ಚಮೋಲಿ: ಉತ್ತರಾಖಂಡದ ಜೋಶಿಮಠ ನಗರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದ್ದು, ಮನೆಗಳು ಮತ್ತು ರಸ್ತೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆ ಜೋಶಿಮಠ ಪಟ್ಟಣವನ್ನು ವಿಪತ್ತು ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಸ್ಥಳೀಯ ಆಡಳಿತ ಕ್ರಮಕ್ಕೆ ಮುಂದಾಗಿದ್ದು, ಪಟ್ಟಣದಿಂದ ಹತ್ತಾರು ಕುಟುಂಬಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
-
जोशीमठ में सरकार द्वारा प्रभावित नगरवासियों की सुरक्षा, पुनर्वास एवं क्षेत्र के संरक्षण हेतु कार्य तीव्र गति से संचालित हैं। आदरणीय प्रधानमंत्री श्री @narendramodi जी भी व्यक्तिगत रूप से क्षेत्र की स्थिति पर नजर बनाए हुए हैं। इस संकट की घड़ी में हम जोशीमठ के साथ खड़े हैं। pic.twitter.com/NOPMC57kf4
— Pushkar Singh Dhami (@pushkardhami) January 9, 2023 " class="align-text-top noRightClick twitterSection" data="
">जोशीमठ में सरकार द्वारा प्रभावित नगरवासियों की सुरक्षा, पुनर्वास एवं क्षेत्र के संरक्षण हेतु कार्य तीव्र गति से संचालित हैं। आदरणीय प्रधानमंत्री श्री @narendramodi जी भी व्यक्तिगत रूप से क्षेत्र की स्थिति पर नजर बनाए हुए हैं। इस संकट की घड़ी में हम जोशीमठ के साथ खड़े हैं। pic.twitter.com/NOPMC57kf4
— Pushkar Singh Dhami (@pushkardhami) January 9, 2023जोशीमठ में सरकार द्वारा प्रभावित नगरवासियों की सुरक्षा, पुनर्वास एवं क्षेत्र के संरक्षण हेतु कार्य तीव्र गति से संचालित हैं। आदरणीय प्रधानमंत्री श्री @narendramodi जी भी व्यक्तिगत रूप से क्षेत्र की स्थिति पर नजर बनाए हुए हैं। इस संकट की घड़ी में हम जोशीमठ के साथ खड़े हैं। pic.twitter.com/NOPMC57kf4
— Pushkar Singh Dhami (@pushkardhami) January 9, 2023
ಜಿಲ್ಲಾಧಿಕಾರಿ ಹಿಮಾಂಶು ಖುರಾನಾ, ಕೇಂದ್ರದಿಂದ ರಚಿಸಲಾದ ಎರಡು ತಂಡಗಳು ಜೋಶಿಮಠದ ಪರಿಸ್ಥಿತಿಯನ್ನು ನಿರ್ಣಯಿಸಲು ಪಟ್ಟಣಕ್ಕೆ ಬಂದಿವೆ. ಮೊದಲನೆಯದು ಜಲಶಕ್ತಿ ಸಚಿವಾಲಯದ ಉನ್ನತ ಮಟ್ಟದ ತಂಡ ಮತ್ತು ಎರಡನೆಯದು ಗೃಹ ವ್ಯವಹಾರಗಳ ಸಚಿವಾಲಯದ ಗಡಿ ನಿರ್ವಹಣಾ ತಂಡ. ಜೋಶಿಮಠದಲ್ಲಿ ಸಂಭವಿಸಿದ ಭೂಮಿ ಕುಸಿತದಿಂದಾಗಿ, 600ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ. ಇದು ಭೂಮಿ ನಿಧಾನವಾಗಿ ಮುಳುಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿಯವರೆಗೆ ಸುಮಾರು 68 ಕುಟುಂಬಗಳನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ನಿರಾಶ್ರಿತ ಕುಟುಂಬಗಳಿಗೆ ಅಧಿಕಾರಿಗಳು ಪಡಿತರ ಸರಬರಾಜು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಭೂಕುಸಿತದಿಂದ ಪ್ರಭಾವ ಬೀರಬಹುದಾದಂತಹ ಮನೆಗಳ ಮೇಲೆ ಸ್ಥಳೀಯ ಆಡಳಿತ ರೆಡ್ ಕ್ರಾಸ್ ಮಾರ್ಕ್ಗಳನ್ನು ಹಾಕುತ್ತಿದೆ. ರೆಡ್ ಕ್ರಾಸ್ ಮಾರ್ಕ್ಗಳು ಹಾಕಿದ ಮನೆಗಳು ಅಪಾಯದ ಸ್ಥಿತಿಯಲ್ಲಿವೆ ಎಂದರ್ಥ. ಈ ಮನೆಗಳಲ್ಲಿರುವವರು ಮನೆಗಳನ್ನು ಖಾಲಿ ಮಾಡಿ ಪರಿಹಾರ ಶಿಬಿರಗಳಿಗೆ ಹೋಗಬೇಕಾಗುತ್ತದೆ.
