ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣ ಮತ್ತು ಅದರ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಕುರಿತು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರಿಗೆ ದೂರು ನೀಡಿದ್ದರು. ಇದೀಗ ದೂರನ್ನು ಗಂಭೀರವಾಗಿ ಪರಿಗಣಿಸಿರುವ ವಿ ಕೆ ಸಕ್ಸೇನಾ ಅವರು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಏಳು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಕಟ್ಟಡ ನಿಯಮಾವಳಿ ಉಲ್ಲಂಘನೆ: ಸಿಎಂ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಬಗ್ಗೆ ಬಿಜೆಪಿ ಮುಖಂಡರು ನೀಡಿರುವ ದೂರು ಹಾಗೂ ಮಾಧ್ಯಮಗಳ ವರದಿಯನ್ನು ಗಮನದಲ್ಲಿಟ್ಟುಕೊಂಡು ಲೆಫ್ಟಿನೆಂಟ್ ಗವರ್ನರ್ ಅವರು ಈ ಕುರಿತು ವರದಿ ನೀಡಿ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಸೂಚಿಸಿದ್ದರು. ಇದೀಗ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರು ಸಿಎಂ ಅಧಿಕೃತ ನಿವಾಸ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ವಿವರವಾದ ವರದಿ ಕೇಳಿದ್ದಾರೆ. ದೆಹಲಿಯ ಬಂಗಲೆ ಪ್ರದೇಶಗಳಲ್ಲಿ ಸಿವಿಲ್ ಲೈನ್ ಅನ್ನು ಸೇರಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಹೇಳುತ್ತಾರೆ. ಇಲ್ಲಿ ಎತ್ತರದ ಕಟ್ಟಡ ಕಟ್ಟುವಂತಿಲ್ಲ ಎಂದು ಮಾಸ್ಟರ್ ಪ್ಲಾನ್ನಲ್ಲಿ ಬರೆಯಲಾಗಿದೆ.

ಅರಮನೆ ಕಟ್ಟಿದ ಸಿಎಂ ಕೇಜ್ರಿವಾಲ್: ಸಿವಿಲ್ ಲೈನ್ಸ್ ನ 6 ಫ್ಲಾಗ್ ಸ್ಟಾಫ್ ರಸ್ತೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಸವಿರುವ ಬಂಗಲೆ ಒಂದೇ ಅಂತಸ್ತಿನ ಕಟ್ಟಡವಾಗಿತ್ತು. ಕಾಂಗ್ರೆಸ್ ನಾಯಕ ಚೌಧರಿ ಪ್ರೇಮ್ ಸಿಂಗ್ ಅವರು ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದಾಗ ಅದರಲ್ಲಿಯೇ ಇರುತ್ತಿದ್ದರು. ಇದಾದ ನಂತರ ಉಪಸಭಾಪತಿ ಹುದ್ದೆಯಲ್ಲಿದ್ದ ಅಮರೀಶ್ ಗೌತಮ್ ಇಲ್ಲಿಯೇ ವಾಸವಾಗಿದ್ದರು. ಈಗ ಅದು ನೆಲಮಾಳಿಗೆ, ನೆಲಮಹಡಿ, ಮೊದಲ ಮಹಡಿ, ಎರಡನೇ ಮಹಡಿಯಾಗಿದೆ. ಅಂದರೆ, ನೆಲಮಾಳಿಗೆಯನ್ನು ತೆಗೆದುಹಾಕಿದರೆ, ಅದು ಮೂರು ಅಂತಸ್ತಿನದ್ದಾಗಿದೆ. ಅದರೊಳಗೆ 20 ಸಾವಿರ ಚದರ ಅಡಿ ವಿಸ್ತೀರ್ಣವಿದೆ. ಇದು ಸ್ವತಃ ಮಾಸ್ಟರ್ ಪ್ಲಾನ್ ಮತ್ತು ಹೆರಿಟೇಜ್ ಕಾನೂನಿನ ಉಲ್ಲಂಘನೆಯಾಗಿದೆ.

ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಕೂಡ ಲೆಫ್ಟಿನೆಂಟ್ ಗವರ್ನರ್ ಅವರಿಗೆ ನೀಡಿರುವ ದೂರಿನಲ್ಲಿ ಕೇಜ್ರಿವಾಲ್ ಬಂಗಲೆ ನಿರ್ಮಾಣಕ್ಕೆ 45 ಕೋಟಿ ರೂಪಾಯಿ ವೆಚ್ಚವಾಗಿಲ್ಲ. 171 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಜನರು ಆಮ್ಲಜನಕ ಮತ್ತು ಆಸ್ಪತ್ರೆಗಾಗಿ ಹಾತೊರೆಯುತ್ತಿದ್ದಾಗ, ಸಿಎಂ ಕೇಜ್ರಿವಾಲ್ ಅವರು 171 ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯನ್ನು ನಿರ್ಮಿಸಿದರು ಎಂದು ಆರೋಪಿಸಿದರು.
