ETV Bharat / state

3 ದಶಕಗಳ ಕಾಲ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಪೋಷಿಸಿದ್ದ ಕೆಂಪಣ್ಣ - D Kempanna - D KEMPANNA

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ.ಕೆಂಪಣ್ಣ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಇಂದು ನಿಧನ ಹೊಂದಿದ ಅವರ ಜೀವನ, ಸಾಧನೆ ಇತರ ಮಾಹಿತಿ ಇಲ್ಲಿದೆ.

kempanna
ಡಿ.ಕೆಂಪಣ್ಣ (IANS)
author img

By ETV Bharat Karnataka Team

Published : Sep 19, 2024, 6:01 PM IST

ಬೆಂಗಳೂರು: ಡಿ.ಕೆಂಪಣ್ಣ ಎಂದರೆ ತಟ್ಟನೆ ನೆನಪಾಗುವುದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್. ಅಷ್ಟರಮಟ್ಟಿಗೆ ಅವರ ಹೆಸರು ಅಸೋಸಿಯೇಷನ್ ಜೊತೆ ಥಳುಕು ಹಾಕಿಕೊಂಡಿದೆ. ಸುಮಾರು 3 ದಶಕಗಳ ಕಾಲ ಈ ಸಂಘವನ್ನು ಪೋಷಿಸಿದ ಹೆಗ್ಗಳಿಕೆ ಅವರದ್ದಾಗಿದೆ.

ಇಂದು ಅವರು 84 ವರ್ಷಗಳ ಜೀವನವನ್ನು ಮುಗಿಸಿ, ಇಹಲೋಕ ತ್ಯಜಿಸಿದ್ದಾರೆ. ಇವರು ಪತ್ನಿ, ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ಪುತ್ರ ಬಾಲಾಜಿ ಕೆಂಪಣ್ಣ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ಜ್ಯೋತಿಪುರದ ದೊಡ್ಡಣ್ಣ ಮತ್ತು ಅಕ್ಕಯ್ಯಮ್ಮ ಅವರ ಪುತ್ರರಾಗಿ ಜನಿಸಿದ ಕೆಂಪಣ್ಣ, ಬಾಲ್ಯದಿಂದಲೇ ಸದಾ ಕ್ರಿಯಾಶೀಲರಾಗಿರುವುದನ್ನು ಮೈಗೂಡಿಸಿಕೊಂಡಿದ್ದರು. ಅವರು ಕಾಲಹರಣ ಮಾಡಿದ್ದೇ ಇಲ್ಲ ಎಂಬುದು ಕೆಲ ಆಪ್ತರ ಅಭಿಮತವಾಗಿದೆ.

ಕಾರ್ಮಿಕ ಮುಖಂಡರಾಗಿ ಕಾರ್ಯ ಸೇವೆ: ಪದವಿ ಶಿಕ್ಷಣ ಪೂರ್ಣಗೊಳಿಸದೆ ಬಿಇಎಲ್​ನಲ್ಲಿ ಕಾರ್ಮಿಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ಅಲ್ಲಿಯೂ ತಾವಾಯಿತು ತಮ್ಮ ಕೆಲಸವಾಯಿತು ಎಂದು ಕೈಕಟ್ಟಿ ಕೂರದೆ ಕಾರ್ಮಿಕರನ್ನು ಸಂಘಟಿಸಿದರು. ಸುಮಾರು 2 ದಶಕಗಳ ಕಾಲ ಬಿಇಎಲ್​ನಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದುಕೊಂಡರು. ಅಂದು ಅವರು ಬಿಇಎಲ್​ನಲ್ಲಿ ಕಾರ್ಮಿಕ ಮುಖಂಡರಾಗಿ ನಡೆಸಿದ ಅನೇಕ ಹೋರಾಟಗಳ ಫಲವಾಗಿ ಕಾರ್ಮಿಕರಿಗೆ ಹತ್ತು ಹಲವು ಸೌಲಭ್ಯಗಳು ದೊರೆತವು. ಕೆಂಪಣ್ಣನವರ ಹೋರಾಟದಿಂದ ಜಾರಿಯಾದ ಅನೇಕ ಕಾರ್ಮಿಕ ಪರ ಯೋಜನೆಗಳು ಇಂದಿಗೂ ಇವೆ.

