ETV Bharat / bharat

ಜಮ್ಮು-ಕಾಶ್ಮೀರದ ಸೊಪೋರ್​​​ನಲ್ಲಿ ಎಲ್​​ಇಟಿ ಉಗ್ರನ ಬಂಧನ - ಸಾಕಿಬ್​​ ಶಕೀಲ್​ ದಾರ್​ ಎಂಬ ಉಗ್ರನ ಬಂಧನ

ಭದ್ರತಾ ಪಡೆ ಹಾಗೂ ನಾಗರಿಕರ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಓರ್ವ ಉಗ್ರನ ಬಂಧನ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.

LeT hybrid militant arrested in Kashmir
LeT hybrid militant arrested in Kashmir
author img

By

Published : Sep 3, 2022, 10:42 AM IST

ಸೊಪೋರ್​​(ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು ಕಾಶ್ಮೀರದ ಸೊಪೋರ್​​​ನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭಾರತೀಯ ಯೋಧರು ಎಲ್​​ಇಟಿ ಉಗ್ರನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೊಪೋರ್​​-ಕುಪ್ವಾರ್​ ರಸ್ತೆಯಲ್ಲಿ ಸಾಕಿಬ್​​ ಶಕೀಲ್​ ದಾರ್​ ಎಂಬ ಭಯೋತ್ಪಾದಕನನ್ನು ಬಂಧಿಸಲಾಗಿದ್ದು, ಆತನಿಂದ ಪಿಸ್ತೂಲ್, ಮ್ಯಾಗಜೀನ್ ಮತ್ತು 8 ಪಿಸ್ತೂಲ್​ ಬುಲೆಟ್​ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಎಲ್​​ಇಟಿಯ ಹೈಬ್ರಿಡ್​ ಉಗ್ರನೆಂದು ಗುರುತಿಸಲಾಗಿದ್ದು, ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದನೆಂದು ತಿಳಿದು ಬಂದಿದೆ. ನಿನ್ನೆ ತಡರಾತ್ರಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 9:40ರ ಸುಮಾರು ಚೆಕ್​ ಬ್ರಾತ್​​ ರಸ್ತೆ ಬಳಿ ಬರುತ್ತಿದ್ದ ವ್ಯಕ್ತಿಯ ಚಲನವಲನದಲ್ಲಿ ಅನುಮಾನ ಮೂಡಿದ್ದು, ನಿಲ್ಲುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ, ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಬಂಧಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಈತ ಕಳೆದ ಕೆಲ ದಿನಗಳಿಂದ ಚೆಕ್​ ಬ್ರಾತ್​​​ನಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದಂದು ಉಗ್ರ ದಾಳಿ ರೂಪಿಸಿದ್ದವನ ಬಂಧನ.. ಸಂಚುಕೋರನಿಗೆ ಐಸಿಸ್​ ನಂಟು

ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಜೊತೆ ಸೇರಿ ಕೆಲಸ ಮಾಡ್ತಿದ್ದ. ಈತ ಭಾರತೀಯ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸಿದ್ದನು. ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಗ್ರೆನೇಡ್​​ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿ

ಮತ್ತೊಂದು ಪ್ರಕರಣದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಹೂತಿಟ್ಟಿದ್ದ ಗ್ರೆನೇಡ್​​ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಂಧಿತನಾಗಿದ್ದ ಶೋಕೇತ್​​​ನನ್ನ ವಿಚಾರಣೆಗೊಳಪಡಿಸಿದಾಗ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಜಬ್ಬಾರ್​ ಅರಣ್ಯದಲ್ಲಿ ಮುಚ್ಚಿಟ್ಟಿದ್ದ ಗ್ರೆನೇಡ್​​​ಗಳ ಬಗ್ಗೆ ಬಾಯ್ಬಿಟ್ಟಿದ್ದ. ಈ ಪ್ರದೇಶಕ್ಕೆ ತೆರಳಿರುವ ವಿಶೇಷ ತಂಡ ಎರಡು ಜೀವಂತ ಗ್ರೆನೇಡ್​ ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.