ETV Bharat / bharat

ನೆಹರೂ ಪತ್ನಿ ಹಣೆಪಟ್ಟಿ ಕಟ್ಟಿಕೊಂಡಿದ್ದ ಮಹಿಳೆ ನಿಧನ: ಯಾರು ಈ ಬುಧ್ನಿ ಮಾಂಜಿಯಾನ್​?

ಜವಾಹರ್​ಲಾಲ್​ ನೆಹರೂ ಅವರ ಪತ್ನಿ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಬುಡಕಟ್ಟು ಸಮುದಾಯದ ಬುಧ್ನಿ ಮಾಂಜಿಯಾನ್ ನಿಧನರಾಗಿದ್ದಾರೆ.

ಬುಧ್ನಿ ಮಾಂಜಿಯಾನ್
ಬುಧ್ನಿ ಮಾಂಜಿಯಾನ್
author img

By ETV Bharat Karnataka Team

Published : Nov 18, 2023, 5:42 PM IST

Updated : Nov 18, 2023, 6:44 PM IST

ಧನ್‌ಬಾದ್ (ಜಾರ್ಖಂಡ್​): ಇಲ್ಲಿನ ಪಂಚೇಟ್ ಅಣೆಕಟ್ಟನ್ನು ಉದ್ಘಾಟಿಸಿದ್ದ, ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರ ಪತ್ನಿ ಎಂದೇ ಹಣೆಪಟ್ಟಿ ಕಟ್ಟಿಕೊಂಡು ಶಿಕ್ಷೆಗೆ ಗುರಿಯಾಗಿದ್ದ ಬುಡಕಟ್ಟು ಸಮುದಾಯದ ಬುಧ್ನಿ ಮಾಂಜಿಯಾನ್​ ಅವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು. ಸಿಐಎಸ್ಎಫ್ ಯೋಧರು ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಪಂಚೇಟ್​ ಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಬುಡಕಟ್ಟು ಸಮುದಾಯದ ಬುಧ್ನಿ ಅವರು ಮಾಡದ ತಪ್ಪಿಗೆ 60 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದರು. ಬಹು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾರ್ಖಂಡ್​ನ ನಿರ್ಸಾದ ಪಂಚೇಟ್ ಹಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಮಾಂಜಿಯಾನ್​​ ನೆಹರೂ ಪತ್ನಿಯೇ?: ಪಶ್ಚಿಮಬಂಗಾಳದ ಮೂಲದ ಬುಧ್ನಿ ಮಾಂಜಿಯಾನ್​​ ಅವರು 17 ವರ್ಷದವರಾಗಿದ್ದಾಗ, ಮಾಜಿ ಪ್ರಧಾನಿ ದಿವಂಗತ ಜವಾಹರ್​ಲಾಲ್​ ನೆಹರೂ ಅವರ ಕೋರಿಕೆಯ ಮೇರೆಗೆ ಪಂಟೇಲ್​ ಅಣೆಕಟ್ಟನ್ನು ಉದ್ಘಾಟಿಸಿದ್ದರು. ಈ ವೇಳೆ ನೆಹರೂ ಅವರು ಆಕೆಯ ಕೊರಳಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ್ದರು. ಇದು ಅವರ ಬಾಳಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆದಿವಾಸಿಗಳ ಸಂಪ್ರದಾಯದಲ್ಲಿ ಕೊರಳಿಗೆ ಹಾರ ಹಾಕಿಸಿಕೊಂಡಲ್ಲಿ ಅವರ ಪತ್ನಿಯಾಗುತ್ತಾರೆ.

ಪಂಚಾಯಿತಿ ಸೇರಿದ ಬುಡಕಟ್ಟು ಸಮುದಾಯ ಅಂದಿನಿಂದ (1959ರಿಂದ) ಬುಧ್ನಿ ಅವರನ್ನು ಜವಾಹರ್​ಲಾಲ್​ ನೆಹರೂ ಅವರ ಪತ್ನಿ ಎಂದು ಘೋಷಿಸಿತು. ಆದಿವಾಸಿಗಳಲ್ಲದ ವ್ಯಕ್ತಿಯನ್ನು ವಿವಾಹವಾಗಿದ್ದಕ್ಕೆ ಸಮುದಾಯದಿಂದಲೇ ಆಕೆಯನ್ನು ಬಹಿಷ್ಕಾರ ಹಾಕಲಾಗಿತ್ತು. ಬಳಿಕ ಅವರು ಜಾರ್ಖಂಡ್​ಗೆ ಬಂದು ನೆಲೆಸಿದ್ದರು.

ಬಳಿಕ ವ್ಯಕ್ತಿಯೊಬ್ಬರ ಜೊತೆ ಜೀವನ ಸಾಗಿಸಿದ ಅವರಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಸಮುದಾಯದಿಂದ ಶಿಕ್ಷೆಗೆ ಒಳಗಾಗಿದ್ದನ್ನು ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರ ಗಮನಕ್ಕೂ ಈ ವಿಚಾರವನ್ನು ತರಲಾಗಿತ್ತು. ಅಲ್ಲದೇ ತಾವು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಹೊರಹಾಕಿದ್ದನ್ನು ತಿಳಿಸಿದ್ದರು. ಆಕೆಗೆ ನೆರವು ನೀಡಿದ ರಾಜೀವ್​ ಗಾಂಧಿ ಅವರು ಅದೇ ಕಂಪನಿಯಲ್ಲಿ ವಾಪಸ್​ ಕೆಲಸಕ್ಕೆ ಸೇರಿಸಿದ್ದರು.

ಇದಾದ ಬಳಿಕ ಬುಧ್ನಿ ಮಾಂಜಿಯನ್​ ಅವರು ಈಚೆಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಬಳಿ ಮನೆ ಮತ್ತು ಮಗಳಿಗೆ ಉದ್ಯೋಗ ಕೊಡಿಸಬೇಕು ಎಂದು ನೆರವು ಕೋರಿದ್ದರು. ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಇದನ್ನೂ ಓದಿ: ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣ - ತಜ್ಞರು

Last Updated : Nov 18, 2023, 6:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.