ಕೇಜ್ರಿವಾಲ್ ಮನೆಗೆ 171 ಕೋಟಿ ಖರ್ಚು : ಸಿಎಂ ಕೇಜ್ರಿವಾಲ್ ಮನೆ ಪಕ್ಕದಲ್ಲಿ ಇನ್ನು ನಾಲ್ಕು ಮನೆಗಳಿವೆ ಎಂದು ಅಜಯ್ ಮಾಕೆನ್ ಹೇಳಿಕೊಂಡಿದ್ದಾರೆ. 45 ರಾಜ್‌ಪುರ ರಸ್ತೆ, 47 ರಾಜ್‌ಪುರ ರಸ್ತೆ, 8ಎ ಫ್ಲಾಗ್ ಸ್ಟಾಫ್ ರಸ್ತೆ ಮತ್ತು 8ಬಿ ಫ್ಲಾಗ್ ಸ್ಟಾಫ್ ರಸ್ತೆಯಲ್ಲಿ 22 ಅಧಿಕಾರಿಗಳ ಫ್ಲಾಟ್‌ಗಳಿವೆ. ಅದರಲ್ಲಿ 15 ಫ್ಲ್ಯಾಟ್‌ಗಳನ್ನು ಖಾಲಿ ಮಾಡಲಾಗಿದೆ ಅಥವಾ ನೆಲಸಮ ಮಾಡಲಾಗಿದೆ. ಇದೂ ಕೂಡ ಬಹುಬೇಗ ಖಾಲಿಯಾಗಲಿದೆ. ಈ 22 ಆಫೀಸರ್ ಫ್ಲಾಟ್‌ಗಳ ಕೊರತೆಯನ್ನು ನೀಗಿಸಲು ಕೇಜ್ರಿವಾಲ್ ಸರ್ಕಾರವು ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ನಲ್ಲಿ 21 ಫ್ಲಾಟ್ ಗಳನ್ನು ಖರೀದಿಸಿದೆ. ಇದರ ವೆಚ್ಚ 126 ಕೋಟಿ ಎಂದು ಹೇಳಲಾಗಿದೆ.
ಆರೋಪ ಮಾಡಿ ಅಧಿಕಾರ ಸ್ಥಾಪಿಸಿದರು : ಲೆಫ್ಟಿನೆಂಟ್ ಗವರ್ನರ್ಗೆ ನೀಡಿರುವ ದೂರಿನಲ್ಲಿ ಕೇಜ್ರಿವಾಲ್ ಅವರು ಯಾವ ರೀತಿಯಲ್ಲಿ ದೆಹಲಿಯ ಜನರನ್ನು ದಾರಿ ತಪ್ಪಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಕೆನ್ ಹೇಳಿದ್ದಾರೆ. ಸರಳತೆಗೆ ಮಾದರಿಯಾಗಿ ದೆಹಲಿಯನ್ನು ಅಭಿವೃದ್ಧಿಪಡಿಸಿದ ಶೀಲಾ ದೀಕ್ಷಿತ್ ವಿರುದ್ಧ ಸಿಎಂ ಕೇಜ್ರಿವಾಲ್ ಸುಳ್ಳು ಆರೋಪ ಮಾಡಿ ಅಧಿಕಾರ ಸ್ಥಾಪಿಸಿ ಇದೀಗ ಅರಮನೆಗಳಲ್ಲಿ ವಾಸವಾಗಿದ್ದಾರೆ. ಇದಷ್ಟೇ ಅಲ್ಲ, ಅವರಿಗೆ ಕೇಂದ್ರ ಸರ್ಕಾರದ ಭದ್ರತೆ, ದೆಹಲಿ ಪೊಲೀಸರ ಭದ್ರತೆ, ದೊಡ್ಡ ವಾಹನಗಳು ಮತ್ತು ಪಂಜಾಬ್ ಪೊಲೀಸರ ಭದ್ರತೆ ಬೇಕು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಹೆಚ್ಬಿಎಸ್ಸಿ ಬ್ಯಾಂಕ್ಗೆ 1.73 ಕೋಟಿ ರೂಪಾಯಿ ದಂಡ ವಿಧಿಸಿದ ಆರ್ಬಿಐ