ETV Bharat / bharat

ಬಿರುಸಾಗಿ ಸಾಗಿದೆ ಮಧ್ಯಪ್ರದೇಶ ಉಪ ಚುನಾವಣೆ: 28 ವಿಧಾನಸಭಾ ಸ್ಥಾನಗಳಿಗೆ ಮತದಾನ

ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಇದೇ ನವೆಂಬರ್​ 10 ರಂದು ಉಪ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇದುವರೆಗೂ ಶೇ 11.43 ರಷ್ಟು ಮತದಾನವಾಗಿದೆ.

elections
ಮಧ್ಯಪ್ರದೇಶ ಉಪ ಚುನಾವಣೆ
author img

By

Published : Nov 3, 2020, 10:29 AM IST

Updated : Nov 3, 2020, 10:49 AM IST

ಭೂಪಾಲ್​:ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

elections
ಮಧ್ಯಪ್ರದೇಶ ಉಪ ಚುನಾವಣೆ

ಹಿಂದಿನ ಕಾಂಗ್ರೆಸ್ ಸರ್ಕಾರದ 22 ಶಾಸಕರು 2020 ರ ಮಾರ್ಚ್​ನಲ್ಲಿ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆ ಈ ಉಪಚುನಾವಣೆ ನಡೆಯುತ್ತಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ನಾಯಕತ್ವ ಮಧ್ಯಪ್ರದೇಶದಲ್ಲಿ 15 ತಿಂಗಳ ಕಮಲ್ ನಾಥ್ ಸರ್ಕಾರವನ್ನ ಉರುಳಿಸಿದ್ದರು.

ನಂತರ ಪುನಃ ಮೂವರು ಕಾಂಗ್ರೆಸ್​ ಎಂಎಲ್​ಎಗಳು ಬಿಜೆಪಿ ಸೇರಿದ ಹಿನ್ನೆಲೆ ಪಕ್ಷ ತೊರೆದ ಶಾಸಕರ ಸಂಖ್ಯೆ 25 ಕ್ಕೇರಿತು. ನಂತರ ಮೂರು ಜನ ಹಾಲಿ ಸದಸ್ಯರು ಮರಣ ಹೊಂದಿದ್ದರು. ಹೀಗಾಗಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲು ಕಾರಣವಾಯ್ತು. ಇದುವರೆಗೂ ಮಧ್ಯಪ್ರದೇಶದಲ್ಲಿ ಶೇ 11.43 ರಷ್ಟು ಮತದಾನವಾಗಿದೆ.

Last Updated : Nov 3, 2020, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.