ಹೈದರಾಬಾದ್/ಶಿಮ್ಲಾ: ತೆಲಂಗಾಣದ ಕರೀಂನಗರದ ಚಿಗುರುಮಾಡಿ ವಲಯದ ಚಿನ್ನಮುಲ್ಕನೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಕಾರು ಕೃಷಿ ಬಾವಿಯೊಳಗೆ ಬಿದ್ದ ಘಟನೆ ನಡೆದಿದೆ.
ಜಮೀನು ಕೆಲಸಕ್ಕೆ ಹೋಗಿದ್ದ ರೈತನೋರ್ವ ಕೃಷಿ ಬಾವಿಯೊಳಗಿನ ಮೋಟರ್ ತೆಗೆಯಲು ಹೋಗಿದ್ದ ಸಂದರ್ಭದಲ್ಲಿ ಬಾವಿಯೊಳಗೆ ಕಾರು ಇರುವುದನ್ನು ನೋಡಿದ್ದಾನೆ. ತಕ್ಷಣವೇ ಪಕ್ಕದ ಹೊಲದಲ್ಲಿದ್ದವರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಕಾರು ಹೊರತೆಗೆಯುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳಕ್ಕೆ ಎನ್ಡಿಆರ್ಎಫ್ ತಂಡವೂ ತಲುಪಿದ್ದು, ಕಾರ್ಯಾಚರಣೆ ನಡೆಸಿದರು. ಸ್ಥಳೀಯರು ಹೇಳುವ ಪ್ರಕಾರ ಕಾರಿನಲ್ಲಿ ಮೂವರು ಇದ್ದರು.
ಮತ್ತೊಂದು ಘಟನೆಯಲ್ಲಿ, ಶಿಮ್ಲಾದ ರಸ್ತೆಯೊಂದರಲ್ಲಿ ಸರಕು ಹೊತ್ತು ಸಾಗುತ್ತಿದ್ದ ಟ್ರಕ್ವೊಂದು 400 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಇದರ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ. ಈ ವೇಳೆ ಟ್ರಕ್ನಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾತ್ರಿ ತಿರುಗಾಡುವ ನಿಮ್ಮ ಹೆಣ್ಣು ಮಕ್ಕಳನ್ನು ಪ್ರಶ್ನಿಸಿ, ಸರ್ಕಾರವನ್ನಲ್ಲ: ಗೋವಾ ಸಿಎಂ