ನಾಸಿಕ್ (ಮಹಾರಾಷ್ಟ್ರ) : ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಗ್ರಾಮಸ್ಥರು, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಅವಿರತ ಪ್ರಯತ್ನದ ನಂತರ ರಕ್ಷಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದೇವಳ ತಾಲೂಕಿನ ಲೋಹೋನರ್ ಎಂಬ ಗ್ರಾಮದಲ್ಲಿ ಆಹಾರ ಅರಸುತ್ತಾ ಬಂದಿದ್ದ ಚಿರತೆ ಬಾವಿಯೊಳಗೆ ಬಿದ್ದಿದೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ತಂಡ ಗ್ರಾಮಸ್ಥರ ಸಹಾಯದಿಂದ ಬಾವಿಯೊಳಗೆ ಪಂಜರ ಇಳಿಸಿ, ಚಿರತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ: ಬಾತ್ ರೂಮ್ ಒಳಗಿಂದ ಉರಗ ತಜ್ಞನ ಮೇಲೆಯೇ ಜಿಗಿದ ಕಾಳಿಂಗ ಸರ್ಪ!!
ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ಚಿರತೆಯನ್ನು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.