ಆದರೆ, ಆಡಳಿತದ ಈ ಕ್ರಮದ ಬಗ್ಗೆ ಸ್ಥಳೀಯ ಜನರಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಏಕಾಏಕಿ ಮನೆಯಿಂದ ಹೊರ ಬರುವಂತೆ ಹೇಳಲಾಗುತ್ತಿದೆ. ಆದರೆ ಇದು ಶಾಶ್ವತ ವ್ಯವಸ್ಥೆ ಅಲ್ಲ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮನೆಗಳ ಮೇಲೆ ರೆಡ್ ಕ್ರಾಸ್ ಗುರುತು ಹಾಕಿರುವುದರಿಂದ ಜನರಲ್ಲಿ ಚಡಪಡಿಕೆ ಉಂಟಾಗಿದೆ. ಜನರು ಮನೆಯಿಂದ ಹೊರಬರಲು ಸಿದ್ಧರಿಲ್ಲ. ಆಡಳಿತದ ವಿರುದ್ಧ ಸ್ಥಳೀಯ ಜನರ ಆಕ್ರೋಶವೂ ಹೆಚ್ಚುತ್ತಿದೆ. ಶಿಬಿರಗಳ ತಪಾಸಣೆಗೆ ಎಂದು ಹೋಗುತ್ತಿದ್ದ ಜೋಶಿಮಠದ ಡಿಎಂ ಅವರ ವಾಹನವನ್ನು ಅಡ್ಡಗಟ್ಟಿ ಸ್ಥಳೀಯ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜನಾಥ್ ಸಿಂಗ್ ಜೋಶಿಮಠಕ್ಕೆ ಭೇಟಿ ನೀಡುವ ಸಾಧ್ಯತೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೋಶಿಮಠಕ್ಕೆ ಭೇಟಿ ನೀಡಬಹುದು. ಮಂಗಳವಾರ ಜೋಶಿಮಠಕ್ಕೆ ಆಗಮಿಸಿ ಭೂಕುಸಿತದ ಪರಿಸ್ಥಿತಿ ಅವಲೋಕಿಸಬಹುದು ಎಂದು ಹೇಳಲಾಗುತ್ತಿದೆ. ಆದರೂ ರಕ್ಷಣಾ ಸಚಿವರ ಆಗಮನದ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಸಿಎಂ ಧಾಮಿ ಅವರಿಂದ ಪರಿಸ್ಥಿತಿ ಅವಲೋಕನ: ಸ್ವತಃ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೋಶಿಮಠದ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಶನಿವಾರ ಸಿಎಂ ಧಾಮಿ ಇಡೀ ಪ್ರದೇಶದಲ್ಲಿ ವೈಮಾನಿಕ ಮತ್ತು ನೆಲದ ಸಮೀಕ್ಷೆ ನಡೆಸಿದ್ದರು. ಸಿಎಂ ಧಾಮಿ ಇಲ್ಲಿನ ಜನರೊಂದಿಗೆ ಮಾತನಾಡಿ, ನೆಲಮಟ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ಜೋಶಿಮಠದ ಅಪಾಯದ ವಲಯದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸರ್ಕಾರದಿಂದ ಕ್ಷೇತ್ರದ ರಕ್ಷಣೆ, ಪುನರ್ವಸತಿ, ರಕ್ಷಣೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಕೂಡ ಪ್ರದೇಶದ ಪರಿಸ್ಥಿತಿಯನ್ನು ಖುದ್ದು ಅವಲೋಕಿಸುತ್ತಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ನಾವು ಜೋಶಿಮಠರೊಂದಿಗೆ ನಿಲ್ಲುತ್ತೇವೆ ಎಂದರು.
