ETV Bharat / bharat

Liquor Prohibition: ತಮಿಳುನಾಡಿನಲ್ಲಿ ನಾಳೆಯಿಂದ 500 ಮದ್ಯದಂಗಡಿಗಳು ಬಂದ್ - 500 ಮದ್ಯದ ಅಂಗಡಿಗಳನ್ನು ಮುಚ್ಚಲು ತಮಿಳುನಾಡು ಸರ್ಕಾರ

ತಮಿಳುನಾಡಿನಲ್ಲಿ ಹಂತ ಹಂತವಾಗಿ ಮದ್ಯ ಮಾರಾಟ ನಿಷೇಧ ಮಾಡಲಾಗುವುದು ಎಂದು ಆಡಳಿತಾರೂಢ ಡಿಎಂಕೆ ಪಕ್ಷವು ಚುನಾವಣಾ ಸಮಯದಲ್ಲಿ ಮತದಾರರಿಗೆ ಭರವಸೆ ನೀಡಿತ್ತು.

TASMAC to shut 500 liquor outlets in Tamil Nadu
Liquor Prohibition: ತಮಿಳುನಾಡಿನಲ್ಲಿ ನಾಳೆಯಿಂದ 500 ಮದ್ಯದಂಗಡಿ ಶಾಶ್ವತ ಕ್ಲೋಸ್
author img

By

Published : Jun 21, 2023, 7:23 PM IST

ಚೆನ್ನೈ : ರಾಜ್ಯದಲ್ಲಿರುವ 500 ಮದ್ಯದ ಅಂಗಡಿಗಳನ್ನು ಮುಚ್ಚಲು ತಮಿಳುನಾಡು ಸರ್ಕಾರ ತೀರ್ಮಾನಿಸಿದೆ. ಜೂನ್ 22 ರಿಂದ ಆರಂಭಗೊಂಡು 500 ಮದ್ಯದ ಮಳಿಗೆಗಳನ್ನು ಮುಚ್ಚಲಾಗುವುದು ಎಂದು ತಮಿಳು ನಾಡು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆಯಾಗಿರುವ ತಮಿಳುನಾಡು ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ (TASMAC) ಹೇಳಿದೆ. ರಾಜ್ಯದಲ್ಲಿ 500 ಮದ್ಯದ ಮಳಿಗೆಗಳನ್ನು ಗುರುತಿಸಿದ್ದು, ಏಪ್ರಿಲ್ 20, 2023 ರಂದು ಹೊರಡಿಸಲಾದ ಸರ್ಕಾರದ ಆದೇಶದ ಆಧಾರದನ್ವಯ ಗುರುವಾರ (ಜೂನ್ 22) ದಿಂದ ಮಳಿಗೆಗಳನ್ನು ಮುಚ್ಚಲು ಪ್ರಾರಂಭಿಸುವುದಾಗಿ TASMAC ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಬುಧವಾರದ ಪ್ರಕಟಣೆಯ ಪ್ರಕಾರ, ಚೆನ್ನೈ ವಲಯದ ಒಟ್ಟು 905 ಅಂಗಡಿಗಳಲ್ಲಿ 138 ಅಂಗಡಿಗಳನ್ನು ಮುಚ್ಚಲಾಗುವುದು. ಉತ್ತರ ಚೆನ್ನೈ ಮತ್ತು ಮಧ್ಯ ಚೆನ್ನೈ ಪ್ರದೇಶಗಳ ತಲಾ 20 ಅಂಗಡಿಗಳು, ದಕ್ಷಿಣ ಚೆನ್ನೈನಲ್ಲಿ 21, ಕಾಂಚೀಪುರಂ ಉತ್ತರದಲ್ಲಿ 15, ಕಾಂಚೀಪುರಂ ದಕ್ಷಿಣದಲ್ಲಿ 16, ತಿರುವಳ್ಳೂರ್ ಪೂರ್ವದಲ್ಲಿ 32 ಮತ್ತು ತಿರುವಳ್ಳೂರ್ ಪಶ್ಚಿಮದಲ್ಲಿ 14 ಅಂಗಡಿಗಳು ಸೇರಿವೆ.