ಗುತ್ತಿಗೆದಾರರಾಗಿ ಕರ್ತವ್ಯ: ಬಿಇಎಲ್​ನಿಂದ ಸ್ವಯಂ ನಿವೃತ್ತಿ ಪಡೆದ ನಂತರ 1980ರಲ್ಲಿ ಗುತ್ತಿಗೆದಾರರಾಗಿ ಮತ್ತೊಂದು ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 20 ವರ್ಷಗಳ ಕಾಲ ಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸಿದರು. ಇವರು ಗುತ್ತಿಗೆದಾರರಾಗಿ ನಿರ್ಮಿಸಿರುವ ಹಲವಾರು ಸೇತುವೆಗಳು, ಮತ್ತಿತರ ಕಟ್ಟಡಗಳು ಇವರ ಬದ್ಧತೆಗೆ ಸಾಕ್ಷಿಗಳಾಗಿವೆ. ಒಬ್ಬ ಗುತ್ತಿಗೆದಾರ ಹೇಗಿರಬೇಕು ಎಂದರೆ ಕೆಂಪಣ್ಣ ಅವರನ್ನು ಅನುಸರಿಸಿ ಎಂದು ಆಗಷ್ಟೇ ವೃತ್ತಿಜೀವನಕ್ಕೆ ಕಾಲಿರಿಸಿದ ಯುವ ಗುತ್ತಿಗೆದಾರರರಿಗೆ ಹಿರಿಯ ಅಧಿಕಾರಿಗಳು ಕಿವಿಮಾತು ಹೇಳುತ್ತಿದ್ದರು ಎನ್ನುವುದನ್ನು ಹಲವು ಕಾಂಟ್ರಾಕ್ಟರ್ಸ್​ ಇಂದಿಗೂ ಸ್ಮರಿಸುತ್ತಾರೆ.

ಸಂಘಟಕರಾಗಿ ಕೆಂಪಣ್ಣ ಯಶಸ್ಸು: ಬಿಇಎಲ್​​ನಲ್ಲಿ ಕಾರ್ಮಿಕ ಮುಖಂಡರಾಗಿದ್ದ ಕೆಂಪಣ್ಣ, ಗುತ್ತಿಗೆದಾರರಾಗಿಯೂ ಅದೇ ಹಾದಿಯಲ್ಲಿ ಸಾಗುತ್ತಾರೆ. 1980ರ ದಶಕದಲ್ಲಿ ನೂರಾರು ಗುತ್ತಿಗೆದಾರರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸೇವೆಯಲ್ಲಿದ್ದರೂ ಅವರಿಗಾಗಿ ಒಂದು ಸಂಘಟನೆ ಇರಲಿಲ್ಲ. ಅಲ್ಲಲ್ಲಿ ಚದುರಿಹೋಗಿದ್ದ ಗುತ್ತಿಗೆದಾರರನ್ನು ಸೇರಿಸಿ ಪಾಲಿಕೆಯ ಗುತ್ತಿಗೆದಾರರ ಸಂಘವನ್ನು ಸ್ಥಾಪಿಸುತ್ತಾರೆ. ಅಲ್ಲಿಂದ ಕಾರ್ಪೋರೇಷನ್ ಗುತ್ತಿಗೆದಾರರಿಗೆ ಮಾನ್ಯತೆ ಸಿಗಲು ಆರಂಭವಾಗುತ್ತದೆ. ಬಿಬಿಎಂಪಿಯಲ್ಲಿ ಇಂದು ಗುತ್ತಿಗೆದಾರರು ಪ್ರಬಲವಾಗಿರುವುದಕ್ಕೆ ಕಾರಣ ಅಂದು ತೆಗೆದುಕೊಂಡ ದಿಟ್ಟ ನಿರ್ಧಾರಗಳೇ ಕಾರಣವಾಗಿವೆ.

