾ ಕೇಸ್​ಗಳು ಕಡಿಮೆಯಾಗಿತ್ತು. ಆದರೆ, ಕೆಲ ದಿನಗಳಿಂದ ಮತ್ತೆ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಈಗಾಗಲೇ ಕೆಲವು ನಗರಗಳಲ್ಲಿ ಭಾಗಶಃ ಲಾಕ್​ಡೌನ್​ ಹೇರಲಾಗಿದೆ. ನಿನ್ನೆ ದೇಶದಲ್ಲಿ 22,854 ಕೋವಿಡ್​ ಪ್ರಕರಣಗಳು ಪತ್ತೆಯಾಗಿತ್ತು. ಈ ಪೈಕಿ ಮಹಾರಾಷ್ಟ್ರದಲ್ಲೇ 13,659 ಕೇಸ್​ಗಳು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.