ETV Bharat / bharat

ಜೀವನಶೈಲಿಯ ಬದಲಾವಣೆಗಳು ಮಹಿಳೆಯರ ಬೊಜ್ಜು- ಬಂಜೆತನದ ನಿವಾರಣೆಗೆ ಸಹಕಾರಿ! - obese, infertile women

ಸ್ಥೂಲಕಾಯತೆ ಮತ್ತು ಬಂಜೆತನ ಹೊಂದಿರುವ ಮಹಿಳೆಯರಲ್ಲಿ ಜೀವನ ಶೈಲಿಯ ಬದಲಾವಣೆಯಿಂದ ಗರ್ಭಧಾರಣೆಯ ತೊಂದರೆಯನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

lifestyle-changes-may-up-fertility-for-obese-infertile-women
ಬೊಜ್ಜು-
author img

By

Published : Mar 22, 2021, 11:20 PM IST

ಹೈದರಾಬಾದ್​: ಸ್ಥೂಲಕಾಯತೆ ಮತ್ತು ಬಂಜೆತನ ಹೊಂದಿರುವ ಮಹಿಳೆಯರು ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದು ಗರ್ಭಧಾರಣೆ ಚಿಕಿತ್ಸೆಗಿಂತಲೂ ಪರಿಣಾಮಕಾರಿ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಫಿಟ್-ಫಾರ್-ಫರ್ಟಿಲಿಟಿ(ಎಫ್‌ಎಫ್‌ಎಫ್)ಪ್ರೋಗ್ರಾಂ ಎಂದು ಕರೆಯಲ್ಪಡುವ ಜೀವನಶೈಲಿಯ ಕ್ರಮವನ್ನು ನಿಯಮಿತವಾಗಿ ಅನುಸರಿಸುವುದು ಗರ್ಭಧಾರಣೆ ಚಿಕಿತ್ಸೆಯನ್ನು ಬಯಸುವ ಸ್ಥೂಲಕಾಯತೆಯ ಮಹಿಳೆಯರಿಗೆ ಸಾಮಾನ್ಯ ಗುಣಮಟ್ಟದ ಆರೈಕೆಗೆ ತಗುಲುವ ವೆಚ್ಚಕ್ಕೆ ಪರ್ಯಾಯವಾಗಿದೆ ಎಂದು ENDO 2021ರಲ್ಲಿ ಪ್ರಸ್ತುತಪಡಿಸಿದ ಅಧ್ಯಯನವು ಸಾಬೀತುಪಡಿಸಿದೆ.

ನಮ್ಮ ಅಧ್ಯಯನವು ಎಫ್‌ಎಫ್‌ಎಫ್ ಪ್ರೋಗ್ರಾಂ ಗರ್ಭಧಾರಣೆಯ ಪ್ರಮಾಣವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ವಿಶೇಷವಾಗಿ, ಯಾವುದೇ ಗರ್ಭಾಧಾರಣೆಯ ಚಿಕಿತ್ಸೆಗಳ ಅಗತ್ಯವಿಲ್ಲದಿದ್ದಾಗ ಸ್ವಾಭಾವಿಕ ಗರ್ಭಧಾರಣೆಯ ಪ್ರಮಾಣ, ಹಾಗೆಯೇ ನೇರ-ಜನನ ಪ್ರಮಾಣ ಹೆಚ್ಚಾಗಿದೆ ಎಂದು ಕೆನಡಾದ ಶೆರ್ಬ್ರೂಕ್ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕ ಮಾಟಿಯಾ ಬೇಲನ್ ಹೇಳಿದ್ದಾರೆ.

ಸ್ಥೂಲಕಾಯತೆ ಮತ್ತು ಬಂಜೆತನ ಹೊಂದಿರುವ ಮಹಿಳೆಯರಲ್ಲಿ ಜೀವನಶೈಲಿಯ ಬದಲಾವಣೆಯಿಂದ ಆರಂಭಿಕ ತೂಕದ ಶೇಕಡಾ 5 ರಿಂದ 10 ರಷ್ಟು ಮಧ್ಯಮ ತೂಕ ನಷ್ಟವು ಗರ್ಭಧಾರಣೆಯ ತೊಂದರೆಯನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ರೀತಿ ಬೊಜ್ಜು ಹಾಗೂ ಬಂಜೆತನ ಹೊಂದಿದ್ದ ಸುಮಾರು 130 ಮಹಿಳೆಯರನ್ನು ಎರಡು ಗುಂಪುಗಳಾಗಿ ನೇಮಿಸಿಕೊಂಡ ಸಂಶೋಧನ ತಂಡ ಮೊದಲ ತಂಡವನ್ನು ಮೊದಲ ಆರು ತಿಂಗಳುಗಳ ಕಾಲ ಫಿಟ್-ಫಾರ್-ಫರ್ಟಿಲಿಟಿ ಕಾರ್ಯಕ್ರಮದಲ್ಲಿ ಪರೀಕ್ಷಿಸಿತು. ಅದೇ ರೀತಿ ಮತ್ತೊಂದು ತಂಡವನ್ನು ಗರ್ಭಾಧಾರಣೆ ಚಿಕಿತ್ಸೆಗೆ ಒಳಪಡಿಸಿತು.

ಮೊದಲ ಗುಂಪಿಗೆ ಜೀವನಶೈಲಿಯ ಬದಲಾವಣೆಗಳು ಮತ್ತು ಜೀವನಶೈಲಿಯ ಹವ್ಯಾಸಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು 45 ನಿಮಿಷಗಳ ಕಾರ್ಯಾಗಾರವನ್ನು ನೀಡಲಾಯಿತು. ಇದರಲ್ಲಿ ವಾಕಿಂಗ್​, ತಾಲೀಮು ಮೊದಲಾದ ದೈಹಿಕ ಕಸರತ್ತುಗಳನ್ನು ಮಾಡಿಸಲಾಯಿತು. ಎರಡನೇ ಗುಂಪಿಗೆ ಕೇವಲ ಗರ್ಭಧಾರಣೆಯ ಚಿಕಿತ್ಸೆಯನ್ನು ನೀಡಲಾಯಿತು.

ಆರು ತಿಂಗಳ ಅಧ್ಯಯನವನ್ನು ಪೂರ್ಣಗೊಳಿಸಿದ 108 ಮಹಿಳೆಯರಲ್ಲಿ, ಎಫ್‌ಎಫ್‌ಎಫ್ ಕಾರ್ಯಕ್ರಮವು ನೇರ ಜನನ ದರದಲ್ಲಿ ಶೇಕಡಾ 14.2 ಪಾಯಿಂಟ್‌ಗಳ ವ್ಯತ್ಯಾಸವನ್ನು ಸೃಷ್ಟಿಸಿದೆ. ಅದೇ ರೀತಿ ಚಿಕಿತ್ಸೆಯ ಗುಂಪಿನಲ್ಲಿ ಸ್ವಾಭಾವಿಕ ಗರ್ಭಧಾರಣೆಯ ಪ್ರಮಾಣ (ಯಾವುದೇ ಫಲವತ್ತತೆ ಚಿಕಿತ್ಸೆಗಳಿಲ್ಲದ ಗರ್ಭಧಾರಣೆ) ಶೇಕಡಾ 33.3 ರಷ್ಟಿದ್ದರೆ, ನಿಯಂತ್ರಣ ಗುಂಪಿನಲ್ಲಿ ಶೇಕಡಾ 12.3 ರಷ್ಟನ್ನು ಹೊಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.