ಜೋಶಿಮಠ ಮೂರು ವಲಯಗಳಾಗಿ ವಿಂಗಡನೆ: ವಾಸ್ತವವಾಗಿ ಭೂಕುಸಿತದ ಅಪಾಯದ ಹಿನ್ನೆಲೆಯಲ್ಲಿ ಆಡಳಿತ ಜೋಶಿಮಠವನ್ನು ಮೂರು ವಲಯಗಳನ್ನಾಗಿ ವಿಂಗಡಿಸಿದೆ. ಈ ಮೂರು ವಲಯಗಳನ್ನು ಅಸುರಕ್ಷಿತ, ಸುರಕ್ಷಿತ ಮತ್ತು ಬಫರ್ ವಲಯಗಳಾಗಿ ವಿಂಗಡಿಸಲಾಗಿದೆ. ವಲಯವಾರು ಮನೆಗಳನ್ನು ಗುರುತಿಸಲು ಆದೇಶ ನೀಡಲಾಗಿದೆ. ಅಸುರಕ್ಷಿತ ವಲಯದಲ್ಲಿ, ತುಂಬಾ ಶಿಥಿಲವಾಗಿರುವ ಮತ್ತು ವಾಸಕ್ಕೆ ಯೋಗ್ಯವಲ್ಲದಂತಹ ಮನೆಗಳು ಇರುತ್ತವೆ. ಸುರಕ್ಷಿತ ವಲಯದಲ್ಲಿರುವ ಕಟ್ಟಡಗಳಲ್ಲಿ ಸಣ್ಣ ಬಿರುಕುಗಳಿರುತ್ತವೆ. ಮತ್ತು ಬಿರುಕುಗಳ ಗಾತ್ರವು ಸ್ಥಿರವಾಗಿರುತ್ತದೆ, ಹೆಚ್ಚಾಗುವುದಿಲ್ಲ. ಬಫರ್ ವಲಯು ಸಣ್ಣ ಬಿರುಕುಗಳನ್ನು ಹೊಂದಿರುವ ಕಟ್ಟಡಗಳನ್ನು ಹೊಂದಿರುತ್ತದೆ. ಆದರೆ ಬಿರುಕುಗಳು ಬೆಳೆಯುವ ಅಪಾಯವಿದೆ.
ಮನೆಗಳ ಮೇಲೆ ಅಪಾಯದ ಕೆಂಪು ಗುರುತು: ಜೋಶಿಮಠವನ್ನು ಅಪಾಯದ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಜಿಲ್ಲಾಡಳಿತ ಮನೆಗಳ ಮೇಲೆ ರೆಡ್ ಟಾರ್ಗೆಟ್ ಹಾಕುವ ಮೂಲಕ ಪ್ರದೇಶಗಳನ್ನು ಅಸುರಕ್ಷಿತವೆಂದು ಘೋಷಿಸುತ್ತಿದೆ. ಆ ರೀತಿ ಮಾರ್ಕ್ ಮಾಡಿರುವ ಮನೆಗಳ ಬಳಿ ಹೋಗದಂತೆ ಜನರಿಗೆ ಮನವಿ ಮಾಡಲಾಗುತ್ತಿದೆ. ಜೋಶಿಮಠದಲ್ಲಿ 600ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ. 100ಕ್ಕೂ ಹೆಚ್ಚು ಮನೆಗಳು ಯಾವಾಗ ಬೇಕಾದರೂ ಬೀಳುವ ಅಪಾಯದಲ್ಲಿದೆ.
ಮುಂದಿನ ಆದೇಶದವರೆಗೆ ಜಿಲ್ಲೆಯಲ್ಲಿ ಎಲ್ಲ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಲಾಗಿದೆ. ಇದರೊಂದಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು ಸಹ ನೀಡಲಾಗುತ್ತಿದೆ. ವು ಜೋಶಿಮಠವನ್ನು ತಲುಪುತ್ತಿದೆ.
ಹರೀಶ್ ರಾವತ್ ಕಳವಳ: ಜೋಶಿಮಠದ ಸದ್ಯದ ಪರಿಸ್ಥಿತಿ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಜೋಶಿಮಠದ ಪರಿಸ್ಥಿತಿ ಹದಗೆಟ್ಟಿದೆ. ಸಂಪೂರ್ಣ ರಚನೆಯು ಯಾವುದೇ ಸಮಯದಲ್ಲಿ ಕುಸಿಯಬಹುದು. ಪ್ರಕೃತಿ ಎಚ್ಚರಿಕೆ ನೀಡಿದೆ, ಆದರೆ ಸಮಸ್ಯೆಯೆಂದರೆ ನಾವು ಅವಳ ಎಚ್ಚರಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜೋಶಿಮಠವನ್ನು ಉಳಿಸಲು ಒಂದೇ ಒಂದು ಮಾರ್ಗವಿದೆ. ಆ ನಗರವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಂದರೆ ಹೊಸ ಜೋಶಿಮಠವನ್ನು ಸ್ಥಾಪಿಸಬೇಕು ಮತ್ತು ಹಳೆಯ ಜೋಶಿಮಠವನ್ನು ಸರಿಗೊಳಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜೋಶಿಮಠದಲ್ಲಿ ಭೂಕಂಪನದಿಂದ ಬಿರುಕು ಬಿಟ್ಟ ಮನೆಗಳಿಂದ 50 ಕುಟುಂಬಗಳ ಸ್ಥಳಾಂತರ