ETV Bharat / bharat

ಮಳೆ ಕೊರತೆ.. ಕಡಿಮೆ ಬಿತ್ತನೆಯಿಂದ ಅಕ್ಕಿ ಬೆಲೆಯೂ ಆಗಲಿದೆ ದುಬಾರಿ

ಉತ್ತರ ಭಾರತ ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಅಧಿಕ ಮಳೆಯಾಗುತ್ತಿದೆ. ಆದರೆ, ದೇಶಾದ್ಯಂತ ಕೃಷಿ ಭೂಮಿಯ ಅಗತ್ಯಕ್ಕೆ ಅನುಗುಣವಾಗಿ ಮಳೆಯಾಗದಿರುವುದು ಹಲವೆಡೆ ಬಿತ್ತನೆ ವಿಳಂಬವಾಗಿದೆ.

lack of rain and less sowing Rice Price may Rise

author img

By

Published : Jul 10, 2023, 1:36 PM IST

ನವದೆಹಲಿ: ದೇಶದಲ್ಲಿ ಈಗಾಗಲೇ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಇದಕ್ಕೆ ಕಾರಣ ಹೆಚ್ಚಿದ ಮಾರುಕಟ್ಟೆ ಮತ್ತು ಕಡಿಮೆ ಪೂರೈಕೆ ಆಗಿದೆ. ಸದ್ಯ ಇದರ ಬೆನ್ನಲ್ಲೇ ಜನರು ಮತ್ತೊಂದು ಅಗತ್ಯ ಆಹಾರ ಸಾಮಗ್ರಿಯ ಬರ ಎದುರಿಸುವಂತೆ ಆಗಲಿದೆ. ಅಚ್ಚರಿ ಆದರೂ ಹೌದು, ಮಳೆ ಕೊರತೆ ಮತ್ತು ಕಡಿಮೆ ಬಿತ್ತನೆಯಿಂದಾಗಿ ಅಕ್ಕಿ ಇಳುವರಿ ಕಡಿಮೆಯಾಗಿದೆ. ಇದರ ಕೊರತೆ ಎದುರಾಗುವ ದಿನ ಸನ್ನಿಹಿತವಾಗಿದೆ ಎಂದು ಮೋತಿಲಾಲ್​ ಒಸ್ವಾಲ್​ ಫೈನಾನ್ಸ್​ ಸರ್ವೀಸ್​ ವರದಿಯಲ್ಲಿ ತಿಳಿಸಿದೆ.

ಜಾಗತಿಕವಾಗಿ ಅಕ್ಕಿ ಬೆಲೆ ದುಬಾರಿಯಾಲಿದ್ದು, ಇದರಿಂದ ಸ್ಥಳೀಯವಾಗಿಯೂ ಅಕ್ಕಿ ದರ ಏರಿಕೆ ಕಾಣಲಿದೆ. ಒಟ್ಟಾರೆ ಸಿಪಿಐ (ಗ್ರಾಹಕ ದರ ಸೂಚ್ಯಂಕ) ಬ್ಯಾಸ್ಕೆಟ್​​ 4.4 ರಷ್ಟಿದೆ.

ಮಾನ್ಸೂನ್​ ಮಳೆ ಕೊರತೆಯಿಂದಾಗಿ ಪ್ರಮುಖವಾಗಿ ಅಕ್ಕಿ ಉತ್ಪಾದಿಸುವ ರಾಜ್ಯದಲ್ಲಿ ಶೇ 49ರಷ್ಟು ಉತ್ಪಾದನೆ ಹಂಚಿಕೆ ಕುಂಠಿತವಾಗಿದೆ. ಅವುಗಳೆಂದರೆ ಪಶ್ಚಿಮ ಬಂಗಾಳ ಶೇ 11ಕ್ಕಿಂತ ಕಡಿಮೆ ಉತ್ಪಾದನೆ, ಉತ್ತರ ಪ್ರದೇಶ ಶೇ 2ರಷ್ಟು, ಆಂಧ್ರ ಪ್ರದೇಶ ಶೇ 22ರಷ್ಟು, ಒಡಿಶಾ ಶೇ 25ರಷ್ಟು, ತೆಲಂಗಾಣ ಶೇ 35ರಷ್ಟು, ಛತ್ತೀಸ್​ಗಢ ಶೇ 12ರಷ್ಟು, ಬಿಹಾರ ಶೇ 29ರಷ್ಟು ಮತ್ತು ಅಸ್ಸೋಂನಲ್ಲಿ ಶೇ 2ರಷ್ಟು ಬಿತ್ತನೆ ಕಡಿಮೆಯಾಗಿದ್ದು, ಇದು ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ.