ಸಾಧನೆಗಳ ಸರಮಾಲೆ: ಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸುತ್ತಲೇ 1990ರ ದಶಕದಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್‌ಗೆ ಪ್ರವೇಶಿಸುತ್ತಾರೆ. 1992ರಲ್ಲಿ ಕೆಎಸ್‌ಸಿಎ ಕಾರ್ಯಕಾರಿ ಸಮಿತಿ ಸದಸ್ಯರಾಗುವ ಮೂಲಕ ಸಂಘದ ನಂಟು ಬೆಳೆಸಿಕೊಳ್ಳುತ್ತಾರೆ. 1996ರಲ್ಲಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ಇವರ ಸಂಘಟನಾ ಚಾತುರ್ಯವನ್ನು ಗುರುತಿಸಿದ ಅಂದಿನ ಪದಾಧಿಕಾರಿಗಳು, ಕೆಂಪಣ್ಣ ಅವರಿಗೆ 1999ರಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಪಟ್ಟ ಕಟ್ಟುತ್ತಾರೆ. ಅಂದಿನಿಂದ ಗುತ್ತಿಗೆದಾರರ ಸಂಘ ಪ್ರಬಲವಾಗಿ ಬೆಳೆಯುತ್ತದೆ.

1999ರಿಂದ 2015ರ ವರೆಗೆ ಪ್ರಧಾನ ಕಾರ್ಯದರ್ಶಿಯಾಗಿ, 2019ರಿಂದ ಕೆಎಸ್‌ಸಿಎ ಅಧ್ಯಕ್ಷರಾಗಿ ಹಲವು ಮಜಲುಗಳನ್ನು ದಾಟಿದ ಅವರು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಸಂಘವನ್ನು ರಾಜ್ಯದ ಮಟ್ಟಕ್ಕೆ ವಿಸ್ತರಿಸುತ್ತಾರೆ. ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಘದ ಶಾಖೆಗಳನ್ನು ತೆರೆಯಲು ಕಾರಣರಾದರು. ಅ ಮೂಲಕ ಗುತ್ತಿಗೆದಾರರಿಗೆ ಶಕ್ತಿ ತುಂಬಲು ಪ್ರಯತ್ನಿಸಿದರು. ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಗುತ್ತಿಗೆದಾರರಿದ್ದು, ಅವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ರಾಜ್ಯ ಅಸೋಸಿಯೇಷನ್ ಜೊತೆ ಸಂಬಂಧ ಹೊಂದಿದ್ದಾರೆ. 48 ಗುತ್ತಿಗೆದಾರರ ಸಂಘಗಳು ಕೆಎಸ್‌ಸಿಎ ಸದಸ್ಯತ್ವ ಪಡೆದುಕೊಂಡಿವೆ.

ರಾಜ್ಯಮಟ್ಟದ ಸಮ್ಮೇಳನ ಯಶಸ್ವಿ: ಪ್ರಧಾನ ಕಾರ್ಯದರ್ಶಿಯಾಗಿ ಒಂದು ಹಾಗೂ ಅಧ್ಯಕ್ಷರಾಗಿ ಎರಡು ರಾಜ್ಯಮಟ್ಟದ ಸಮ್ಮೇಳನಗಳನ್ನು ಕೆಂಪಣ್ಣ ಯಶಸ್ವಿಯಾಗಿ ನಡೆಸಿದ್ದರು. ಈ ಸಮ್ಮೇಳನಗಳ ಫಲಶ್ರುತಿಯಾಗಿ ಗುತ್ತಿಗೆದಾರರ ಹಲವು ಬೇಡಿಕೆಗಳು ಈಡೇರಿವೆ. ನಿರಂತರ ಹೋರಾಟದ ಫಲವಾಗಿ ಕಳೆದ ಕೆಲವು ವರ್ಷಗಳಿಂದ ಗುತ್ತಿಗೆದಾರರ ಸಂಘವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತು. ಅವರು ಚುಕ್ಕಾಣಿ ಹಿಡಿದ ನಂತರ ಸರ್ಕಾರವು ಬಜೆಟ್ ಪೂರ್ವಭಾವಿ ಸಭೆಗಳಿಗೆ ಸಂಘವನ್ನು ಆಹ್ವಾನಿಸಿ ಚರ್ಚೆ ನಡೆಸುತ್ತಿದೆ. ಗುತ್ತಿಗೆದಾರರಿಗೆ ಸಂಬಂಧಪಟ್ಟ ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳು ಸಂಘದೊಂದಿಗೆ ನಿರಂತರ ಸಂಪರ್ಕದಲ್ಲಿವೆ.

