ಭಾರತದಲ್ಲಿ ಮಾಸ್ಕ್ ಬಳಕೆ ಸಂಬಂಧ ಮಿಮ್ಸ್ಗಳು ಹರಿದಾಡಿದವು. ಅದರಲ್ಲೂ ಕೊರೊನಾ ಹೆಚ್ಚಳವಾಗಿದ್ದ ಸಂದರ್ಭದಲ್ಲಂತೂ ಮಾಸ್ಕ್ ಹಾಕದಿದ್ದ ಕೆಲ ಜನರಿಗೆ ಪ್ಲಾಸ್ಟಿಕ್ ಬ್ಯಾಗ್ಗಳನ್ನೇ ಮಾಸ್ಕ್ ಮಾಡಿ ಹಾಕಿಸಿದ್ದರು. ಹಾಗೆ ಶರ್ಟ್ ಬಿಚ್ಚಿಸಿ ಮೂಗನ್ನು ಮುಚ್ಚಿಕೊಳ್ಳುವಂತೆಯೂ ಮಾಡಿದ್ದರು. ಈ ಸಂಬಂಧ ಅದೆಷ್ಟೋ ವ್ಯಂಗ್ಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್‌ನ್ನು ಯಾಕೆ ತಯಾರು ಮಾಡಲಾಗುತ್ತಿಲ್ಲ ಎಂಬ ಪ್ರಶ್ನೆ ಹಾಕುತ್ತಿದ್ರು. ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಈ ಮಾಸ್ಕ್ಗೆ ಈಗ "ಕೋಸ್ಕ್" ಎಂದು ಹೆಸರಿಸಲಾಗಿದೆ. ಕಾರಣ ಇದು ಮೂಗನ್ನು ಮಾತ್ರ ಮುಚ್ಚಲಿದ್ದು, ತುಂಬಾನೆ ವಿಶಿಷ್ಟವಾಗಿದೆ. ದಕ್ಷಿಣ ಕೊರಿಯಾದ ಮಾಸ್ಕ್ ತಯಾರಿಕಾ ಕಂಪನಿಯು ವಿಶಿಷ್ಟವಾದ ಮಾಸ್ಕ್‌ನ್ನು ತಯಾರಿಸಿದೆ. ತಿನ್ನುವಾಗ ಮತ್ತು ಕುಡಿಯುವಾಗಲೂ ಈ ಮಾಸ್ಕ್ ಧರಿಸಬಹುದು. ಈ ವಿಶಿಷ್ಟ ಮಾಸ್ಕ್ ಜಾಗತಿಕವಾಗಿ ವಿವಿಧ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುತ್ತಿದೆ.
ಇದಕ್ಕೆ "ಕೋಸ್ಕ್" ಎಂದು ಕೊರಿಯನ್ ಭಾಷೆಯಲ್ಲಿ ಹೆಸರಿಡಲಾಗಿದೆ. ಈ ಮಾಸ್ಕ್‌ನ್ನು ಕೊರಿಯನ್ ಕಂಪನಿ ಅಟ್ಮ್ಯಾನ್ ಬಿಡುಗಡೆ ಮಾಡಿದೆ. ಈ ಅಸಾಮಾನ್ಯ ಮಾಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವರು ಅದರ ಫೋಟೋ ಶೇರ್ ಮಾಡಿ ಭಿನ್ನ ವಿಭಿನ್ನವಾದ ತಲೆಬರಹ, ಕಮೆಂಟ್ ನೀಡುತ್ತಿದ್ದಾರೆ. ಓರ್ವರು ಚಾಕೊಲೇಟ್‌ನಿಂದ ಮಾಡಿದ ಟೀಪಾಟ್‌ಗಳನ್ನು ಸಹ ಮಾರಾಟ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರೆ, ಮತ್ತೊಬ್ಬರು ಮುಂದಿನ ಹಂತದ ಮೂರ್ಖತನ! ಎಂದು ಕಾಮೆಂಟ್ ಮಾಡಿದ್ದಾರೆ. ತಮ್ಮ ಮೂಗಿನ ಕೆಳಗೆ ಮಾಸ್ಕ್ ಧರಿಸುವ ಜನರಿಗೆ ಇದು ಭಿನ್ನವಾಗಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
-
진짜로 나와버린 코스크 pic.twitter.com/p58WrYGFLe
— 무슨 일이 일어나고 있나요? (@museun_happen) January 29, 2022 " class="align-text-top noRightClick twitterSection" data="
">진짜로 나와버린 코스크 pic.twitter.com/p58WrYGFLe
— 무슨 일이 일어나고 있나요? (@museun_happen) January 29, 2022진짜로 나와버린 코스크 pic.twitter.com/p58WrYGFLe
— 무슨 일이 일어나고 있나요? (@museun_happen) January 29, 2022
ಈ ವಿಶಿಷ್ಟ ಮಾಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕಾರಣ, ಕೊರೊನಾ ವೈರಸ್ ಬಾಯಿಯ ಮೂಲಕವೂ ತಗುಲುತ್ತದೆ ಎಂದು ಜನರು ನಂಬಿದ್ದಾರೆ. ಪರಿಣಾಮ ಬಾಯಿಯನ್ನು ಮುಚ್ಚದ ಮಾಸ್ಕ್ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಹ ಅಭಿಪ್ರಾಯ ವ್ಯಕ್ತಪಡಿತ್ತಿದ್ದಾರೆ.
ಕೆಲವು ಅಧ್ಯಯನಗಳ ಪ್ರಕಾರ, ವೈರಸ್ ದೇಹವನ್ನು ಪ್ರವೇಶಿಸಲು ಮೂಗು ಸುಲಭವಾದ ಮಾರ್ಗವಾಗಿದೆ ಎಂದು ಸೂಚಿಸಿವೆ. ಆದರೂ ವಾದ ವಿವಾದಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
ಇದರ ನುಡುವೆ ಮರುಬಳಕೆ ಮಾಡಬಹುದಾದ "ಕಾಪರ್ ಆಂಟಿವೈರಸ್ ನೋಸ್ ಮಾಸ್ಕ್‌ಗಳು" ಸಹ ಸುದ್ದಿಯಲ್ಲಿವೆ. ಈ ಮಾಸ್ಕ್ಗಳನ್ನು ಬಾಯಿಯನ್ನು ಮುಚ್ಚುವ ಸಾಮಾನ್ಯ ಮಾಸ್ಕ್ ರೀತಿ ಧರಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ, ಊಟ ಮಾಡುವಾಗ ಅಥವಾ ಕುಡಿಯುವಾಗ ಅದನ್ನು ತೆಗೆಯಬೇಕಿದೆ.