ಕೊಕ್ರನಾಗ್ (ಜಮ್ಮು-ಕಾಶ್ಮೀರ): ಜಮ್ಮು- ಕಾಶ್ಮೀರದಲ್ಲಿ ಅನಂತನಾಗ್ ಜಿಲ್ಲೆಯ ಕೊಕರ್ನಾಗ್‌ನ ಹೊಕ್ಸರ್ ಅರಣ್ಯ ಪ್ರದೇಶದಲ್ಲಿ ಸಿಡಿಲು ಬಡಿದು ಕನಿಷ್ಠ 250 ಕುರಿಗಳು ಸಾವನ್ನಪ್ಪಿವೆ. ಮಂಗಳವಾರ ರಾತ್ರಿ ಬಡಿದ ಸಿಡಿಲಿಗೆ 350 ಕುರಿಗಳ ಪೈಕಿ 250ಕ್ಕೂ ಹೆಚ್ಚು ಕುರಿಗಳು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.
ಸಿಡಿಲು ಹಾಗೂ ಹಿಮಪಾತದಿಂದ ದನ - ಕರುಗಳು, ಕುರಿಗಳು ಸೇರಿ ಜಾನುವಾರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ 250 ಕುರಿಗಳು ಫಯಾಜ್ ಅಹ್ಮದ್ ಬಟ್, ಅಬ್ದುಲ್ ರಶೀದ್, ಅಬ್ದುಲ್ ರೆಹಮಾನ್, ಅರ್ಷದ್ ಅಹ್ಮದ್ ಮತ್ತು ಮೊಹಮ್ಮದ್ ಅಶ್ರಫ್ ಅವರಿಗೆ ಸೇರಿದ್ದಾಗಿವೆ. ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಕುರಿಗಳ ಮಾಲೀಕರು ಮನವಿ ಮಾಡಿದ್ದಾರೆ.
ಕಳೆದ ಕೆಲವು ವಾರಗಳಿಂದ ಕಾಶ್ಮೀರ ಕಣಿವೆಯಲ್ಲಿ ಆಲಿಕಲ್ಲು, ಭಾರಿ ಮಳೆ, ಗಾಳಿ ಬೀಸುತ್ತಿದ್ದು, ಮಿಂಚು ಮತ್ತು ಗುಡುಗು ಸಹ ಇದೆ. ಇದರಿಂದ ಜೀವ ಹಾನಿ ಮತ್ತು ಆಸ್ತಿ ಹಾನಿ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು