ETV Bharat / bharat

ಇಟ್ಟಿಗೆ ಭಟ್ಟಿಯಲ್ಲಿ ಉಸಿರುಗಟ್ಟಿ ಐವರು ಕಾರ್ಮಿಕರ ದಾರುಣ ಸಾವು..! - ಸಿಎಂ ಭೂಪೇಶ್ ಬಾಘೇಲ್ ಸಂತಾಪ

ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಮಲಗಿದ್ದ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇಟ್ಟಿಗೆ ಭಟ್ಟಿಯ ಹೊಗೆಯಿಂದ ಉಸಿರುಗಟ್ಟಿ ಈ ಕಾರ್ಮಿಕರು ಪ್ರಾಣ ಬಿಟ್ಟಿದ್ದಾರೆ. ಗಾಯಗೊಂಡಿರುವ ಓರ್ವ ಕಾರ್ಮಿಕ ಸ್ಥಿತಿ ಚಿಂತಾಜನಕವಾಗಿದೆ.

Brick kiln workers died in Mahasamund
ಇಟ್ಟಿಗೆ ಭಟ್ಟಿಯಲ್ಲಿ ಉಸಿರುಗಟ್ಟಿ ಐವರು ಕಾರ್ಮಿಕರ ದಾರುಣ ಸಾವು
author img

By

Published : Mar 15, 2023, 9:51 PM IST

ಮಹಾಸಮುಂಡ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಮಲಗಿದ್ದ ಐವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಗರ್ಹ್‌ಫುಲ್‌ಝರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮದ ಕಾರ್ಮಿಕರು ಇಟ್ಟಿಗೆಗಳನ್ನು ಸುಡಲು ಬೆಂಕಿ ಹೊತ್ತಿಸಿದ ನಂತರ, ಅಲ್ಲಿಯೇ ಇದ್ದ ಇಟ್ಟಿಗೆ ಗೂಡುಗಳ ಮೇಲೆ ಮಲಗಿದ್ದರು. ಆರು ಕೂಲಿ ಕಾರ್ಮಿಕರ ಪೈಕಿ, ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡಿರುವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ.

  • महासमुंद जिले के ग्राम गढ़फुलझर में ईंट भट्ठा में कार्यरत 5 श्रमिकों की मृत्यु का समाचार दुखद है।

    ईश्वर उनकी आत्मा को शांति और परिजनों को हिम्मत दे।

    इस दुःख की घड़ी में उनके परिवारों को ₹2 लाख आर्थिक सहायता की घोषणा करता हूँ।

    — Bhupesh Baghel (@bhupeshbaghel) March 15, 2023 " class="align-text-top noRightClick twitterSection" data=" ">

ಪೊಲೀಸರು ಹೇಳಿದ್ದೇನು?: ಪೊಲೀಸರ ಪ್ರಕಾರ, ಇಟ್ಟಿಗೆ ಗೂಡು ಕುಂಜ್ ಬಿಹಾರಿ ಪಾಂಡೆಗೆ ಸೇರಿದೆ. ಕುಂಜ್ ಬಿಹಾರಿ ಅವರು ಮಟಿಕಲಾ ಮಂಡಳಿಯ ಮಾಜಿ ಅಧ್ಯಕ್ಷರಾದ ಚಂದಶೇಖರ್ ಪಾಂಡೆ ಅವರ ಕಿರಿಯ ಸಹೋದರ. ಕೂಲಿ ಕಾರ್ಮಿಕರಿಂದ ಇಟ್ಟಿಗೆ ತಯಾರಿಸಿ, ಗುತ್ತಿಗೆ ನೀಡುತ್ತಿದ್ದರು.

