ಮುಂಬೈ: ಲತಾ ಮಂಗೇಶ್ಕರ್ ಅವರನ್ನು ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿನಿಂದಾಗಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆರಂಭದಲ್ಲಿ ಅವರನ್ನು ನೇರವಾಗಿ ಐಸಿಯುಗೆ ಸೇರಿಸಲಾಗಿತ್ತು.ಈ ಸಂಬಂಧ ಮಾತನಾಡಿರುವ ವೈದ್ಯ ಪ್ರತೀತ್ ಸಮ್ದಾನಿ ಮಾತನಾಡಿ, ಅವರು ಇನ್ನೂ ಐಸಿಯು ವಾರ್ಡ್‌ನಲ್ಲಿದ್ದಾರೆ, ನಾವು ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ.ಅವರ ಸ್ಥಿತಿ ಸುಧಾರಿಸಿದೆ. ಆದರೆ ವಯಸ್ಸಿನ ಕಾರಣದಿಂದ ಅವರು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಇದನ್ನೂ ಓದಿ :18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಧನುಷ್!
ಲತಾ ಮಂಗೇಶ್ಕರ್ ಭಾನುವಾರ ರಾತ್ರಿ ಚೆನ್ನಾಗಿ ಊಟ ಮಾಡಿದ್ದಾರೆ ಎಂದು ವರದಿಯಾಗಿತ್ತು. ಅವರು ತುಂಬಾ ದಿನಗಳ ನಂತರ ಈ ರೀತಿಯಾಗಿ ಆಹಾರ ಸೇವನೆ ಮಾಡಿದ್ದರಂತೆ. . ವೈದ್ಯರ ಪ್ರಕಾರ, ಲತಾ ಮಂಗೇಶ್ಕರ್ ಅವರು ಕೊರೊನಾ ಮತ್ತು ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.