ETV Bharat / bharat

7 ವರ್ಷಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಕೇಂದ್ರ ಕೈಗೊಂಡ ಕ್ರಮ: ಪ್ರಧಾನಿ ಹೇಳಿದ ಮಾತೇನು ಗೊತ್ತೆ?

author img

By

Published : Jun 4, 2021, 3:13 PM IST

ಆಡಳಿತವನ್ನು ಪಾರದರ್ಶಕ, ಭ್ರಷ್ಟಾಚಾರ ಮುಕ್ತವಾಗಿಸಲು ಕೇಂದ್ರ ಸರ್ಕಾರ ಎಲ್ಲ ಹಂತದಲ್ಲೂ ತಂತ್ರಜ್ಞಾನವನ್ನು ಸದುಪಯೋಗಪಡಿಸಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಕ್ರಮಗಳ ಕುರಿತು ಬರೆದ 'Ushering in an Era of Transparency in New India' ಎಂಬ ಶೀರ್ಷಿಕೆಯ ಲೇಖನವನ್ನು ಪ್ರಧಾನಿ ತಮ್ಮ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಭ್ರಷ್ಟಾಚಾರವನ್ನು ತೊಡೆದುಹಾಕಲು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಕಳೆದ ಏಳು ವರ್ಷಗಳಲ್ಲಿ ಕೇಂದ್ರವು ಕೈಗೊಂಡ ಕಾರ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

ವಿಕಾಸ್ ಯಾತ್ರೆ ಮತ್ತು ಮೋದಿ ಸರ್ಕಾರದ ಸೇವಾ ಮನೋಭಾವ ಕುರಿತು ವಿಸ್ತಾರವಾಗಿ ತಿಳಿಸಿರುವ ಲಿಂಕ್ ಅನ್ನು ಅವರು ತಮ್ಮ ವೆಬ್‌ಸೈಟ್​ನಲ್ಲಿ ಹಂಚಿಕೊಂಡಿದ್ದಾರೆ.

"ಆಡಳಿತವನ್ನು ಪಾರದರ್ಶಕ, ಭ್ರಷ್ಟಾಚಾರ ಮುಕ್ತವಾಗಿಸಲು ಕೇಂದ್ರ ಸರ್ಕಾರ ಎಲ್ಲ ಹಂತದಲ್ಲೂ ತಂತ್ರಜ್ಞಾನವನ್ನು ಸದುಪಯೋಗಪಡಿಸಿದೆ. ಜನರಲ್ಲಿ ವಿಶ್ವಾಸವನ್ನು ಬೆಳೆಸುವುದು ಮೋದಿ ಸರ್ಕಾರದ ಮೂಲ ಉದ್ದೇಶ" ಎಂದು ಅವರು ಹೇಳಿದರು.

'Ushering in an Era of Transparency in New India' ಎಂಬ ಶೀರ್ಷಿಕೆಯ ಲೇಖನವು, ಭ್ರಷ್ಟಾಚಾರದಿಂದ ಆಳವಾಗಿ ಪ್ರಭಾವಿತವಾಗಿದ್ದ ಆಡಳಿತದ ಪ್ರತಿಯೊಂದು ಅಂಶಗಳನ್ನು ನರೇಂದ್ರ ಮೋದಿ ಸರ್ಕಾರದ ನಿರಂತರ ಕ್ರಮಗಳು ಸ್ವಚ್ಛಗೊಳಿಸುತ್ತಿದೆ ಎಂದು ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರವು ಕೈಗೊಂಡ ಹಲವಾರು ಕ್ರಮಗಳನ್ನು ಈ ಲೇಖನದಲ್ಲಿ ಬರೆಯಲಾಗಿದೆ.

"ಸಾಮಾನ್ಯ ಜನರ ತೆರಿಗೆಗಳ ಸಂಪೂರ್ಣ ನ್ಯಾಯಯುತ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮುಖರಹಿತ ಮೌಲ್ಯಮಾಪನ ವ್ಯವಸ್ಥೆ ಮತ್ತು ಮುಖರಹಿತ ಮೇಲ್ಮನವಿ ವ್ಯವಸ್ಥೆಯನ್ನು ತರಲಾಗಿದೆ" ಎಂದು ಅದು ಹೇಳಿದೆ.

ಜನ್​ಧನ್, ಆಧಾರ್ ಮತ್ತು ಮೊಬೈಲ್ (ಜೆಎಎಂ ಟ್ರಿನಿಟಿ) ಅನುಷ್ಠಾನದ ಮೂಲಕ, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಜನರು ನೇರವಾಗಿ ಪಡೆಯುವ ಕ್ರಮಗಳ ಬಗ್ಗೆಯೂ ಈ ಲೇಖನದಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.