ETV Bharat / bharat

ಪಾಸ್​ಪೋರ್ಟ್​​ ನವೀಕರಣಕ್ಕೆ ಅನುಮತಿ: ಶೀಘ್ರವೇ ಕಿಡ್ನಿ ಕಸಿಗಾಗಿ ಲಾಲು ಸಿಂಗಾಪುರಕ್ಕೆ

author img

By

Published : Aug 2, 2022, 4:01 PM IST

ಲಾಲು ಪ್ರಸಾದ್​ ಅವರ ಎರಡೂ ಕಿಡ್ನಿಗಳು ಶೇ.75ಕ್ಕಿಂತ ಹೆಚ್ಚು ಹಾನಿಯಾಗಿವೆ. ಕಳೆದೊಂದು ವರ್ಷದಿಂದ ಸಿಂಗಾಪುರದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ಧಾರೆ.

Lalu Prasad will soon go to Singapore for kidney transplant
ಪಾಸ್​ಪೋರ್ಟ್​​ ನವೀಕರಣಕ್ಕೆ ಅನುಮತಿ: ಶೀಘ್ರವೇ ಕಿಡ್ನಿ ಕಸಿಗಾಗಿ ಲಾಲು ಪ್ರಸಾದ್ ಸಿಂಗಾಪೂರಕ್ಕೆ

ಪಾಟ್ನಾ (ಬಿಹಾರ): ಆರ್​ಜೆಡಿ ವರಿಷ್ಠ ಲಾಲು ಪ್ರಸಾದ್​ ಅವರಿಗೆ ಪಾಸ್​ಪೋರ್ಟ್​​ ನವೀಕರಣ ಮಾಡಲು ವಿಶೇಷ ಸಿಬಿಐ ನ್ಯಾಯಾಲಯ ಅನುಮತಿಸಿದೆ. ಹೀಗಾಗಿ ಅವರು ಶೀಘ್ರವೇ ತಮ್ಮ ಕಿಡ್ನಿ ಕಸಿಗಾಗಿ ಸಿಂಗಾಪುರಕ್ಕೆ ತೆರಳಲಿದ್ಧಾರೆ ಎಂದು ವರದಿಯಾಗಿದೆ.

ಬಹುಕೋಟಿ ಮೇವು ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್​ ಕಿಡ್ನಿ, ಶ್ವಾಸಕೋಶ ಸಮಸ್ಯೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ಧಾರೆ. ಸದ್ಯ ಅವರ ಎರಡೂ ಕಿಡ್ನಿಗಳಿಗೂ ಶೇ.75ಕ್ಕಿಂತ ಹೆಚ್ಚು ಹಾನಿಯಾಗಿವೆ. ಕಳೆದ ಒಂದು ವರ್ಷದಿಂದ ಸಿಂಗಾಪುರದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ಧಾರೆ.

ಹೀಗಾಗಿ ಲಾಲು ಅವರ ಪಾಸ್​ಪೋರ್ಟ್​ ನವೀಕರಣಕ್ಕೆ ಅನುಮತಿ ಕೋರಿ ವಕೀಲ ಸುಧೀರ್​ ಕುಮಾರ್ ಸಿನ್ಹಾ ಮೂಲಕ ಪಾಟ್ನಾದ ವಿಶೇಷ ಸಿಬಿಐ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಇದಕ್ಕೆ ನ್ಯಾಯಾಲಯವು ಅನುಮತಿ ಕೊಟ್ಟಿದೆ. ಈ ಹಿಂದೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಕೂಡ ಪಾಸ್​ಪೋರ್ಟ್​ ನವೀಕರಣಕ್ಕೆ ಸಮ್ಮತಿ ಸೂಚಿಸಿತ್ತು.

ಇದನ್ನೂ ಓದಿ: ದುಬೈನಿಂದ ದೆಹಲಿಗೆ ಬಂದಿಳಿದ ವ್ಯಕ್ತಿಯಲ್ಲಿ ₹58 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.