ಮುಂಬೈ: ಮುಂಬರುವ ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ವಡೋದರಾ ಬಳಿ ಹಳಿ ನಿರ್ಮಿಸಲು ಎಲ್ ಅಂಡ್ ಟಿ( ಲಾರ್ಸೆನ್ ಮತ್ತು ಟೌಬ್ರೋ) ನಿರ್ಮಾಣ ವಿಭಾಗವು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ನಿಂದ ಆರ್ಡರ್ ಪಡೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೂಪರ್ ಫಾಸ್ಟ್ ಟ್ರೈನ್ ಯೋಜನೆಗೆ ಬೇಕಾಗಿರುವ ಸಾಮಗ್ರಿಗಳನ್ನು ಒದಗಿಸುವ ಉದ್ದೇಶದಿಂದ ಎಲ್ ಅಂಡ್ ಟಿ ಈ ಒಪ್ಪಂದ ಮಾಡಿಕೊಂಡಿದ್ದು, ಯೋಜನೆಗೆ ಬೇಕಾದ ವಿನ್ಯಾಸವನ್ನು ತಯಾರು ಮಾಡಲಿದ್ದು, ಸಾಮಗ್ರಿಗಳನ್ನ ತಯಾರಿಸಲಿದೆ. ಈ ಯೋಜನೆಯ ವೆಚ್ಚವು 1000 ಕೋಟಿ ಯಿಂದ 2500 ಕೋಟಿ ರೂಗಳದ್ದಾಗಿರಲಿದೆ. 8.198 ಕಿಮೀ ಉದ್ದದ ಡಬಲ್-ಲೈನ್ ಹೈಸ್ಪೀಡ್ ರೈಲ್ವೆಗಾಗಿ ಕಾಮಗಾರಿ ವಿನ್ಯಾಸಗೊಳಿಸುವುದು ಮತ್ತು ನಿರ್ಮಿಸುವುದನ್ನು ಒಳಗೊಂಡಿರಲಿದೆ.
ಇದು ವಡೋದರದ ಪ್ರಮುಖ ನಿಲ್ದಾಣ, ಕಾರ್ ಬೇಸ್, ವಯಡಕ್ಟ್ ಮತ್ತು ಸೇತುವೆಗಳು, ವಾಸ್ತುಶಿಲ್ಪ, MEP ಮತ್ತು ಇತರ ಸಂಬಂಧಿತ ಕೆಲಸಗಳನ್ನು ಒಳಗೊಂಡಿರುತ್ತದೆ ಎಂದು ಕಂಪನಿ ಹೇಳಿದೆ. ಅಷ್ಟೆ ಅಲ್ಲ ನಾಲ್ಕು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು ಎಂದು ಗಡುವು ಸಹ ನೀಡಲಾಗಿದೆ.
508 ಕಿ.ಮೀ ಉದ್ದದ ಈ ಯೋಜನೆಯಲ್ಲಿ ಎಲ್ ಅಂಡ್ ಟಿ ಸುಮಾರು 333 ಕಿ.ಮೀ ಉದ್ದದ ಕಾಮಗಾರಿ ನಿರ್ವಹಿಸಲು ಅನುಮತಿ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಎಂದೇ ಪರಿಗಣಿಸಲಾಗಿದ್ದು, ಮುಂಬೈ- ಅಹಮದಾಬಾದ್ ಮಾರ್ಗವು ಮಹಾರಾಷ್ಟ್ರದಲ್ಲಿ 155.76 ಕಿಮೀ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಯಲ್ಲಿ 4.30 ಕಿಮೀ ಮತ್ತು ಗುಜರಾತ್‌ನಲ್ಲಿ ಉಳಿದ 348.04 ಕಿಮೀ ದೂರ ಕ್ರಮಿಸುತ್ತದೆ.
ದೇಶದ ಮೊದಲ ಹೈಸ್ಪೀಡ್ - ರೈಲು ಯೋಜನೆಯು 12 ನಿಲ್ದಾಣಗಳನ್ನು ಹೊಂದಿರುತ್ತದೆ ಮತ್ತು ಪೂರ್ಣಗೊಂಡ ನಂತರ, ರೈಲುಗಳು 320 kmph ವೇಗದಲ್ಲಿ ಸಂಚರಿಸಲಿವೆ. ಕೇವಲ 3 ಗಂಟೆಯಲ್ಲಿ ಮುಂಬೈನಿಂದ ಅಹಮದಾಬಾದ್ ತಲುಪಬಹುದಾಗಿದೆ.
ಇದನ್ನೂ ಓದಿ:Bulli Bai case: ದೂರುದಾರರಿಗೆ ಅಪರಿಚಿತರಿಂದ ಬೆದರಿಕೆ, ಮತ್ತೊಂದು ದೂರು ದಾಖಲು