ಮಂಡಿ (ಹಿಮಾಚಲ ಪ್ರದೇಶ): ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಅವರ ಹೇಳಿಕೆಯೊಂದು ವಿವಾದವನ್ನು ಹುಟ್ಟುಹಾಕಿದೆ. ಮಾಂಸ ತಿನ್ನುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಬೇಕೆಂದು ಹೇಳಿದ್ದಾರೆ ಎನ್ನಲಾಗುವ ವಿಡಿಯೋ ವೈರಲ್ ಆಗಿದೆ. ಏಕೆಂದರೆ, ಮಾಂಸ ಸೇವನೆಯು ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತದೆ ಎಂಬ ಅರ್ಥದ ಮಾತುಗಳನ್ನು ಅವರು ಹೇಳಿದ್ದಾರೆ ಎನ್ನಲಾಗಿದೆ.
ಮುಗ್ಧ ಪ್ರಾಣಿಗಳನ್ನು ವಧೆ ಮಾಡುವುದು ನಿಲ್ಲಿಸದಿದ್ದರೆ ಹಿಮಾಚಲ ಪ್ರದೇಶವು ಗಮನಾರ್ಹ ಸಂಕಷ್ಟ ಅನುಭವಿಸುತ್ತದೆ ಎಂದೂ ಐಐಟಿ ನಿರ್ದೇಶಕರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಾಕಷ್ಟು ಹರಿದಾಡುತ್ತಿದೆ.
-
Director of an IIT. Why is Himachal having landslides? Because of unplanned construction/deforestation/climate change/all of the above? No. Because of meat-eating.
— Rahul Siddharthan (@rsidd120) September 7, 2023 " class="align-text-top noRightClick twitterSection" data="
Is he saying farming animals leads to deforestation? No. He says it leads to cloudbursts.https://t.co/uudBNxWUCO
">Director of an IIT. Why is Himachal having landslides? Because of unplanned construction/deforestation/climate change/all of the above? No. Because of meat-eating.
— Rahul Siddharthan (@rsidd120) September 7, 2023
Is he saying farming animals leads to deforestation? No. He says it leads to cloudbursts.https://t.co/uudBNxWUCODirector of an IIT. Why is Himachal having landslides? Because of unplanned construction/deforestation/climate change/all of the above? No. Because of meat-eating.
— Rahul Siddharthan (@rsidd120) September 7, 2023
Is he saying farming animals leads to deforestation? No. He says it leads to cloudbursts.https://t.co/uudBNxWUCO
ಒಳ್ಳೆಯ ಮನುಷ್ಯರಾಗಲು, ನೀವು ಏನು ಮಾಡಬೇಕು ಎಂದು ಕೇಳುವ ಮೂಲಕ, ಮಾಂಸ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡುವುದು ವಿಡಿಯೋದಲ್ಲಿ ಇದೆ ಎನ್ನಲಾಗಿದೆ. "ಮಾಂಸ ತಿನ್ನುವುದು ಬೇಡ" ಎಂಬ ಪದಗಳನ್ನು ಪುನರಾವರ್ತನೆ ಮಾಡಿಸಿ, ಏಕ್ ಸಾಥ್, ಧಂಗ್ ಸೆ ಬೋಲೋ (ಏಕಸ್ವರದಲ್ಲಿ ಹೇಳಿ ಮತ್ತು ಸರಿಯಾಗಿ ಹೇಳಿ) ಎಂದು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದೇ ರೀತಿ ಮತ್ತೆ ಮತ್ತೆ ನಿರ್ದೇಶನ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
ಹಿಮಾಚಲ ಪ್ರದೇಶದಲ್ಲಿ ಮುಗ್ಧ ಪ್ರಾಣಿಗಳ ವಧೆ ಮಾಡುತ್ತಿದ್ದೀರಿ. ಇದು ಪರಿಸರದ ಅವನತಿಯೊಂದಿಗೆ ಸಂಬಂಧ ಹೊಂದಿದೆ. ಪ್ರಾಣಿಗಳ ಹತ್ಯೆ ಮತ್ತು ಪರಿಸರದ ನಡುವಿನ ಸಂಬಂಧವನ್ನು ಜನರು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದರೆ, ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಇತರ ನೈಸರ್ಗಿಕ ವಿಕೋಪಗಳು ಪ್ರಾಣಿಗಳ ಮೇಲಿನ ಕ್ರೌರ್ಯದ ಪರಿಣಾಮಗಳಾಗಿವೆ ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಳಗಾಗುವುದರೊಳಗೆ ರೈತ ಕೋಟ್ಯಧಿಪತಿ.. ಕೃಷಿಕನ ಖಾತೆಗೆ 200 ಕೋಟಿ ಜಮಾ... ದೃಢೀಕರಣಕ್ಕೆ ಪೊಲೀಸರ ನಕಾರ..!