ETV Bharat / bharat

TSPSC ಪ್ರಶ್ನೆ ಪತ್ರಿಕೆಗಳ ಸೋರಿಕೆ ಕೇಸ್​: ಅಭ್ಯರ್ಥಿಗಳೊಂದಿಗೆ ಡೀಲ್​ ಮಾಡಿದ್ದ ಶಿಕ್ಷಕಿ!

author img

By

Published : Mar 16, 2023, 1:57 PM IST

ತೆಲಂಗಾಣದಲ್ಲಿ ನಡೆದ ಪ್ರಶ್ನೆಪತ್ರಿಕೆ ಪ್ರಕರಣದ ಹಿಂದೆ ಶಿಕ್ಷಕಿಯೊಬ್ಬರ ಮಾಸ್ಟರ್​ಮೈಂಡ್​ ಇದೆ. ಅಭ್ಯರ್ಥಿಗಳೊಂದಿಗೆ ಹಣಕ್ಕಾಗಿ ಒಪ್ಪಂದ ಮಾಡಿಕೊಂಡು ಪ್ರಶ್ನೆಪತ್ರಿಕೆಯನ್ನು ಲೀಕ್​ ಮಾಡಿದ್ದರು.

TSPSC ಪತ್ರಿಕೆಗಳ ಸೋರಿಕೆ ಕೇಸ್​
TSPSC ಪತ್ರಿಕೆಗಳ ಸೋರಿಕೆ ಕೇಸ್​

ಹೈದರಾಬಾದ್: ತೆಲಂಗಾಣ ರಾಜ್ಯ ಸಾರ್ವಜನಿಕ ಆಡಳಿತ ಸೇವೆ(ಟಿಎಸ್​ಪಿಎಸ್​​ಸಿ​) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣವನ್ನು ಬೇಗಂಬಜಾರ್ ಠಾಣೆಯಿಂದ ಸಿಸಿಎಸ್‌ಗೆ ಬುಧವಾರ ವರ್ಗಾಯಿಸಲಾಗಿದೆ. ಎಸ್‌ಐಟಿ ಮುಖ್ಯಸ್ಥ ಎ.ಆರ್. ಶ್ರೀನಿವಾಸ್ ತನಿಖೆ ಚುರುಕುಗೊಳಿಸಿದ್ದು, ಗುರುಕುಲ ಉಪಾಧ್ಯಾಯರಾದ ಎಲ್. ರೇಣುಕಾ ರಾಥೋಡ್ ತಮ್ಮ ಕಿರಿಯ ಸಹೋದರನ ಹೆಸರಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ಲೀಕ್​ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪರೀಕ್ಷೆ ಬರೆಯಲು ಅರ್ಹತೆ ಇಲ್ಲದ ಸಹೋದರರನ್ನು ತೋರಿಸಿ ಇತರೆ ಅಭ್ಯರ್ಥಿಗಳೊಂದಿಗೆ ಮುಂಗಡವಾಗಿ ಡೀಲ್​ ಮಾಡಿಕೊಂಡು ಲಕ್ಷಗಟ್ಟಲೇ ಹಣ ಕೊಡುವ ತಂತ್ರ ಹೆಣೆದಿದ್ದಾರೆ. ಪ್ರಮುಖ ಆರೋಪಿ ಆಯೋಗದ ಕಾರ್ಯದರ್ಶಿಯ ಆಪ್ತ ಸಹಾಯಕ ಪ್ರವೀಣ್ ಕುಮಾರ್, ಸಿಸ್ಟಂ ಅಡ್ಮಿನಿಸ್ಟ್ರೇಟರ್ ರಾಜಶೇಖರ್ ನೆರವಿನೊಂದಿಗೆ ಸಹಾಯಕ ಎಂಜಿನಿಯರ್ ಸಿವಿಲ್ ಪ್ರಶ್ನೆ ಪತ್ರಿಕೆಗಳನ್ನು ಲೀಕ್​ ಮಾಡಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ರೇಣುಕಾ ಅವರ ಕಿರಿಯ ಸಹೋದರ ರಾಜೇಶ್ವರ ನಾಯ್ಕ್ ಎಇ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಲ್ಲ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಟಿಟಿಸಿ ಮುಗಿಸಿರುವ ರಾಜೇಶ್ವರ್ ಸ್ವಗ್ರಾಮದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ. ಪ್ರಮುಖ ಆರೋಪಿ ರೇಣುಕಾ ಎಇ ಪ್ರಶ್ನೆಪತ್ರಿಕೆಗಳನ್ನು ಆತನ ಹೆಸರಿನಲ್ಲಿ ಪಡೆದು ಮಹೆಬೂಬ್ ನಗರ ಜಿಲ್ಲೆಯ ಕೆ.ನೀಲೇಶ್ ನಾಯ್ಕ್ ಹಾಗೂ ಗೋಪಾಲ್ ನಾಯ್ಕ್ ಎಂಬುವರಿಗೆ 14 ಲಕ್ಷ ರೂ.ಗೆ ಕೊಡುವುದಾಗಿ ಡೀಲ್​ ಮಾಡಿದ್ದರು. ಪ್ರಶ್ನೆಪತ್ರಿಕೆ ಪಡೆದ ರೇಣುಕಾ ಬಾಲಾಪುರ ಕ್ರಾಸ್ ರಸ್ತೆಯಲ್ಲಿ ಪ್ರವೀಣ್ ಎಂಬಾತನಿಗೆ 5 ಲಕ್ಷ ರೂ. ನೀಡಿದ್ದರು.

