ಮುಂಬೈ: ಭಾರತದ ಆರ್ಥಿಕ ಚೇತರಿಕೆ ಇನ್ನೂ ತೊಂದರೆಯಲ್ಲೇ ಇದೆ. ನಿಧಾನವಾಗಿ ಚೇತರಿಕೆಯ ಹಾದಿ ಹಿಡಿದಿರುವ ಜಿಡಿಪಿಗೆ ಕೋವಿಡ್ 19 ಮತ್ತಷ್ಟು ಹೊಡೆತ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕ ಬ್ರೋಕರೇಜ್ ಎಚ್ಚರಿಕೆ ನೀಡಿದೆ.
ದೇಶದಲ್ಲಿ ದಾಖಲಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಆರುಪಟ್ಟು ಹೆಚ್ಚಳವಾಗಿದೆ.10-20 ಸಾವಿರದ ಆಸುಪಾಸಿನಲ್ಲಿದ್ದ ಕೊರೊನಾ ಪಾಸಿಟಿವ್ ಪೀಡಿತರ ಸಂಖ್ಯೆ ಈಗ 1.03 ಲಕ್ಷಕ್ಕೆ ಏರಿಕೆ ಕಂಡಿದೆ. ಇಲ್ಲಿಯವರೆಗೂ ಸ್ಥಳೀಯ ರಾಜ್ಯ ಸರ್ಕಾರಗಳು ಅಲ್ಲಿಲ್ಲ ಅಂದರೆ ಕೊರೊನಾ ಹಾವಳಿ ಹೆಚ್ಚಾಗಿರುವ ಕಡೆಗಳೆಲ್ಲೆಲ್ಲ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಒಂದೊಮ್ಮೆ ಈ ಪ್ರಮಾಣ ಮತ್ತಷ್ಟು ಹೆಚ್ಚಾದರೆ ದೇಶವ್ಯಾಪಿ ಲಾಕ್‌ಡೌನ್ ಘೋಷಣೆ ಮಾಡಬಹುದು ಆಗ ಬೆಳವಣಿಗೆಯ ಪ್ರಕ್ರಿಯೆಯ ಮೇಲೆ ಆಳವಾದ ಪರಿಣಾಮ ಬೀರಬಹುದು, ಅದು ಇನ್ನೂ ಆರಂಭವಾಗಿಲ್ಲ ಎಂದು ಅಮೆರಿಕದ ಬ್ರೋಕರೇಜ್ ಹೇಳಿದೆ.
ಇದನ್ನೂ ಓದಿ: ಕೋವಿಡ್ ಉಲ್ಬಣ: ಮುಂದಿನ 4 ವಾರ ಭಾರತಕ್ಕೆ ಬಹಳ ನಿರ್ಣಾಯಕ ಎಂದ ಕೇಂದ್ರ!
"ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ನಿಧಾನವಾಗಿ ಚೇತರಿಕೆ ಕಾಣುತ್ತಿರುವ ಆರ್ಥಿಕತೆ ಮೇಲೆ ಆಳವಾದ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ತಿಂಗಳ ರಾಷ್ಟ್ರೀಯ ಲಾಕ್‌ಡೌನ್ ವಾರ್ಷಿಕ ಜಿಡಿಪಿಯ 100-200 ಮೂಲ ದರದಷ್ಟು ವೆಚ್ಚವಾಗುತ್ತದೆ ಎಂದು ನಾವು ಅಂದಾಜು ಮಾಡುತ್ತೇವೆ. ಇದು ಹಣಕಾಸಿನ ಅಪಾಯಗಳನ್ನು ಸಹ ಉಲ್ಬಣಗೊಳಿಸುವಂತೆ ಮಾಡುತ್ತದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ ಎಂದು ಅಮೆರಿಕ ಹೇಳಿದೆ.
ಹೆಚ್ಚಿನ ಆರ್ಥಿಕ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್ -19 ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು, ರಾತ್ರಿ ಕರ್ಫ್ಯೂಗಳು ಮತ್ತು ಸ್ಥಳೀಯ ಲಾಕ್‌ಡೌನ್‌ಗಳನ್ನು ಹೇರುವ ಮೂಲಕ ಕೊರೊನಾ ಹರಡುವಿಕೆಯನ್ನ ನಿಯಂತ್ರಣ ಮಾಡಬಹುದು ಎಂದು ಬೋಫಾ ಸೆಕ್ಯುರಿಟೀಸ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.