ಮಧುರೈ ಪ್ರದೇಶದ ಒಟ್ಟು 1,345 ಅಂಗಡಿಗಳ ಪೈಕಿ ಮಧುರೈ (ಉತ್ತರ)ನಲ್ಲಿ ಒಂಬತ್ತು, ಮಧುರೈ (ದಕ್ಷಿಣ) 12, ದಿಂಡಿಗಲ್​​ನಲ್ಲಿನ 15, ಶಿವಗಂಗೆಯ 14, ರಾಮನಾಡ್‌ನ 8, ವಿರುದುನಗರದ 17, ತಿರುನೆಲ್ವೇಲಿಯ 13, ಟುಟಿಕೋರಿನ್​ನ 16, ಕನ್ಯಾಕುಮಾರಿಯ 12 ಮತ್ತು ಥೇಣಿಯ 9 ಅಂಗಡಿಗಳು ಸೇರಿದಂತೆ 125 ಅಂಗಡಿಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಅದೇ ರೀತಿ ತಿರುಚಿರಾಪಳ್ಳಿ ಪ್ರದೇಶದಲ್ಲಿ ಈಗಿರುವ 1,145 ರಲ್ಲಿ 100 ಅಂಗಡಿಗಳನ್ನು ಮುಚ್ಚಲಾಗುವುದು. ಇವರಲ್ಲಿ ವಿಲ್ಲುಪುರಂನ 21, ತಿರುಚಿರಾಪಳ್ಳಿಯ 16, ತಂಜಾವೂರಿನ 15, ಪುದುಕ್ಕೋಟೈನ 12, ಕಡಲೂರಿನ 11, ತಿರುವಾರೂರಿನ 10 ಮತ್ತು ಪೆರಂಬೂರ್ ಮತ್ತು ನಾಗಪಟ್ಟಿಣಂನ 10 ಅಂಗಡಿಗಳು ಸೇರಿವೆ.

ಕೊಯಮತ್ತೂರು ಪ್ರದೇಶದಲ್ಲಿ, ಉತ್ತರ ಮತ್ತು ದಕ್ಷಿಣ ಕೊಯಮತ್ತೂರಿನಲ್ಲಿ ತಲಾ 10, ತಿರುಪ್ಪೂರ್ ಮತ್ತು ಈರೋಡ್‌ನ ತಲಾ 24, ನೀಲಗಿರಿ ಮೂರು ಮತ್ತು ಕರೂರ್‌ನ ಏಳು ಸೇರಿದಂತೆ ಒಟ್ಟು 933 ಅಂಗಡಿಗಳಲ್ಲಿ 78 ಅಂಗಡಿಗಳನ್ನು ಮುಚ್ಚಲಾಗುವುದು.

ಸೇಲಂನಲ್ಲಿನ 1,001 ಮದ್ಯದಂಗಡಿಗಳ ಪೈಕಿ 59 ಅಂಗಡಿಗಳನ್ನು ಮುಚ್ಚಲಾಗುವುದು. ಇದರಲ್ಲಿ ನಾಮಕ್ಕಲ್‌ನ 18, ಸೇಲಂನ 17, ಧರ್ಮಪುರಿಯ ನಾಲ್ಕು ಮತ್ತು ಉಳಿದವು ಕೃಷ್ಣಗಿರಿ, ವೆಲ್ಲೂರು, ಟಿವಿ ಮಲೈ ಮತ್ತು ಅರಕ್ಕೋಣಂ ಗೆ ಸೇರಿವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ, ತಮಿಳುನಾಡು ಸರ್ಕಾರವು ಏಪ್ರಿಲ್ 20, 2023 ರಂದು “ಸರ್ಕಾರವು ರಾಜ್ಯದಲ್ಲಿ 500 TASMAC ಮದ್ಯದ ಮಳಿಗೆಗಳನ್ನು ಮುಚ್ಚಲಿದೆ” ಎಂದು ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಮದ್ಯ ಮಾರಾಟದ ಏಕಸ್ವಾಮ್ಯ ಸಂಸ್ಥೆಯಾಗಿರುವ TASMAC ಪ್ರಸ್ತುತ ತಮಿಳುನಾಡಿನಲ್ಲಿ 5329 ಮದ್ಯದ ಮಳಿಗೆಗಳನ್ನು ಹೊಂದಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಮದ್ಯ ನಿಷೇಧ ಮಾಡಲಾಗುವುದು ಎಂದು ಆಡಳಿತಾರೂಢ ಡಿಎಂಕೆ ಪಕ್ಷವು ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಭರವಸೆ ನೀಡಿತ್ತು.

ತಮಿಳುನಾಡು ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಹಾಗೂ ಸದ್ಯ ಬಂಧನದಲ್ಲಿರುವ ಸಚಿವ ಸೆಂಥಿಲ್ ಬಾಲಾಜಿ ಅವರು ಕಳೆದ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿ, ರಾಜ್ಯ ಸರ್ಕಾರ 500 TASMAC ಮಳಿಗೆಗಳನ್ನು ಮುಚ್ಚಲಿದೆ ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ : YouTubeನ ಪ್ರಥಮ ಅಫೀಶಿಯಲ್ ಶಾಪಿಂಗ್ ಚಾನೆಲ್ ತಿಂಗಳಾಂತ್ಯಕ್ಕೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.