ETV Bharat / bharat

ಸ್ವರ ಸಾಮ್ರಾಟ ಎಸ್​​​.ಪಿ.ಬಾಲಸುಬ್ರಹ್ಮಣ್ಯಂಗೆ ಮರಣೋತ್ತರ ಪದ್ಮವಿಭೂಷಣ ಗೌರವ

author img

By

Published : Jan 25, 2021, 9:58 PM IST

ದಿ.ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ದೇಶದ ಎರಡನೇ ಅತಿದೊಡ್ಡ ನಾಗರಿಕ ಸೇವಾ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಮರಣೋತ್ತರವಾಗಿ ನೀಡಿ ಗೌರವ ಸಲ್ಲಿಸಿದೆ.

Legendary singer SPBalasubrahmanyam posthumously awarded
ಎಸ್​​​.ಪಿ.ಬಾಲಸುಬ್ರಹ್ಮಣ್ಯಂ

ನವದೆಹಲಿ: ಸ್ವರ ಸಾಮ್ರಾಟ ದಿ.ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಮಹೋನ್ನತ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ನೂರಾರು ಪ್ರಶಸ್ತಿಗಳನ್ನು ಒಲಿಸಿಕೊಂಡಿರುವ ಗಾನ ಗಾರುಡಿಗನಿಗೆ ಈಗ ದೇಶದ 2ನೇ ಅತ್ಯುನ್ನತ ಪ್ರಶಸ್ತಿ ಸಂದಿದೆ.

ಎಸ್‌ಪಿಬಿ ಅವರು ವಿಶ್ವದ ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಮೂಲತ: ಆಂಧ್ರದವರಾದರೂ ಕರ್ನಾಟಕದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕವನ್ನೇ ತನ್ನ ತವರು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.

ಎಸ್.ಪಿ.ಬಿ ಅವರು ಕಳೆದ ಸೆಪ್ಟೆಂಬರ್​ 25ರಂದು ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.