ಐವರು ಕೂಲಿ ಕಾರ್ಮಿಕರ ಸಾವು: ಈ ಇಟ್ಟಿಗೆ ಭಟ್ಟಿಯಲ್ಲಿದ್ದ ಆರು ಕಾರ್ಮಿಕರನ್ನು ಗುರುತಿಸಲಾಗಿದೆ. ಅವರನ್ನು ಗಂಗಾರಾಮ್ ಬಿಸಿ(55), ದಶರತ್ ಬಿಸಿ(30), ಸೋನಾ ಚಂದ್ ಭೋಯ್ (40), ವರುಣ್ ಬಾರಿಹಾ (24), ಜನಕ್ ರಾಮ್ ಬಾರಿಹಾ (35) ಮನೋಹರ್ ಬಿಸಿ (30). ಎಂದು ಪತ್ತೆ ಹಚ್ಚಲಾಗಿದೆ. ಈ ಕೂಲಿ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 12 ಗಂಟೆಯವರೆಗೂ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ನಡೆಯುತ್ತಿತ್ತು. ಇದರಿಂದ ಎಲ್ಲಾ ಕೂಲಿಕಾರರು ಕೂಡ ತುಂಬಾ ಸುಸ್ತಾಗಿದ್ದರು.

ಘಟನೆ ಸಂಭವಿಸಿದ್ದು ಹೇಗೆ?: ಗ್ರಾಮಸ್ಥರು ಪ್ರಕಾರ, ಕೆಲಸದ ಆಯಾಸ ನೀಗಿಸಲು ಕೂಲಿ ಕಾರ್ಮಿಕರೆಲ್ಲ ಮದ್ಯ ಸೇವಿಸಿ ಇಟ್ಟಿಗೆ ಗೂಡು ಮೇಲೆ ಮಲಗಿದ್ದಾರೆ. ಮದ್ಯದ ಅಮಲು ಎಷ್ಟಿತ್ತೆಂದರೆ ಇಟ್ಟಿಗೆ ಭಟ್ಟಿಯಿಂದ ಹೊರ ಬಂದ ಹೊಗೆಯೂ ಅವರನ್ನು ಎಬ್ಬಿಸಲು ಸಾಧ್ಯವಾಗಿರಲಿಲ್ಲ. ದಟ್ಟವಾದ ಹೊಗೆಯಿಂದ ಉಸಿರುಗಟ್ಟಿ ಐವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಾತ್ರಿ 12ರಿಂದ ಬೆಳಗ್ಗೆ 4ರ ನಡುವೆ ಈ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆಗೆ ಇಟ್ಟಿಗೆ ಭಟ್ಟಿಯಿಂದ ಹೊಗೆ ಏಳುತ್ತಿರುವುದನ್ನು ಗ್ರಾಮಸ್ಥರೊಬ್ಬರು ನೋಡಿದ್ದಾರೆ. ಅವರು ಇಟ್ಟಿಗೆ ಭಟ್ಟಿಯ ಮೇಲೆ ಮಲಗಿದ್ದವರನ್ನು ಕರೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಅವರು, ತಕ್ಷಣ ಬಸ್ನಾ ಪೊಲೀಸರಿಗೆ ಮಾಹಿತಿ ನೀಡಿದರು.

ಇಡೀ ಗ್ರಾಮದಲ್ಲಿ ಶೋಕ: ಬಸ್ನಾ ಪೊಲೀಸ್ ಠಾಣೆ ಪ್ರಭಾರಿ ಕುಮಾರಿ ಚಂದ್ರಕರ್ ಅವರ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಎಲ್ಲರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು, ಐವರು 5 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬಸ್ನಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ. ಐವರು ಕೂಲಿ ಕಾರ್ಮಿಕರ ಸಾವಿನಿಂದ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಸಿಎಂ ಭೂಪೇಶ್ ಬಾಘೇಲ್ ಸಂತಾಪ: ಈ ಅಪಘಾತದ ಬಗ್ಗೆ ಸಿಎಂ ಭೂಪೇಶ್ ಬಾಘೇಲ್ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಮಹಾಸಮುಂಡ್ ಜಿಲ್ಲೆಯ ಗರ್ಹ್‌ಫುಲ್‌ಝಾರ್ ಗ್ರಾಮದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ಸಾವನ್ನಪ್ಪಿರುವ ಸುದ್ದಿ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬಕ್ಕೆ ಧೈರ್ಯ ನೀಡಲಿ. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ 2 ಲಕ್ಷ ರೂ. ಆರ್ಥಿಕ ನೆರವು ನೀಡುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ತಂದೆ ಸಾವು, ಮನನೊಂದ ಮಗ ಆತ್ಮಹತ್ಯೆಗೆ ಶರಣು.. ಕೌಟುಂಬಿಕ ಕಲಹಕ್ಕೆ ಒಂದೇ ದಿನ ಇಬ್ಬರು ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.