ಆದಾಗ್ಯೂ ಹೆಚ್ಚಿನ ನೀರಾವರಿ ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಇದು ಕಡಿಮೆ ಪರಿಣಾಮ ಬೀರಿದೆ. ವಾಯುವ್ಯ ಪ್ರದೇಶದ ಹೊರತಾಗಿ, ಉಳಿದೆಡೆ ಸಾಮಾನ್ಯಕ್ಕಿಂತ ಶೇ 59ರಷ್ಟು ಮತ್ತು ಮಧ್ಯ ಭಾರತದಲ್ಲಿ ಶೇ 4ಕ್ಕಿಂತ ಕಡಿಮೆ ಮಳೆಯಾಗಿದೆ ಎಂದು ವರದಿ ತಿಳಿಸಿದೆ.

ಮಾನ್ಸೂನ್​ ಮಳೆ ಕೊರತೆ: ಜುಲೈ 9ಕ್ಕೆ ಹೋಲಿಸಿದರೆ ಸಂಚಿತ ಮಳೆ ಘಟಕವೂ ಸಾಮಾನ್ಯಕ್ಕಿಂತ 2 ಶೇಕಡಾ ಮತ್ತು ಕಳೆದ ವರ್ಷ ಸಾಮಾನ್ಯಕ್ಕಿಂತ 3 ಶೇಕಡಾ ಹೆಚ್ಚಾಗಿದೆ. ಆದಾಗ್ಯೂ ಮಳೆ ವಿತರಣೆ ಅಸಮಾನತೆಯಿಂದ ಕೂಡಿದೆ. ದಕ್ಷಿಣದಲ್ಲಿ ಮಳೆಯ ಕೊರತೆಯು ಕಳೆದ ವಾರ ಸಾಮಾನ್ಯಕ್ಕಿಂತ 45 ಪ್ರತಿಶತಕ್ಕಿಂತ ಕಡಿಮೆಯಾಗಿದ್ದು, ಈಗ ಸಾಮಾನ್ಯಕ್ಕಿಂತ 23 ಪ್ರತಿಶತಕ್ಕೆ ಕಡಿಮೆಯಾಗಿದೆ. ಪೂರ್ವ ಮತ್ತು ಈಶಾನ್ಯ ಪ್ರದೇಶಗಳು ಶೇ.17 ರಷ್ಟು ಕೊರತೆಯನ್ನು ಕಂಡಿವೆ ಎಂದು ವರದಿ ತಿಳಿಸಿದೆ.

ಖಾರಿಫ್​ ಬೆಳೆಗಳ ಬಿತ್ತನೆಗೆ ಜುಲೈ ನಿರ್ಣಾಯಕ ಸಮಯವಾಗಿದೆ. ಈ ಅವಧಿಯಲ್ಲಿ ಶೇ 32ರಷ್ಟು ಮನ್ಸೂನ್​ ಮಳೆ ಆಗುತ್ತದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಖಾರಿಫ್​ ಬಿತ್ತನೆ ಜುಲೈ7ಕ್ಕೆ ಶೇ 8.7ರಷ್ಟು ಕಡಿಮೆಯಾಗಿದೆ. ಇದರಿಂದ ಅಕ್ಕಿ ಸೇರಿದಂತೆ ಬೆಳೆಗಳ ಬಿತ್ತನೆ ಕೂಡ ಕಡಿಮೆಯಾಗಿದೆ. ಭತ್ತದ ಕೃಷಿ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ 23.9 ರಷ್ಟು ಬಿತ್ತನೆ ಕಡಿಮೆಯಾದರೆ, ಧಾನ್ಯಗಳ ಬಿತ್ತನೆ ಕಳೆದ ವರ್ಷಕ್ಕಿಂತ 25.8ರಷ್ಟು ಕಡಿಮೆಯಾಗಿದೆ. ಇದರ ಕೊತೆಗೆ ಎಣ್ಣೆ ಬೀಜ, ಸೆಣಬು ಮತ್ತು ಹತ್ತಿ ಉತ್ಪಾದನೆ ಕೂಡ ಕಡಿಮೆಯಾಗಿದೆ.

