ETV Bharat / bharat

‘ಮಹಾ’ ಮಳೆಗೆ ಕೊಲ್ಲಾಪುರದಲ್ಲಿ ಭೂ ಕುಸಿತ : 21 ಮಂದಿ ಬಲಿ

author img

By

Published : Jul 25, 2021, 7:16 AM IST

ನೆರೆಯ ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ಭೂ ಕುಸಿತ, ರಸ್ತೆ ಕುಸಿತ ಮುಂದುವರಿದಿದೆ. ಒಂದೇ ಜಿಲ್ಲೆಯಲ್ಲಿ 21 ಜನರು ಮೃತಪಟ್ಟಿದ್ದಾರೆ.

ರಸ್ತೆ ಕುಸಿತ
ರಸ್ತೆ ಕುಸಿತ

ಮುಂಬೈ(ಮಹಾರಾಷ್ಟ್ರ): ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಹುತೇಕ ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು, ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊಲ್ಲಾಪುರ ಜಿಲ್ಲೆಯ ಗಗನ್​ ಬೌಡಾ ತಾಲೂಕಿನ ಧುಂಡ್​ವಾಡೆ ಗ್ರಾಮದ ರಸ್ತೆ ಕುಸಿದಿದ್ದು, ಅಂಡೂರು ಅಣೆಕಟ್ಟು ಕುಸಿಯುವ ಭೀತಿ ಶುರುವಾಗಿದೆ.

‘ಮಹಾ’ ಮಳೆಗೆ ಕೊಲ್ಲಾಪುರದಲ್ಲಿ ರಸ್ತೆ ಕುಸಿತ, ಭೂ ಕುಸಿತ

ಈ ರಸ್ತೆ ಕುಸಿದಿದ್ದರಿಂದ 15-20 ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಜನತೆ ಪರದಾಡುತ್ತಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಾಲೂಕಿನ ಧುಂಡ್​​ವಾಡೆ, ಚೌಧರ್ವಾಡಿ, ಖೇರಿವಾಡೆ, ಶೆಲೋಶಿ, ಜಾರ್ಗಿ, ಗರಿವಾಡೆ, ಬೊರ್ಬೆಟ್, ಬವೇಲಿ, ಕಡ್ವೆ, ಚೌಕೆ, ಮ್ಯಾನ್‌ಬೆಟ್, ಕಂದ ಗಾಂವ್, ರಾಹಿ, ಮಸೂರ್ಲಿ, ಗವಾಶಿ, ಕೊನೊಲಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಭೂ ಕುಸಿತ, ಏರುತ್ತಿರುವ ಸಾವಿನ ಸಂಖ್ಯೆ

ಅಂಬೆಘರ್​, ಧೋಕವಾಲೆ, ಮಿರ್ಗಾಂವ್​​ನಲ್ಲಿ ನಿನ್ನೆ ಸಂಭವಿಸಿದ ಭೂ ಕುಸಿತದಲ್ಲಿ ಅಂದಾಜು 21 ಮಂದಿ ಮೃತಪಟ್ಟಿದ್ದಾರೆ. 8 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಎನ್​ಡಿಆರ್​ಎಫ್ ತಂಡ ಶೋಧ ಕಾರ್ಯ ನಡೆಸುತ್ತಿದೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ: 112 ಜನ ಸಾವು, 99 ಮಿಸ್ಸಿಂಗ್

ಭಾರಿ ಅವಾಂತರಗಳು ಸಂಭವಿಸಿರುವ ಹಿನ್ನೆಲೆ ಇಂದು ಸಿಎಂ ಉದ್ಧವ್​ ಠಾಕ್ರೆ ಸತಾರಾಗೆ ಭೇಟಿ ನೀಡಿ, ಪರಿಶೀಲಿಸದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.