ETV Bharat / bharat

ಆಧಾರ್​ ಜೊತೆ ವೋಟರ್​ ಐಡಿ ಲಿಂಕ್​​​: ಹೈಕೋರ್ಟ್​ಗೆ ಹೋಗುವಂತೆ ಸುರ್ಜೆವಾಲ್​ಗೆ ಸುಪ್ರೀಂ ಸೂಚನೆ

Aadhaar-Voter ID link: ಮತದಾರರು ಆಧಾರ್​​ ಕಾರ್ಡ್​​ಗೆ ವೋಟರ್ ಐಡಿ ಲಿಂಕ್ ಮಾಡುವ ವಿಚಾರ ಪ್ರಶ್ನಿಸಿ ಕಾಂಗ್ರೆಸ್​ನ ಮುಖಂಡ ಸುರ್ಜೆವಾಲ್​ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

Linking Aadhaar to Voter card
Linking Aadhaar to Voter card
author img

By

Published : Jul 25, 2022, 5:09 PM IST

ನವದೆಹಲಿ: ವೋಟರ್‌ ಐಡಿ ಜೊತೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡುವುದನ್ನ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ್​​ ಅವರಿಗೆ ದೆಹಲಿ ಹೈಕೋರ್ಟ್​ಗೆ ಹೋಗುವಂತೆ ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ. ಆಧಾರ್​​​ ಸಂಖ್ಯೆಯನ್ನ ಮತದಾರರ ಗುರುತಿನ ಚೀಟಿ ಜೊತೆ ಸಂಯೋಜನೆ ಮಾಡಲು ಚುನಾವಣಾ ಕಾನೂನುಗಳ ತಿದ್ದುಪಡಿ ಮಸೂದೆ 2021ಕ್ಕೆ ಸಂಸತ್​ ಈಗಾಗಲೇ ಅನುಮೋದನೆ ನೀಡಿದೆ.

  • Supreme Court asks Congress leader Randeep Singh Surjewala to move to Delhi High Court with his plea challenging the Election Law Amendment Act that enables linking electoral roll data with the Aadhaar ecosystem.

    (File photo) pic.twitter.com/S37kYRRDpn

    — ANI (@ANI) July 25, 2022 " class="align-text-top noRightClick twitterSection" data=" ">

ಇದನ್ನ ಪ್ರಶ್ನೆ ಮಾಡಿದ್ದ ಕಾಂಗ್ರೆಸ್ ಮುಖಂಡ ಸುರ್ಜೇವಾಲ್​ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ಹಾಗೂ ಎ.ಎಸ್ ಬೋಪಣ್ಣ ಅವರಿದ್ದ ಪೀಠ ಈ ಮಹತ್ವದ ನಿರ್ದೇಶನ ನೀಡಿದೆ. ಜೊತೆಗೆ ಈ ಮೊದಲು ಯಾಕೆ ಹೈಕೋರ್ಟ್​ಗೆ ಸಂಪರ್ಕಿಸಿಲ್ಲ ಎಂದು ಪ್ರಶ್ನೆ ಮಾಡಿದೆ. ಕಾನೂನಿನಲ್ಲಿ ಲಭ್ಯವಿರುವ ಅಂಶ ಗಮನದಲ್ಲಿಟ್ಟುಕೊಂಡು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ನಾವು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಪೀಠ ಹೇಳಿದೆ.

ಇದನ್ನೂ ಓದಿರಿ: ಚುನಾವಣಾ ಆಯೋಗದಿಂದ ನೋಟಿಸ್​: ನ್ಯಾಯಾಲಯದ ಕದ ತಟ್ಟಲಿದೆ ಶಿವಸೇನೆ

ಚುನಾವಣಾ ಕಾನೂನುಗಳ ತಿದ್ದುಪಡಿ ಕಾಯ್ದೆಯ ಸೆಕ್ಷನ್​ 4 ಮತ್ತು 5ರ ಬಗ್ಗೆ ಪ್ರಶ್ನೆ ಮಾಡಿದ್ದೀರಿ. ಇಲ್ಲಿಗೆ ಏಕೆ ಬಂದಿದ್ದೀರಿ? ಮೊದಲು ದೆಹಲಿ ಹೈಕೋರ್ಟ್​ಗೆ ಹೋಗಬಹುದು ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.