ETV Bharat / bharat

ಯುಪಿಯ 46 ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಲಷ್ಕರ್ ಉಗ್ರರಿಂದ ಬೆದರಿಕೆ ಪತ್ರ.. ತೀವ್ರ ಕಟ್ಟೆಚ್ಚರ - ದೇಶದ 46 ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಲಷ್ಕರ್ ಉಗ್ರರಿಂದ ಬೆದರಿಕೆ ಪತ್ರ

ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ನಡುವೆ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಉತ್ತರ ಪ್ರದೇಶದ ರೈಲ್ವೆ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಉಗ್ರರು ಪತ್ರ ಬರೆದಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

lashkar-e-taiba-threatened-to-blow-up-46-stations-including-lucknow-and-varanasi
ದೇಶದ 46 ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಲಷ್ಕರ್ ಉಗ್ರರಿಂದ ಬೆದರಿಕೆ ಪತ್ರ
author img

By

Published : Nov 1, 2021, 11:16 AM IST

ಲಖನೌ (ಉ.ಪ್ರ): ಲಖನೌ ಮತ್ತು ವಾರಣಾಸಿ ಸೇರಿ ಉತ್ತರ ಪ್ರದೇಶದ 46 ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಲಷ್ಕರ್-ಎ-ತೋಯ್ಬಾ ಸಂಘಟನೆ ಬರೆದಿರುವ ಬೆದರಿಕೆ ಪತ್ರ ಉತ್ತರ ಪ್ರದೇಶದಲ್ಲಿ ಭೀತಿಗೆ ಕಾರಣವಾಗಿದೆ. ಬೆದರಿಕೆ ಪತ್ರ ಹಿನ್ನೆಲೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ತನಿಖೆ ಆರಂಭಗೊಂಡಿದೆ.

ಬೆದರಿಕೆ ಪತ್ರ ಬಂದ ನಂತರ ರೈಲ್ವೆ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಲಖನೌದ ಚಾರ್‌ಬಾಗ್ ರೈಲು ನಿಲ್ದಾಣ ಮತ್ತು ಲಖನೌ ಜಂಕ್ಷನ್‌ನಲ್ಲಿ ಜಿಆರ್‌ಪಿ ಮತ್ತು ಆರ್‌ಪಿಎಫ್ ಪಡೆ ಕಣ್ಗಾವಲು ಹೆಚ್ಚಿಸಿದೆ. ನಮಗೆ ಇಂತಹ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆಗಳು ಬಂದಿದ್ದವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಿದ್ದರು ಯಾವುದೇ ನಿರ್ಲಕ್ಷ್ಯ ವಹಿಸದೆ ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆ ಪ್ರತಿ ಮುಂಭಾಗದಲ್ಲೂ ಜಿಆರ್‌ಪಿ ಮತ್ತು ಆರ್‌ಪಿಎಫ್‌ ಸಿಬ್ಬಂದಿ ಸಜ್ಜಾಗಿದ್ದಾರೆ. ಭಯೋತ್ಪಾದಕ ಸಂಘಟನೆಯ ಬೆದರಿಕೆಯ ಬಗ್ಗೆ ಗುಪ್ತಚರ ಇಲಾಖೆಯಿಂದ ಅಲರ್ಟ್ ಬಂದ ನಂತರ ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರೈಲ್ವೆ ಇಲಾಖೆಯ ಜಿಆರ್‌ಪಿ ಮತ್ತು ಆರ್‌ಪಿಎಫ್ ಸಿಬ್ಬಂದಿಯ ಹಿರಿಯ ಅಧಿಕಾರಿಗಳು ನಿಲ್ದಾಣಗಳಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಸ್ತುಗಳ ಕಂಡುಬಂದರೆ ತಕ್ಷಣವೇ ರೈಲ್ವೆ ನಿಲ್ದಾಣದಲ್ಲಿನ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ನಿಲ್ದಾಣಗಳಲ್ಲಿ ಮಾತ್ರವಲ್ಲದೆ ಆವರಣದಲ್ಲೂ ಗಸ್ತು ತಿರುಗುವಂತೆ ಯೋಧರಿಗೆ ತಿಳಿಸಲಾಗಿದೆ.

2018ರಲ್ಲೂ ಇದೇ ರೀತಿಯ ಬೆದರಿಕೆ ಪತ್ರ ಬಂದಿತ್ತು. ಆದರೆ ಯಾವುದೇ ಹಾನಿಯಾಗಿರಲಿಲ್ಲ. ಈ ಪತ್ರವು ಲಷ್ಕರ್-ಎ-ತೋಯ್ಬಾದ ಪ್ರದೇಶ ಕಮಾಂಡರ್​ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಬೆದರಿಕೆ ಪತ್ರ ಬಂದ ನಂತರ ನಿಲ್ದಾಣದ ಮೂಲಕ ಹಾದುಹೋಗುವ ರೈಲುಗಳು ಹಾಗೂ ಇಲ್ಲಿಂದ ಹೊರಡುವ ರೈಲುಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸು ರೈಲುಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಸಾಕಷ್ಟು ಪ್ರಯಾಣಿಕರು ರೈಲು ಪ್ರಯಾಣ ಮಾಡುತ್ತಾರೆ. ಹೀಗಾಗಿ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಹೆಚ್ಚು ಪರಿಶೀಲನೆ ಮಾಡಲಾಗುತ್ತಿದೆ ಎಂದಿದ್ದಾರೆ.

ಓದಿ: ಒಂದೇ ದೇಹ ಎರಡು ಆತ್ಮದಂತಿದ್ದ ಈ ಸಯಾಮಿ ಸಹೋದರರು ಇನ್ನಿಲ್ಲ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.