ETV Bharat / bharat

ವಾಯುಪಡೆಯಲ್ಲಿ ಲೇಡಿ ಪೈಲಟ್​ ಪಾರಮ್ಯ​: ಫೈಟರ್ ಜೆಟ್ ಹಾರಿಸೋದು ಇವರೇ - ರಾಫೆಲ್ ವಿಮಾನಗಳಲ್ಲಿ ಪೈಲಟ್

ಫೈಟರ್​ ವಿಮಾನಗಳಲ್ಲಿ ಮಹಿಳೆಯರನ್ನು ನೋಡುವುದು ಇನ್ನುಮುಂದೆ ಅಪರೂಪದ ವಿದ್ಯಮಾನವಾಗಿರುವುದಿಲ್ಲ. ಮಹಿಳೆ ಹಾಗೂ ಪುರುಷ ಇಬ್ಬರೂ ಒಂದೇ ತೆರನಾಗಿ ತರಬೇತಿ ಪಡೆಯುತ್ತಾರೆ ಹಾಗೂ ಸಮನಾಗಿಯೇ ಕೆಲಸ ಮಾಡುತ್ತಾರೆ. ಆಕಾಶ ಅಥವಾ ಭೂಮಿ ಯಾವುದೇ ಆದರೂ ನಾವೇ ಮೊದಲ ಹೋರಾಟಗಾರರಾಗಿರುತ್ತೇವೆ ಎಂದು ಫ್ಲೈಟ್ ಲೆಫ್ಟಿನೆಂಟ್ ತೇಜಸ್ವಿ ಹೇಳಿದರು.

ವಾಯುಪಡೆಯಲ್ಲಿ ಲೇಡಿ ಪೈಲಟ್​ ಪಾರಮ್ಯ​: ಫೈಟರ್ ಜೆಟ್ ಹಾರಿಸೋದು ಇವರೇ
lady pilot in the Air Force is the one who flew the fighter jet
author img

By

Published : Sep 27, 2022, 3:09 PM IST

ತೇಜ್​ಪುರ್ (ಅಸ್ಸೋಂ): ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್​ ಮತ್ತು ಮಹಿಳಾ ಭೂ ಸಿಬ್ಬಂದಿಯ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಈಗ ದೇಶದ ಪೂರ್ವ ಭಾಗದ ಅರುಣಾಚಲ ಪ್ರದೇಶ ಮತ್ತು ಅಸ್ಸೋಂನಲ್ಲಿ ಮಹಿಳಾ ಪೈಲಟ್​ಗಳು ಯುದ್ಧವಿಮಾನ ಮತ್ತು ಹೆಲಿಕಾಪ್ಟರ್​ಗಳನ್ನು ನಿರಾಯಾಸವಾಗಿ ಚಾಲನೆ ಮಾಡುತ್ತಿದ್ದಾರೆ.

ಮುಂಚೂಣಿ ಬೇಸ್​​ವೊಂದಕ್ಕೆ ಮಾಧ್ಯಮ ತಂಡ ಭೇಟಿ ನೀಡಿದಾಗ, ದೇಶಿ ನಿರ್ಮಿತ ಎಎಲ್​​ಎಚ್ ಧ್ರುವ್ ಮಾರ್ಕ್ -3 ಹೆಲಿಕಾಪ್ಟರ್​ಗಳನ್ನು ಮಹಿಳಾ ಪೈಲಟ್​ಗಳು ನಿರ್ವಹಿಸುತ್ತಿರುವುದು ಕಂಡು ಬಂದಿತು. ಈಸ್ಟರ್ನ್ ಕಮಾಂಡ್‌ನಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಗಳು, ಮಹಿಳಾ ಪೈಲಟ್‌ಗಳು ಮತ್ತು ಭೂ ಸಿಬ್ಬಂದಿ ಅಧಿಕಾರಿಗಳನ್ನು ದೇಶಾದ್ಯಂತ ನಿಯೋಜಿಸಲಾಗಿದೆ.

ಪಡೆಗಳಿಗೆ ಹಾಗೂ ಸ್ಥಳೀಯ ಜನಸಂಖ್ಯೆಗೆ ಬೆಂಬಲವಾಗಿ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮನದಿ ವಲಯದಿಂದ ಪೂರ್ವ ದಿಕ್ಕಿನ ಅರುಣಾಚಲ ಪ್ರದೇಶದ ವಿಜಯನಗರದವರೆಗೆ ಎಲ್ಲ ರೀತಿಯ ಭೂಪ್ರದೇಶಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಅದ್ಬುತ ಮಹಿಳಾ ತಂಡ ಹೊಂದಿದ್ದೇವೆ: ಹಳೆಯ ಸಂಪ್ರದಾಯಗಳನ್ನು ಬಿಟ್ಟು ದೇಶಸೇವೆಗೆ ಕಟಿಬದ್ಧವಾಗಿರುವ ಅದ್ಭುತ ಮಹಿಳೆಯರ ತಂಡವನ್ನು ನಾವು ಹೊಂದಿದ್ದೇವೆ ಎಂದು ಫ್ಲೈಟ್ ಲೆಫ್ಟಿನೆಂಟ್ ತೇಜಸ್ವಿ ಹೇಳಿದರು. ಇವರು Su-30 MKI ಫೈಟರ್ ಜೆಟ್​ಗಳ ಫ್ಲೀಟ್​ನ ಭಾರತದ ಪ್ರಥಮ ವೆಪನ್ ಸಿಸ್ಟಂ ಆಪರೇಟರ್​ನ ಫ್ಲೈಟ್ ಲೆಫ್ಟಿನೆಂಟ್ ಇವರಾಗಿದ್ದಾರೆ.

