ETV Bharat / bharat

2022 Horoscope; ತುಲಾ ರಾಶಿಯವರು ಈ ವರ್ಷ ಹಣಕಾಸಿನ ಸ್ಥಿತಿಯ ಕುರಿತು ಹೆಚ್ಚು ಕಾಳಜಿ ವಹಿಸಬೇಕು; ಏಕೆಂದರೆ? - ಹೊಸ ವರ್ಷದ ರಾಶಿ ಭವಿಷ್ಯ

ಈ ವರ್ಷ ತುಲಾ ರಾಶಿಯವರಿಗೆ ಸ್ವಲ್ಪ ಗಂಡಾಂತರ ಎದುರಾಗಬಹುದು. ಕೆಲವು ಶತ್ರುಗಳು ಗೌಪ್ಯವಾಗಿ ನಿಮಗೆ ಹಾನಿಯನ್ನುಂಟು ಮಾಡಲು ಸಹ ಯತ್ನಿಸಬಹುದು. ಹಾಗಾಗಿ ನಿಮ್ಮ ಹಣಕಾಸಿನ ಸ್ಥಿತಿಯ ಕುರಿತು ನೀವು ಕಾಳಜಿ ವಹಿಸಬೇಕು ಎಂದು ಗ್ರಹಗಳ ಸ್ಥಾನವು ಸೂಚಿಸುತ್ತದೆ.

Your 2022 Horoscope
Your 2022 Horoscope
author img

By

Published : Dec 31, 2021, 7:16 PM IST

2022ರ ಈ ವರ್ಷವು ತುಲಾ ರಾಶಿಯವರಿಗೆ ಮಿಶ್ರ ಫಲವನ್ನು ನೀಡಲಿದೆ. ಈ ವರ್ಷದಲ್ಲಿ ನಿಮಗೆ ಹೊರ ಹೋಗಲು ಸಾಕಷ್ಟು ಅವಕಾಶಗಳು ಒದಗಿ ಬರಲಿವೆ. ಅಲ್ಲದೆ ನೀವು ನೆಲೆಗೊಳ್ಳಲು ಇಚ್ಛಿಸುವುದಾದರೆ ಈ ವರ್ಷವು ನಿಮಗೆ ಅತ್ಯುತ್ತಮ. ನಿಮ್ಮ ಪ್ರಯತ್ನಗಳಿಗೆ ಇನ್ನಷ್ಟು ವೇಗ ನೀಡಿ.

ಇದು ನಿಮಗೆ ಆದಷ್ಟು ಬೇಗನೆ ಫಲಿತಾಂಶವನ್ನು ತಂದು ಕೊಡಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಕುಟುಂಬದಿಂದ ದೂರಕ್ಕೆ ಹೋಗಬೇಕಾದೀತು. ಏಕೆಂದರೆ ಈ ವರ್ಷದಲ್ಲಿ ಕಾರ್ಯಸ್ಥಳದಲ್ಲಿ ಬದಲಾವಣೆಯುಂಟಾಗುವ ಬಲವಾದ ಸಾಧ್ಯತೆ ಇದೆ. ನೀವು ಉದ್ಯೋಗಿ ಆಗಿದ್ದರೆ ನಿಮ್ಮ ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು. ಈ ವರ್ಷದಲ್ಲಿ ನೀವು ಮಕ್ಕಳನ್ನು ಪಡೆಯುವ ಸಾಧ್ಯತೆ ಇದೆ. ಬದುಕಿನ ಪರಿಸ್ಥಿತಿಯನ್ನು ನೋಡಿಕೊಂಡು ನೀವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

ಈ ಸ್ವಭಾವವು ನಿಮಗೆ ಈ ವರ್ಷದಲ್ಲಿ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ನಿಮ್ಮ ವಿವೇಕವು ಈ ವರ್ಷದಲ್ಲಿ ನಿಮ್ಮ ಅತಿ ದೊಡ್ಡ ಸಂಗಾತಿ ಎನಿಸಲಿದೆ. ಈ ಎಲ್ಲದರ ನಡುವೆ ಒಂದು ವಿಷಯವನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಕೆಲವು ಶತ್ರುಗಳು ಗೌಪ್ಯವಾಗಿ ನಿಮಗೆ ಹಾನಿಯನ್ನುಂಟು ಮಾಡಲು ಯತ್ನಿಸಬಹುದು. ನಿಮ್ಮ ಹಣಕಾಸಿನ ಸ್ಥಿತಿಯ ಕುರಿತು ನೀವು ಕಾಳಜಿ ವಹಿಸಬೇಕು ಎಂದು ಗ್ರಹಗಳ ಸ್ಥಾನವು ಸೂಚಿಸುತ್ತದೆ. ಅನಗತ್ಯ ವೆಚ್ಚಗಳ ಕಾರಣ ನಿಮ್ಮ ಒತ್ತಡವು ಹೆಚ್ಚಲಿದೆ.

