ಕೃಷ್ಣನಗರ : ಕೃಷ್ಣನಗರ ಟಿಎಂಸಿ ಅಭ್ಯರ್ಥಿ ಕೌಶಾನಿ ಮುಖರ್ಜಿ ಅವರ ಪ್ರಚಾರ ವೇಳೆ ನೀಡಿರುವ ಹೇಳಿಕೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಕೌಶಾನಿ ಮುಖರ್ಜಿ ಅವರು ಪ್ರಚಾರ ಮಾಡುವ ವೇಳೆ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ತಾಯಿ ಮತ್ತು ಸಹೋದರಿಯನ್ನು ಹೊಂದಿದ್ದೀರಾ, ನಿಮ್ಮ ಮತ ಚಲಾಯಿಸುವ ಮೊದಲು ಯೋಚನೆ ಮಾಡಿ ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
ಈ ಕುರಿತಾಗಿ ಕೌಶಾನಿ ಮುಖರ್ಜಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಬಿಜೆಪಿ ತನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿದೆ. ವಿರೋಧಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.