ನೀರಿನ ಸಂಗ್ರಹವೂ ಕಡಿಮೆ: ಮತ್ತೊಂದು ಕಡೆ ಒರಟಾದ ಧಾನ್ಯಗಳು ಮತ್ತು ಕಬ್ಬು ಉತ್ತಮವಾಗಿದೆ. ಜುಲೈ 7ಕ್ಕೆ ಅಣೆಗಟ್ಟುಗಳಲ್ಲಿ ಶೇ 39ರಷ್ಟು ನೀರಿನ ಶೇಖರಣೆ ಸಾಮರ್ಥ್ಯ ಇದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲಿ ಕಡಿಮೆಯಾಗಿದೆ. ಪ್ರಮುಖವಾಗಿ ದಕ್ಷಿಣ ಪ್ರದೇಶದಲ್ಲಿ ಕಡಿಮೆ ಶೇಖರಣೆಗೆ ಕಾರಣವಾಗಿದೆ.

ಭಾರತೀಯ ಹವಾಮಾನ ಇಲಾಖೆ ಅನುಸಾರ, ಜುಲೈ ಮಳೆ ಸಾಮಾನ್ಯ ಶ್ರೇಣಿಯು ಮೇಲಿನ ಭಾಗದಲ್ಲಿದೆ. ಇದು 94-106ರಷ್ಟ ದೀರ್ಘ ಅವಧಿ ಸರಾಸರಿಯಾಗಿದೆ. ಜೊತೆಗೆ ಎಲ್​ ನಿನೊ ಪರಿಸ್ಥಿತಿ ಕೂಡ ಜುಲೈ ಅಂತ್ಯದಲ್ಲಿ ಅಭಿವೃದ್ಧಿಯಾಗಿದೆ. ಆದರೆ, ಇದು ಹಿಂದೂ ಮಹಾಸಾಗರದ ದ್ವಿಧ್ರುವಿಯಲ್ಲಿ ಧನಾತ್ಮಕತೆ ಮೂಲಕ ಸರಿದೂಗಿಸಬಹುದಾಗಿದೆ.

ಉತ್ತರ ಪ್ರದೇಶ, ಬಿಹಾರ, ಅಸ್ಸೋಂ, ಪಂಜಾಬ್​​, ಕರ್ನಾಟಕ, ತಮಿಳುನಾಡು ಜುಲೈನಲ್ಲಿ ಕಡಿಮೆ ಸಾಮಾನ್ಯ ಮಳೆಗೆ ಸಾಕ್ಷಿಯಾಗಬಹುದು ಎಂದು ಐಎಂಡಿ ತಿಳಿಸಿದೆ. ಇದು ಈ ರಾಜ್ಯದಲ್ಲಿ ಭತ್ತ ಮತ್ತು ಧಾನ್ಯಗಳ ಬಿತ್ತನೆ ಮೇಲೆ ಪರಿಣಾಮ ಬೀರಬಹುದು.

ಕಳೆದೆರಡು ದಶಕಗಳಿಂದ ನೀರಾವರಿ ಸೌಲಭ್ಯಗಳು ಅಭಿವೃದ್ಧಿ ಹೊಂದಿದೆ. ಇದು ಖಾರಿಫ್​ ಬೆಲೆ ಅದರಲ್ಲೂ ಭತ್ತ, ತೊಗರಿ, ಕಡಲೆ ಬೀಜಗಳ ಬೆಳೆಗಳು ಹೆಚ್ಚಿನ ಮಳೆಯನ್ನು ಬೇಡುತ್ತದೆ.

ಇದನ್ನೂ ಓದಿ: El Nino ಛಾಯೆ; ಮಳೆ ಕೊರತೆ, ಉಷ್ಣಾಂಶ ಏರಿಕೆ: ಬರಗಾಲ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.