ಬಳಿಕ 14 ಲಕ್ಷ ರೂಪಾಯಿ ಪಡೆದು ಅದೇ ಪ್ರಶ್ನೆಪತ್ರಿಕೆಯನ್ನು ಎಲ್​ಬಿ ನಗರದ ಲಾಡ್ಜ್​ನಲ್ಲಿ ನೀಲೇಶ್ ಮತ್ತು ಗೋಪಾಲ್​ಗೆ ನೀಡಿದ್ದಾರೆ. ಅವರು ಆ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ತಿಳಿದುಕೊಂಡು ಪರೀಕ್ಷೆಗೆ ಸಿದ್ಧರಾಗಿದ್ದರು. ಪರೀಕ್ಷೆ ಮುಗಿದ ನಂತರ ಯಾವುದೇ ಅನುಮಾನ ಬಾರದಂತೆ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಉಳಿದ 5 ಲಕ್ಷ ರೂ.ಗಳೊಂದಿಗೆ ಪ್ರಶ್ನೆ ಪತ್ರಿಕೆಯನ್ನು ಪ್ರವೀಣ್ ಕೈಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಹೋದರ ರಾಜೇಶ್ವರ್​ ನಾಯ್ಕ ಕೂಡ ಸಹಕಾರ ನೀಡಿದ್ದರು ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.

ಏನೇನೋ ಕಾರಣ ನೀಡಿ ಶಾಲೆಗೆ ರಜೆ: ಆರೋಪಿ ರೇಣುಕಾ ತಾನು ಕೆಲಸ ಮಾಡುತ್ತಿದ್ದ ಶಾಲೆಗೆ ಏನೇನೋ ಕಾರಣ ನೀಡಿ ರಜೆ ಪಡೆದಿದ್ದರು. ಈ ವೇಳೆ ಪ್ರಶ್ನೆ ಪತ್ರಿಕೆ ಲೀಕ್​ ಮಾಡುವ ಕೆಲಸದಲ್ಲಿ ತೊಡಗಿದ್ದರು. ಆರೋಪಿಯು 2018 ರಲ್ಲಿ ಟಿಜಿಟಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ವರ್ಷದ ಜನವರಿಯಲ್ಲಿ ಪೊಲೀಸರು ಶಿಕ್ಷಕಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವವರೆಗೆ 16 ದಿನಗಳ ರಜೆ ತೆಗೆದುಕೊಂಡಿದ್ದರೆಂದು ಗೊತ್ತಾಗಿದೆ. ಈ ತಿಂಗಳ 4 ಮತ್ತು 5 ರಂದು ಎಇ ಪರೀಕ್ಷೆಯ ದಿನವೂ ರಜೆ ಪಡೆದಿದ್ದರು. ಮಗನ ಆರೋಗ್ಯ ಸರಿಯಿಲ್ಲ, ಮಗಳು ಮೃತಪಟ್ಟಿದ್ದಾಳೆ ಅಂತೆಲ್ಲ ಸಂದೇಶ ಕಳುಹಿಸಿ ರಜೆ ತೆಗೆದುಕೊಂಡಿದ್ದರು. ಹೆಚ್ಚು ರಜೆ ಪಡೆಯುತ್ತಿದ್ದ ಕಾರಣ ಅವರನ್ನು ಅಮಾನತು ಮಾಡುವುದಾಗಿ ಗುರುಕುಲ ಸಂಸ್ಥೆ ಎಚ್ಚರಿಕೆ ನೀಡಿತ್ತು ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಪಾತ್ರ: ಈ ಪ್ರಕರಣದಲ್ಲಿ ಮೇಡ್ಚಲ್ ಜಿಲ್ಲೆಯಲ್ಲಿ ಕಾನ್​ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೇತಾವತ್ ಶ್ರೀನಿವಾಸ್ ಕೂಡ ಭಾಗಿಯಾಗಿದ್ದಾಗಿ ತಿಳಿದುಬಂದಿದೆ. ಇದರಿಂದ ಆತನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಮಹೆಬೂಬ್‌ನಗರ ಜಿಲ್ಲೆಯ ಮನ್ಸೂರ್ತಳ್ಳಿ ತಾಂಡಾದ ಶ್ರೀನಿವಾಸ್ 2020ರಲ್ಲಿ ಕಾನ್‌ಸ್ಟೇಬಲ್ ಆಗಿ ಆಯ್ಕೆಯಾಗಿದ್ದರು. ಅವರು ಇತ್ತೀಚೆಗೆ ನಡೆದ ಸಬ್​ಇನ್ಸ್‌ಪೆಕ್ಟರ್ ಪೂರ್ವಭಾವಿ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಮೇನ್ಸ್‌ಗೆ ತಯಾರಿ ನಡೆಸಲು ಫೆಬ್ರವರಿ 1 ರಿಂದ ರಜೆಯಲ್ಲಿದ್ದಾರೆ.

ಪ್ರಶ್ನೆಪತ್ರಿಕೆ ಮಾರಾಟ ಮಾಡುವುದಾಗಿ ರೇಣುಕಾ ದೂರವಾಣಿ ಕರೆ ಮಾಡಿದಾಗ ತನಗೆ ಬೇಕಾಗಿಲ್ಲ ಎಂದು ಶ್ರೀನಿವಾಸ್​ ಉತ್ತರಿಸಿದ್ದ. ಅಲ್ಲದೇ, ಎಇ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಕೆಲ ಅಭ್ಯರ್ಥಿಗಳ ಮಾಹಿತಿಯನ್ನು ನೀಡಿದ್ದ ಎಂದು ತಿಳಿದುಬಂದಿದೆ.

ಓದಿ: ಅಮೆರಿಕಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ: ರಷ್ಯಾ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.