ನಿಮ್ಮ ಹಣಕಾಸಿನ ಸ್ಥಿತಿಯು ನಿಮ್ಮ ಪಾಲಿಗೆ ಒಂದು ಹೊರೆಯಾಗಿ ಪರಿಣಮಿಸಲಿದೆ. ನೀವು ಮೊದಲೇ ಪೂರ್ವಸಿದ್ಧತೆ ಮಾಡಿಕೊಂಡರೆ ಯಾವುದೇ ದೊಡ್ಡ ಸಮಸ್ಯೆ ಉಂಟಾಗದು. ನಿಮ್ಮ ಕುಟುಂಬದಲ್ಲಿ ಒತ್ತಡವು ಹೆಚ್ಚುತ್ತಿದ್ದರೆ ನೀವು ಮಧ್ಯಪ್ರವೇಶ ಮಾಡಬೇಕಾದೀತು. ಏಕೆಂದರೆ ರಾಹುವು ಏಳನೇ ಮನೆಗೆ ಪ್ರವೇಶಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಒತ್ತಡ ಉಂಟಾಗಬಹುದು. ಈ ವರ್ಷವು ಪ್ರಯಾಣಿಸುವುದಕ್ಕೆ ಅನುಕೂಲಕರ. ವರ್ಷದ ಆರಂಭದಲ್ಲಿ ಮತ್ತು ವರ್ಷದ ನಡುವೆ ಮೇ ಮತ್ತು ಜುಲೈ ನಡುವೆ ಪ್ರಯಾಣಿಸಿದರೆ ನಿಮ್ಮ ಪಾಲಿಗೆ ಹೆಚ್ಚು ಪ್ರಯೋಜನಕಾರಿ ಎನಿಸಲಿದೆ. ಈ ರೀತಿಯಲ್ಲಿ ನಿಮ್ಮ ವ್ಯವಹಾರದಲ್ಲಿಯೂ ಪ್ರಗತಿ ಉಂಟಾಗಲಿದೆ.

ನಿಮ್ಮ ಮಕ್ಕಳ ಶಿಕ್ಷಣದ ಕುರಿತು ನಿಮಗೆ ಚಿಂತೆ ಉಂಟಾಗಬಹುದು. ನಿಮ್ಮ ಅತ್ತೆ ಮಾವಂದಿರ ಜೊತೆಗೆ ನೀವು ಹೊಂದಿರುವ ಉತ್ತಮ ಸಂಬಂಧವು ನಿಮಗೆ ಲಾಭ ತಂದು ಕೊಡಲಿದೆ. ಅವರು ಬದುಕಿನ ಅನೇಕ ವಿಷಯಗಳಲ್ಲಿ ಉತ್ತಮ ಸಲಹೆ ಮತ್ತು ಬೆಂಬಲವನ್ನು ನೀಡಲಿದ್ದಾರೆ. ಇದು ನಿಮ್ಮ ಪಾಲಿಗೆ ಸಾಕಷ್ಟು ನೆರವು ನೀಡಲಿದೆ. ಮಿತ್ರರು ಮತ್ತು ಸಂಬಂಧಿಗಳ ಜೊತೆಗಿನ ಸಂಬಂಧವು ಚೆನ್ನಾಗಿರಲಿದ್ದು ನಿಮ್ಮ ಮಿತ್ರರು ನಿಮ್ಮ ಕೆಲಸದಲ್ಲಿ ನಿಮಗೆ ಸಹಕರಿಸಲಿದ್ದಾರೆ.

ಇದನ್ನೂ ಓದಿ: Horoscope-2022: ಹೊಸ ವರ್ಷ ಯಾವ ರಾಶಿಯವರಿಗೆ ಅದೃಷ್ಟ, ಹೇಗಿರಲಿದೆ ನಿಮ್ಮ ಭವಿಷ್ಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.