ETV Bharat / bharat

ಆರ್ಡರ್ ಮಾಡಿದ್ದು ಲ್ಯಾಪ್​ಟಾಪ್​.. ಗ್ರಾಹಕನ ಕೈಗೆ ಸಿಕ್ಕಿದು ಮಾತ್ರ ಇಟ್ಟಿಗೆ! - ಈಟಿವಿ ಭಾರತ ಕನ್ನಡ

ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್ ಆರ್ಡರ್ ಮಾಡಲಾಗಿತ್ತು, ಆದರೆ ಗ್ರಾಹಕನಿಗೆ ತಲುಪಿದ್ದು ಮಾತ್ರ ಇಟ್ಟಿಗೆ. ಇಂತಹದ್ದೊಂದು ಘಟನೆ ಬಿಹಾರದಲ್ಲಿ ನಡೆದಿದೆ.

ಆರ್ಡರ್ ಮಾಡಿದ್ದು ಲ್ಯಾಪ್​ಟಾಪ್
ಆರ್ಡರ್ ಮಾಡಿದ್ದು ಲ್ಯಾಪ್​ಟಾಪ್
author img

By

Published : Jul 29, 2022, 4:56 PM IST

Updated : Jul 29, 2022, 7:02 PM IST

ಪಾಟ್ನಾ(ಬಿಹಾರ): ಇತ್ತೀಚಿನ ದಿನಗಳಲ್ಲಿ ಆನ್​ಲೈನ್​​ ಶಾಪಿಂಗ್ ಹೆಚ್ಚಾಗಿ ನಡೆಯುತ್ತಿದ್ದು, ಲಕ್ಷಾಂತರ ಗ್ರಾಹಕರು ತಮ್ಮಿಷ್ಟದ ಸಾಮಗ್ರಿ ವಿವಿಧ ಆನ್​ಲೈನ್​ ಕಂಪನಿಗಳ​​ ಮೂಲಕ ಆರ್ಡರ್ ಮಾಡಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಅನೇಕ ಮೋಸ ಸಹ ನಡೆಯುತ್ತಿದ್ದು, ಅಂತಹದೊಂದು ಪ್ರಕರಣ ಸದ್ಯ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ದೆಹಲಿಯಲ್ಲಿರುವ ವ್ಯಕ್ತಿಯೊಬ್ಬ ಪಾಟ್ನಾದಲ್ಲಿರುವ ತನ್ನ ತಂದೆಗೋಸ್ಕರ ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದರು. ಆದರೆ, ಲ್ಯಾಪ್​ಟಾಪ್​ ಬದಲಿಗೆ ಇಟ್ಟಿಗೆ ಹಾಗೂ ಕೆಲವೊಂದು ಪುಸ್ತಕ ಬಂದಿವೆ. ಅಮೆಜಾನ್​​ ಕಂಪನಿಯಿಂದ ಈ ಎಡವಟ್ಟು ನಡೆದಿದೆ.

ಆರ್ಡರ್ ಮಾಡಿದ್ದು ಲ್ಯಾಪ್​ಟಾಪ್​.. ಗ್ರಾಹಕನ ಕೈಗೆ ಸಿಕ್ಕಿದು ಮಾತ್ರ ಇಟ್ಟಿಗೆ!

ಇದನ್ನೂ ಓದಿರಿ: ಸಚಿವರ ಬರ್ತಡೇ ಕಾರ್ಯಕ್ರಮದಲ್ಲಿ ಭಾಗಿಯಾಗದ ಆರೋಪ..ನಾಲ್ವರು ಸರ್ಕಾರಿ ನೌಕರರ ಅಮಾನತು,ನೋಟಿಸ್​ ಜಾರಿ

ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಸೌರವ್​ ಸುಮನ್​ ತನ್ನ ತಂದೆ ಶ್ಯಾಮ್ ಸುಂದರ್​​ ಪ್ರಸಾದ್​​ಗೋಸ್ಕರ ಅಮೆಜಾನ್​ ಆನ್​ಲೈನ್ ಮೂಲಕ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದರು. ಕಳೆದ ಬುಧವಾರ ಆರ್ಡರ್ ಬಂದಿದೆ. ಅದನ್ನ ತೆರೆದು ನೋಡಿದಾಗ ಅದರೊಳಗೆ ಇಟ್ಟಿಗೆ ಹಾಗೂ ಕೆಲವೊಂದು ಪುಸ್ತಕ ಕಂಡು ಬಂದಿವೆ. ಇನ್ನೂ ಲ್ಯಾಪ್​ಟಾಪ್​ಗೋಸ್ಕರ ಸೌರವ್ ಮುಂಗಡವಾಗಿ 34,600 ರೂಪಾಯಿ ಪಾವತಿ ಮಾಡಿದ್ದರು ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸೌರವ್​​ ಪ್ರಕರಣ ದಾಖಲು ಮಾಡಿದ್ದು, ತನಿಖೆ ನಡೆಸಲು ಜುಲೈ 31ರವರೆಗೆ ಕಾಲಾವಕಾಶ ಕೇಳಿದೆ. ಈ ಹಿಂದೆ ಸಹ ಇಂತಹ ಅನೇಕ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ.

Last Updated : Jul 29, 2022, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.