ಟೆಂಡರ್, ಎಸ್​ಆರ್ ದರ ನಿಗದಿ, ಎಲ್​ಒಸಿ ಸೇರಿದಂತೆ ಹಲವಾರು ಬೆಳವಣಿಗೆಗಳನ್ನು ಕುರಿತು ಕಾಲಕಾಲಕ್ಕೆ ಮಾತುಕತೆ ನಡೆಸುತ್ತವೆ. ಕೋವಿಡ್-19ಗೆ ಬಲಿಯಾದ ಎಲ್ಲ ಗುತ್ತಿಗೆದಾರರ ಕುಟುಂಬಗಳಿಗೆ ನೈತಿಕ ಸ್ಥೈರ್ಯ ತುಂಬಿ ಪತ್ರ ಬರೆದಿದ್ದ ಕೆಂಪಣ್ಣ, ಕಳೆದ ವರ್ಷ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಲ್ಲಿ ಗುತ್ತಿಗೆದಾರರ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸಿ ಗಮನ ಸೆಳೆದಿದ್ದರು.

ಹವ್ಯಾಸಗಳ ಗಣಿ ಕೆಂಪಣ್ಣ: ಕೆಂಪಣ್ಣ ಅವರ ಹವ್ಯಾಸಗಳೇ ವಿಶಿಷ್ಟವಾಗಿದ್ದವು. ಓದು, ಪ್ರವಾಸ, ಮಾಹಿತಿ ಸಂಗ್ರಹ ಹೀಗೆ ಹತ್ತು ಹಲವು ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದರು. ಪ್ರತಿದಿನ ವೃತ್ತಪತ್ರಿಕೆಗಳು ಮತ್ತು ಮ್ಯಾಗಜಿನ್‌ಗಳನ್ನು ಕೂಲಂಕಷವಾಗಿ ಓದುತ್ತಿದ್ದರು. ಮಹತ್ವದ ಮತ್ತು ಆಸಕ್ತದಾಯಕ ವಿಷಯಗಳನ್ನು ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸುತ್ತಿದ್ದರು. ವಿಶ್ವದ ಹಲವು ದೇಶಗಳಿಗೆ ಭೇಟಿ ಕೂಡ ನೀಡಿ ಅಲ್ಲಿನ ಅನುಭವವನ್ನು ಗುತ್ತಿಗೆದಾರರ ಸಂಘಕ್ಕೆ ಧಾರೆ ಎರೆದ ಅವರು ಇಂದು ಮರೆಯಾಗಿದ್ದಾರೆ. ಇದು ಗುತ್ತಿಗೆದಾರರ ಸಂಘಕ್ಕೆ ತುಂಬಲಾರದ ನಷ್ಟ ಅಂತಲೇ ಹೇಳಬಹುದು.

ಇದನ್ನೂ ಓದಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇನ್ನಿಲ್ಲ - Kempanna Passes away

ETV Bharat Logo

Copyright © 2025 Ushodaya Enterprises Pvt. Ltd., All Rights Reserved.