ETV Bharat / bharat

ವೈವಾಹಿಕ ಜೀವನ ಕುರಿತು ಸುಳ್ಳು ಮಾಹಿತಿ ಆರೋಪ.. ಟಿಎಂಸಿ ಸಂಸದೆ ನುಸ್ರತ್ ಜಹಾನ್ ವಿರುದ್ಧ ತನಿಖೆಗೆ ಆಗ್ರಹ - ಖಿಲ್‌ ಜೈನ್‌

ಕೆಲ ತಿಂಗಳ ಹಿಂದೆ, ನುಸ್ರತ್‌ ಜಹಾನ್‌ ತಮ್ಮ ಗಂಡ ನಿಖಿಲ್‌ ಜೈನ್‌ ಜೊತೆಗಿನ ವಿವಾಹ ಸಂಬಂಧವನ್ನು ಕಳೆದುಕೊಂಡಿರುವುದಾಗಿ ಘೋಷಿಸಿದ್ದರು. ಇನ್ನು ಜೂನ್‌ 9ರಂದು 7 ಅಂಶಗಳಿರುವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.

tmc-mp-nusrat-jahan
ಟಿಎಂಸಿ ಸಂಸದೆ ನುಸ್ರತ್ ಜಹಾನ್
author img

By

Published : Jun 22, 2021, 5:32 PM IST

ಕೋಲ್ಕತ್ತಾ: ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ವೈವಾಹಿಕ ಜೀವನ ಕುರಿತು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಅವರು ವೈವಾಹಿಕ ಜೀವನ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದು ಬಿಜೆಪಿ ಸಂಸದೆ ಸಂಘಮಿತ್ರಾ ಮೌರ್ಯ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

2019ರಲ್ಲಿ ನುಸ್ರತ್ ಮದುವೆಯಾಗಿರುವುದಾಗಿ ತಿಳಿಸಿದ್ದರು. ಅಲ್ಲದೇ ನಿಖಿಲ್ ಜೈನ್ ಎಂಬಾತನನ್ನು ವರಿಸಿದ್ದು, ವಿವಾಹ ಸಿಂಧುವಾಗಿಲ್ಲ ಎಂದು ತಾವೇ ಹೇಳಿಕೆ ನೀಡಿದ್ದರು. ನಮ್ಮ ವಿವಾಹವು ಟರ್ಕಿಶ್ ಕಾನೂನಿನ ಉಲ್ಲಂಘನೆಯಾಗಿದೆ. ಇದು ಭಾರತದಲ್ಲಿ ಮಾನ್ಯವಾಗಿಲ್ಲ. ನಾವಿಬ್ಬರೂ ಬಹಳ ಹಿಂದೆಯೇ ದೂರಾಗಿದ್ದೇವೆ ಎಂದಿದ್ದರು.

ಆದರೆ, ಅವರ ಈ ವೈವಾಹಿಕ ಜೀವನ ಸಂಬಂಧ ಅವರು ಲೋಕಸಭೆಯ ಅಫಿಡವಿಟ್​​​ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಬಿಜೆಪಿ ಸಂಸದೆ ಸಂಘಮಿತ್ರಾ ಮೌರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ಮುಂಬೈನಲ್ಲಿ ನಕಲಿ ವ್ಯಾಕ್ಸಿನೇಷನ್ ಪ್ರಕರಣ: 3 ಎಫ್​ಐಆರ್​ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.