ETV Bharat / bharat

ಸಂಸತ್​ ದಾಳಿ ನಡೆದು ಇಂದಿಗೆ 19 ವರ್ಷ : ಹುತಾತ್ಮರಾದವರಿಗೆ ಗಣ್ಯರಿಂದ ನಮನ

author img

By

Published : Dec 13, 2020, 11:18 AM IST

2001ರ ಡಿಸೆಂಬರ್ 13 ರಂದು ಸಂಸತ್​ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದವರಿಗೆ ಟ್ವೀಟ್​ ಮಾಡಿ ಗಣ್ಯರು ಗೌರವ ಸಲ್ಲಿಸಿದ್ದಾರೆ..

2001 Parliament attack
ಸಂಸತ್​

ನವದೆಹಲಿ : 2001ರಲ್ಲಿ ಸಂಸತ್​ ಮೇಲೆ ನಡೆದ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ನಮನ ಸಲ್ಲಿಸಿದ್ದಾರೆ.

  • The nation gratefully remembers the brave martyrs who laid down their lives defending the Parliament on this day in 2001. While commemorating the great sacrifice of those defenders of the temple of our democracy, we strengthen our resolve to defeat the forces of terror.

    — President of India (@rashtrapatibhvn) December 13, 2020 " class="align-text-top noRightClick twitterSection" data=" ">

"2001ರಲ್ಲಿ ಈ ದಿನದಂದು ಸಂಸತ್ತನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದ ಕೆಚ್ಚೆದೆಯ ಹುತಾತ್ಮರನ್ನು ರಾಷ್ಟ್ರವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ. ನಮ್ಮ ಪ್ರಜಾಪ್ರಭುತ್ವದ ದೇವಾಲಯದ ರಕ್ಷಕರ ಮಹತ್ತರ ತ್ಯಾಗವನ್ನು ಸ್ಮರಿಸುವ ಈ ವೇಳೆ ಭಯೋತ್ಪಾದಕ ಶಕ್ತಿಗಳನ್ನು ಸೋಲಿಸುವ ನಮ್ಮ ಸಂಕಲ್ಪವನ್ನು ನಾವು ಮತ್ತಷ್ಟು ಬಲಪಡಿಸಿಕೊಳ್ಳುತ್ತೇವೆ" ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.

  • We will never forget the cowardly attack on our Parliament on this day in 2001. We recall the valour and sacrifice of those who lost their lives protecting our Parliament. India will always be thankful to them.

    — Narendra Modi (@narendramodi) December 13, 2020 " class="align-text-top noRightClick twitterSection" data=" ">

ಟ್ವೀಟ್ ಮಾಡಿ ಹುತಾತ್ಮರನ್ನು ಸ್ಮರಿಸಿರುವ ಪಿಎಂ ಮೋದಿ, "ನಮ್ಮ ಸಂಸತ್ತಿನ ಮೇಲಿನ ಹೇಡಿತನದ ದಾಳಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ಸಂಸತ್ತನ್ನು ರಕ್ಷಿಸುವ ವೇಳೆ ಪ್ರಾಣ ಕಳೆದುಕೊಂಡವರ ಶೌರ್ಯ ಮತ್ತು ತ್ಯಾಗವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಭಾರತ ಅವರಿಗೆ ಯಾವಾಗಲೂ ಕೃತಜ್ಞರಾಗಿರಬೇಕು" ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್ ಭವನವು 'ಆತ್ಮನಿರ್ಭರ ಭಾರತ' ನಿರ್ಮಾಣಕ್ಕೆ ಸಾಕ್ಷಿ : ಭೂಮಿ ಪೂಜೆ ಬಳಿಕ ಮೋದಿ ಮಾತು

"ಸಂಸತ್ತನ್ನು ರಕ್ಷಿಸುವ ಉದ್ದೇಶದಿಂದ 2001ರಲ್ಲಿ ಈ ದಿನ ಪ್ರಾಣ ಕಳೆದುಕೊಂಡ ಪೊಲೀಸ್ ಮತ್ತು ಸಂಸತ್ತಿನ ಸಿಬ್ಬಂದಿಗೆ ನನ್ನ ವಿನಮ್ರ ನಮನ. ಅವರ ನಿಷ್ಠೆ ಮತ್ತು ಶೌರ್ಯವು ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

2001ರ ಡಿಸೆಂಬರ್ 13 ರಂದು ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಮುಂದೂಡಿಕೆಯಾದ 40 ನಿಮಿಷಗಳ ಬಳಿಕ ಸಂಸತ್​ ಆವರಣದಲ್ಲಿ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್​- ಇ -ತೊಯ್ಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಎಂ) ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಂಸತ್​ ಭವನದಲ್ಲಿ 100 ಸದಸ್ಯರು ಉಪಸ್ಥಿತರಿದ್ದರು. ಉಗ್ರರ ವಿರುದ್ಧ ಹೋರಾಡುವ ವೇಳೆ ಪೊಲೀಸರು, ಸಂಸತ್ತಿನ ಸಿಬ್ಬಂದಿ ಸೇರಿ 14 ಮಂದಿ ಹುತಾತ್ಮರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.