ಹೈದರಾಬಾದ್: ಯಶಸ್ವಿ ಮೂತ್ರ ಕಸಿ ಚಿಕಿತ್ಸೆಗೆ ಒಳಗಾಗಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ, ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಶನಿವಾರ ಭಾರತಕ್ಕೆ ಮರಳಿದ್ದಾರೆ. ತಂದೆ ಭಾರತಕ್ಕೆ ಬರುತ್ತಿರುವ ಸುದ್ದಿಯನ್ನು ಮಗಳು ರೋಹಿಣಿ ಆಚಾರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದು, ತಂದೆ ಕುರಿತು ಪ್ರೀತಿ ತುಂಬಿದ ಭಾವಾನಾತ್ಮಕ ಸಂದೇಶ ಕೂಡ ಬರೆದು ಗಮನ ಸೆಳೆದಿದ್ದಾರೆ.
-
आप सबसे एक जरूरी बात कहनी है. यह जरूरी बात हम सबों के नेता आदरणीय लालू जी के स्वास्थ्य को लेकर है.
— Rohini Acharya (@RohiniAcharya2) February 10, 2023 " class="align-text-top noRightClick twitterSection" data="
11 फरवरी को पापा सिंगापुर से भारत जा रहे हैं.
मैं एक बेटी के तौर पर अपना फर्ज अदा कर रही हूँ. पापा को स्वस्थ्य कर आप सब के बीच भेज रही हूँ..
अब आप लोग पापा का ख्याल रखियेगा. pic.twitter.com/GcVNV1Emly
">आप सबसे एक जरूरी बात कहनी है. यह जरूरी बात हम सबों के नेता आदरणीय लालू जी के स्वास्थ्य को लेकर है.
— Rohini Acharya (@RohiniAcharya2) February 10, 2023
11 फरवरी को पापा सिंगापुर से भारत जा रहे हैं.
मैं एक बेटी के तौर पर अपना फर्ज अदा कर रही हूँ. पापा को स्वस्थ्य कर आप सब के बीच भेज रही हूँ..
अब आप लोग पापा का ख्याल रखियेगा. pic.twitter.com/GcVNV1Emlyआप सबसे एक जरूरी बात कहनी है. यह जरूरी बात हम सबों के नेता आदरणीय लालू जी के स्वास्थ्य को लेकर है.
— Rohini Acharya (@RohiniAcharya2) February 10, 2023
11 फरवरी को पापा सिंगापुर से भारत जा रहे हैं.
मैं एक बेटी के तौर पर अपना फर्ज अदा कर रही हूँ. पापा को स्वस्थ्य कर आप सब के बीच भेज रही हूँ..
अब आप लोग पापा का ख्याल रखियेगा. pic.twitter.com/GcVNV1Emly
ಲಾಲೂ ಪ್ರಸಾದ್ ಯಾದವ್ ಅವರಿಗೆ ಅವರ ಮಗಳಾ ರೋಹಿಣಿ ಆಚಾರ್ಯ ಅವರೇ ತಮ್ಮ ಒಂದು ಕಿಡ್ನಿಯನ್ನು ನೀಡಿದ್ದಾರೆ. ತಂದೆ ಇದೀಗ ಹುಷಾರಾಗಿ ಭಾರತಕ್ಕೆ ಮರಳುತ್ತಿರುವ ಕುರಿತು ಟ್ವೀಟ್ ಮಾಡಿರುವ ಅವರು, ತಂದೆ ಬೆಂಬಲಿಗರು ಮತ್ತು ಆತ್ಮೀಯರಿಗೆ ಚೆನ್ನಾಗಿ ಅವರನ್ನು ನೋಡಿಕೊಳ್ಳುವಂತೆ ತಿಳಿಸಿದ್ದಾರೆ. ತಂದೆ ಬಗ್ಗೆ ನಿಮಗೆ ಇರುವ ಪ್ರೀತಿಗೆ ಯಾವುದೇ ಮಿತಿ ಇಲ್ಲ. ಆದರೆ, ನನ್ನ ಕಡೆಯಿಂದ ಹೇಳುವುದೆಂದರೆ, ಅವರು ಭಾರತಕ್ಕೆ ಮರಳಿದ ಬಳಿಕ ನೀವು ಅವರನ್ನು ಯಾವಾಗಲೇ ಭೇಟಿ ಮಾಡಿದರು, ಹುಷಾರಾಗಿರಿ. ಅವರ ಭೇಟಿ ವೇಳೆ ಮಾಸ್ಕ್ ಅನ್ನು ಹಾಕಿ ಕೊಂಡು ಅವರ ಆರೋಗ್ಯದ ಕಾಳಜಿವಹಿಸುವಂತೆ ಮನವಿ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ನೀವು ಯಾರನ್ನಾದರೂ ಭೇಟಿ ಮಾಡುವುದಾದರೆ, ಮಾಸ್ಕ್ ಹಾಕಿ ಕೊಳ್ಳಿ ಎಂದು ವೈದ್ಯರು ತಿಳಿಸಿದ್ದು, ತಂದೆ ವೈದ್ಯರ ಸಲಹೆ ಮೇರೆ ಭೇಟಿ ವೇಳೆ ಮಾಸ್ಕ್ ಧರಿಸಲಿದ್ದಾರೆ ಎಂದಿದ್ದಾರೆ. ಯಶಸ್ವಿ ಕಿಡ್ನಿ ಶಸ್ತ್ರ ಚಿಕಿತ್ಸೆ ಬಳಿಕ ಸಂಪೂರ್ಣವಾಗಿ ತಂದೆ ಗುಣಮುಖರಾಗಿದ್ದಾರೆ. ಅವರು ಯಾವುದೇ ರೀತಿಯ ಸೋಂಕಿಗೆ ಒಳಗಾಗದಂತೆ ಸುರಕ್ಷಿತವಾಗಿ ನೋಡಿಕೊಳ್ಳುವಂತೆ ವೈದ್ಯರು ತಿಳಿಸಿದ್ದು. ಹೆಚ್ಚಿನ ಜನರನ್ನು ಭೇಟಿಯಾಗದಿರುವಂತೆ ಕೂಡ ಅವರಿಗೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಸರಣಿ ಟ್ವೀಟ್ಗಳ ಮೂಲಕ ತಂದೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರ ಕಿಡ್ನಿ ಕಾರ್ಯ ನಿರ್ವಹಣೆ ಸ್ಥಗಿತಗೊಂಡ ಹಿನ್ನೆಲೆ ಸಿಂಗಾಪೂರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕಿಡ್ನಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರಿಗೆ ಅವರ ಮಳಗಾದ ರೋಹಿಣಿ ಕಿಡ್ನಿ ದಾನ ಮಾಡಿ ತಂದೆ ಜೀವ ಉಳಿಸಿದ್ದರು. ರೋಹಿಣಿ ಆಚಾರ್ಯ ಅವರ ಈ ಕಾರ್ಯ ಎಲ್ಲರ ಮೆಚ್ಚುಗೆ ಪಡೆದಿದ್ದು. ಮಗಳಿದ್ದರೆ, ಈ ರೀತಿಯಾಗಿ ಇರಬೇಕು. ಆಕೆ ಇಂದಿನ ಪೀಳಿಗೆಗೆ ಸ್ಪೂರ್ತಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಟ್ವೀಟ್ ಮೂಲಕ ರೋಹಿಣಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತೇಜಸ್ವಿ ಯಾದವ್ ಅವರಿಗೆ ಕರೆ ಮಾಡಿ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯದ ಕುರಿತು ವಿಚಾರಣೆ ನಡೆಸಿದ್ದರು.
74 ವರ್ಷದ ಲಾಲೂ ಪ್ರಸಾದ್ ಯಾದವ್ ಅವರ ಕಿಡ್ನಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುವ ಹಿನ್ನಲೆ ಅವರು ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಬೇಕು. ಕುಟುಂಬದ ಯಾರಾದರೂ ಕಿಡ್ನಿ ದಾನ ಮಾಡಬಹುದು ಎಂದು ವೈದ್ಯರು ತಿಳಿಸಿದ್ದರು. ಈ ವೇಳೆ, ರೋಹಿಣಿ ಆಚಾರ್ಯ ಅವರ ಕಿಡ್ನಿ ಅವರಿಗೆ ಮ್ಯಾಚ್ ಆಗಿದೆ. ಈ ಹಿನ್ನಲೆ ರೋಹಿಣಿ ಕಿಡ್ನಿ ದಅನಕ್ಕೆ ಮುಂದಾಗಿದ್ದಾರೆ ಎಂದು ತೇಜಸ್ವಿ ಯಾದವ್ ಕಳೆದ ನವೆಂಬರ್ನಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಗೂಗಲ್ ಸಹಾಯದಿಂದ ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯನ ಬಂಧನ.. ಇತಿಹಾಸ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ!