ETV Bharat / bharat

ಹಿಮಕುಸಿತಕ್ಕೆ ಯೋಧ ಸಾವು: ನಾಲ್ಕು ದಿನಗಳ ನಂತರ ಮೃತದೇಹ ಪತ್ತೆ - soldier died in avalanche

ಅರುಣಾಚಲ ಪ್ರದೇಶದ ತವಾಂಗ್​ನಲ್ಲಿ ಉಂಟಾದ ಹಿಮಕುಸಿತದಲ್ಲಿ ಯೋಧ ಸಾವನ್ನಪ್ಪಿದ್ದಾರೆ.

ಹಿಮಕುಸಿತಕ್ಕೆ ಓರ್ವ ಯೋಧ ಸಾವು
ಹಿಮಕುಸಿತಕ್ಕೆ ಓರ್ವ ಯೋಧ ಸಾವು
author img

By

Published : Apr 2, 2023, 8:56 AM IST

ತೇಜ್‌ಪುರ (ಅಸ್ಸಾಂ): ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಸೇನೆಯ ಮುಂಚೂಣಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ದಿಢೀರ್ ಹಿಮಕುಸಿತ ಉಂಟಾಗಿ ಓರ್ವ ಯೋಧ ನಿಧನ ಹೊಂದಿದ್ದಾರೆ. ಹಿಮಗಡ್ಡೆಯ ಕೆಳಗೆ ಇವರು ಸಿಲುಕಿದ್ದರು. ತೀವ್ರ ರಕ್ತಸ್ರಾವವಾಗಿತ್ತು. ಇವರೊಂದಿಗಿದ್ದ ಉಳಿದ ಯೋಧರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಸುಬೇದಾರ್ ಎ.ಎಸ್.ಧಗಲ್ ಮೃತರು. ಇವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ನಿವಾಸಿ. ಚೀನಾ ಗಡಿಗೆ ಹೊಂದಿಕೊಂಡಿರುವ ತವಾಂಗ್​ ಸೆಕ್ಟರ್​ನ ಮುಂಚೂಣಿ ಪ್ರದೇಶದಲ್ಲಿ ಮಾರ್ಚ್​ 27 ರಂದು ಹಿಮಕುಸಿತ ಉಂಟಾಗಿತ್ತು. ಕಾರ್ಯಾಚರಣೆಯಲ್ಲಿದ್ದ ಸೇನಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇತರೆ ಯೋಧರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ, ಧಗಲ್​ ಅವರು ನಾಪತ್ತೆಯಾಗಿದ್ದರು.

6 ರಿಂದ 7 ಅಡಿಯಷ್ಟು ಬಿದ್ದಿದ್ದ ಹಿಮ ರಾಶಿಯಡಿ ಧಗಲ್​ ಕಣ್ಮರೆಯಾಗಿದ್ದರು. ಕೂಡಲೇ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಭಾರಿ ಪ್ರಮಾಣದಲ್ಲಿ ಹಿಮಪಾತವಾದ ಕಾರಣ ಶೋಧ ಕಾರ್ಯಾಚರಣೆ ಆರಂಭದಲ್ಲಿ ಬಹಳ ಕಷ್ಟಕರವಾಗಿತ್ತು. ಸೇನಾ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯ ಬಳಿಕ ಸುಬೇದಾರ ಧಗಲ್​ ಅವರ ದೇಹವನ್ನು ಪತ್ತೆ ಮಾಡಿ, ಹಿಮದ ರಾಶಿಯಿಂದ ಹೊರತೆಗೆಯಲಾಯಿತು. ಹಿಮಬಂಡೆಗಳ ಅಡಿಯಲ್ಲಿ ಬಿದ್ದು ಸುಬೇದಾರ್​ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ.

ಇದನ್ನೂ ಓದಿ: ರಜೆಗೆಂದು ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ನಿಧನ..

ಸೇನಾ ತಂಡಗಳ ನಾಲ್ಕು ದಿನಗಳ ವ್ಯಾಪಕ ಶೋಧದ ನಂತರ ಭೂಕುಸಿತ ಸ್ಥಳದಿಂದ ಸುಬೇದಾರ್ ಧಗಲೆ ಅವರ ಮೃತದೇಹವನ್ನು ಹೊರತೆಗೆಯಲಾಯಿತು. ಬಳಿಕ ತವಾಂಗ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಎ.ಎಸ್.ಧಗಲೆ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

"ಪಾರ್ಥಿವ ಶರೀರವನ್ನು ಮಹಾರಾಷ್ಟ್ರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಅದಕ್ಕೂ ಮೊದಲು, ತವಾಂಗ್‌ನಲ್ಲಿ ಸೇನಾ ಗೌರವ ಸಲ್ಲಿಸಲಾಗುತ್ತದೆ. ಭಾನುವಾರ ತವರೂರಿಗೆ ಕಳುಹಿಸಲಾಗುವುದು" ಎಂದು ರಕ್ಷಣಾ ವಕ್ತಾರ ಮಹೇಂದ್ರ ರಾವತ್ ತಿಳಿಸಿದ್ದಾರೆ.

ಆನೆ ದಾಳಿಗೆ ಯೋಧ ಬಲಿ: ಬೆಂಗಳೂರಿನ ಬನ್ನೇರುಘಟ್ಟದ ಕಗ್ಗಲೀಪುರ ಮುಖ್ಯರಸ್ತೆಯ ಸಿಆರ್‌ಪಿಎಫ್ ಡಾಗ್ ಸ್ಕ್ವಾಡ್ ಕೇಂದ್ರದ ಬಳಿ ಯೋಧನ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದು ಹಾಕಿದ್ದ ಘಟನೆ ಈಚೆಗೆ ನಡೆದಿತ್ತು. ಹೆಚ್.ಎನ್.ಸಿಂಗ್ (33) ಮೃತರು. ಸೇನಾ ಕೇಂದ್ರದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ವೇಳೆ ಸಿಂಗ್ ಅವರ ಮೇಲೆ ಆನೆ ದಾಳಿ ಮಾಡಿತ್ತು.

ಯೋಧ ಹೆಚ್‌.ಎನ್.ಸಿಂಗ್ ಅವರನ್ನು ತಿವಿದು, ತುಳಿದು ತೀವ್ರ ಗಾಯ ಮಾಡಿತ್ತು. ತೀವ್ರ ರಕ್ತಸ್ರಾವಕ್ಕೀಡಾಗಿ ಸಾವನ್ನಪ್ಪಿದ್ದ ಅವರನ್ನು ಗಮನಿಸಿದ ಸಹೋದ್ಯೋಗಿಗಳು, ಕೂಡಲೇ ತಲಘಟ್ಟಪುರ ಪೊಲೀಸರು ಹಾಗು ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು.

ಇದನ್ನೂ ಓದಿ: ಕಡಬ: ಹೃದಯಾಘಾತದಿಂದ ಯೋಧ ಸಾವು; ಇಂದು ಹುಟ್ಟೂರಿಗೆ ಪಾರ್ಥಿವ ಶರೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.