ETV Bharat / bharat

KTR ಅಂಕಲ್ ದಯವಿಟ್ಟು ಬೀದಿ ನಾಯಿಗಳಿಂದ ನಮ್ಮನ್ನು ರಕ್ಷಿಸಿ.. ಮಕ್ಕಳ ಪ್ರತಿಭಟನೆ

author img

By

Published : Mar 6, 2022, 7:34 PM IST

ಮೆಡ್ಚಲ್ ಮಲ್ಕಜಗಿರಿ ಜಿಲ್ಲೆಯ ಕೊಂಪಲ್ಲಿ ಪುರಸಭೆ ವ್ಯಾಪ್ತಿಯ ಎನ್ ಸಿಎಲ್ ನಾರ್ತ್ ರೆವಿನ್ಯೂ ಕಾಲೋನಿಯಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಬೀದಿ ನಾಯಿಗಳ ಕಾಟಕ್ಕೆ ಬೇಸತ್ತಿದ್ದಾರೆ. ಪರಿಣಾಮ ಅವುಗಳ ನಿಯಂತ್ರಣಕ್ಕೆ ಮಕ್ಕಳು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

KTR ಅಂಕಲ್ ದಯವಿಟ್ಟು ಬೀದಿ ನಾಯಿಗಳಿಂದ ನಮ್ಮನ್ನು ರಕ್ಷಿಸಿ

ಹೈದರಾಬಾದ್​(ತೆಲಂಗಾಣ) ಕೆಟಿಆರ್ ಅಂಕಲ್... ಎಂಎಲ್ ಎ ಅಂಕಲ್... ಕಮಿಷನರ್ ಅಂಕಲ್.. ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಮಕ್ಕಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮೆಡ್ಚಲ್ ಮಲ್ಕಜಗಿರಿ ಜಿಲ್ಲೆಯ ಕೊಂಪಲ್ಲಿ ಪುರಸಭೆ ವ್ಯಾಪ್ತಿಯ ಎನ್ ಸಿಎಲ್ ನಾರ್ತ್ ರೆವಿನ್ಯೂ ಕಾಲೋನಿಯಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಬೀದಿ ನಾಯಿಗಳ ಕಾಟದಿಂದ ಭಯಭೀತರಾಗಿದ್ದಾರೆ. ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಕಾಲೋನಿಯಲ್ಲಿರುವ ಪುಟ್ಟ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಪರಿಣಾಮ ಬೀದಿ ನಾಯಿಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ತೆಲಂಗಾಣ ಐಟಿ, ಕೈಗಾರಿಕಾ ಸಚಿವ ಕೆಟಿಆರ್‌ಗೆ ಮಕ್ಕಳು ಮನವಿ ಮಾಡಿದ್ದಾರೆ.

KTR ಅಂಕಲ್ ದಯವಿಟ್ಟು ಬೀದಿ ನಾಯಿಗಳಿಂದ ನಮ್ಮನ್ನು ರಕ್ಷಿಸಿ ಎಂದ ಮಕ್ಕಳು

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಯುದ್ಧ: ಸಂಧಾನಕ್ಕೆ ಇಸ್ರೇಲ್​ ಪ್ರಯತ್ನ

ಮಕ್ಕಳು ಫಲಕಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಈ ವರ್ಷ ಅವರ ಕಾಲೋನಿಯ ನೂರಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ವೃದ್ಧರಿಗೆ ಬೀದಿ ನಾಯಿಗಳು ಕಚ್ಚಿವೆಯಂತೆ. ಕೆಲವು ಮಕ್ಕಳಿಗೆ ಶಸ್ತ್ರಚಿಕಿತ್ಸೆಯೂ ಆಗಿದೆಯಂತೆ. ಈ ಎಲ್ಲಾ ಘಟನೆಗಳಿಂದ ನೊಂದಿರುವ ಚಿನ್ನರು ತಮ್ಮ ಪೋಷಕರ ಜೊತೆಗೂಡಿ ಪ್ರತಿಭಟನೆಗಿಳಿದಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.