ಫೈಟರ್​ ವಿಮಾನಗಳಲ್ಲಿ ಮಹಿಳೆಯರನ್ನು ನೋಡುವುದು ಇನ್ನುಮುಂದೆ ಅಪರೂಪದ ವಿದ್ಯಮಾನವಾಗಿರುವುದಿಲ್ಲ. ಮಹಿಳೆ ಹಾಗೂ ಪುರುಷ ಇಬ್ಬರೂ ಒಂದೇ ತೆರನಾಗಿ ತರಬೇತಿ ಪಡೆಯುತ್ತಾರೆ ಹಾಗೂ ಸಮನಾಗಿಯೇ ಕೆಲಸ ಮಾಡುತ್ತಾರೆ. ಆಕಾಶ ಅಥವಾ ಭೂಮಿ ಯಾವುದೇ ಆದರೂ ನಾವೇ ಮೊದಲ ಹೋರಾಟಗಾರರಾಗಿರುತ್ತೇವೆ ಎಂದು ತೇಜಸ್ವಿ ಹೇಳಿದರು.

ಮಿಗ್ -21 ನಲ್ಲಿ ಏಕಾಂಗಿಯಾಗಿ ಹಾರಾಟ: ಅವ್ನಿ ಚತುರ್ವೇದಿ ಮತ್ತು ಭಾವನಾ ಕಾಂತ್ ಸೇರಿದಂತೆ ಮೂವರು ಮಹಿಳೆಯರನ್ನು ಫೈಟರ್ ಸ್ಟ್ರೀಮ್‌ನಲ್ಲಿ ನಿಯೋಜಿಸಿದಾಗ ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಫೈಟರ್ ಸ್ಟ್ರೀಮ್‌ನಲ್ಲಿ ಮಹಿಳೆಯರಿಗೆ ಅವಕಾಶ ನೀಡಿತು. ನಂತರದಲ್ಲಿ, ಮಿಗ್ -21 ನಲ್ಲಿ ಏಕಾಂಗಿಯಾಗಿ ಹಾರಾಟ ನಡೆಸಿದ ಮೊದಲ ಮಹಿಳೆ ಕಾಂತ್ ಮತ್ತು ಶಿವಾಂಗಿ ಸಿಂಗ್ ನಂತರ ರಾಫೆಲ್ ವಿಮಾನಗಳಲ್ಲಿ ಪೈಲಟ್ ಆದರು.

ಎಎಲ್​​ಎಚ್​ ಧ್ರುವ್ ಮಾರ್ಕ್ 3 ಪೈಲಟ್‌ಗಳಾದ ಫ್ಲೈಟ್ ಲೆಫ್ಟಿನೆಂಟ್‌ ಅನಿ ಅವಸ್ತಿ ಮತ್ತು ಎ. ನೈನ್ ನಿಯಮಿತವಾಗಿ ತಮ್ಮ ಎಎಲ್​ಎಚ್​ ಚಾಪರ್‌ಗಳನ್ನು ಅರುಣಾಚಲ ಪ್ರದೇಶದ ವಲಯದ ಮೇಲೆ ದಟ್ಟವಾದ ಕಾಡುಗಳ ಮೇಲೆ ಮತ್ತು ಎಲ್​ಎಸಿಗೆ ಹತ್ತಿರದಲ್ಲಿ ಹಾರಿಸುತ್ತಾರೆ.

ವಾಯುಪಡೆಯಲ್ಲಿ 1300 ಮಹಿಳಾ ಅಧಿಕಾರಿಗಳು: ಭಾರತೀಯ ವಾಯುಪಡೆಯು 1300 ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳನ್ನು ಭೂ ಮತ್ತು ವಾಯು ಕರ್ತವ್ಯಗಳಲ್ಲಿ ನಿಯೋಜಿಸಿದೆ. ಪಡೆಗಳಲ್ಲಿ 'ಸ್ತ್ರೀ ಶಕ್ತಿ'ಯನ್ನು ಮತ್ತಷ್ಟು ಉತ್ತೇಜಿಸುವ ಸರ್ಕಾರದ ನೀತಿ ಮತ್ತು ಅಗ್ನಿವೀರ್ ಯೋಜನೆಯಲ್ಲಿ ಮಹಿಳೆಯರನ್ನು ವಾಯುಗಾಮಿಗಳಾಗಿ ಸೇರಿಸುವ ಸಾಧ್ಯತೆಯ ದೃಷ್ಟಿಯಿಂದ ಈ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತದ ಬತ್ತಳಿಕೆಯಲ್ಲಿ ‘ನಿಶ್ಯಬ್ದ ಹಂತಕ’ ರಫೆಲ್​ ; ಶತ್ರುಗಳ ಎದೆಯಲ್ಲಿ ನಡುಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.