ETV Bharat / bharat

8 ತಿಂಗಳ ಬಳಿಕ ತನ್ನ ಯಜಮಾನಿಯನ್ನ ಸೇರಿದ ಕೂವಿ.. ಇಬ್ಬರ ಸಂತೋಷ ಬಣ್ಣಿಸಲಸಾಧ್ಯ.. - 8 ತಿಂಗಳ ಬಳಿಕ ತನ್ನ ಯಜಮಾನಿಯನ್ನ ಸೇರಿದ ನಾಯಿ

ತನ್ನ ಮನೆಯಾಕೆಯನ್ನು ಕಂಡ ಶ್ವಾನಕ್ಕೂ, ತಮ್ಮ ಮುದ್ದು ಕೂವಿ ಕಂಡ ಪಳನಿಯಮ್ಮನ ಸಂತೋಷಕ್ಕೂ ಪಾರವೇ ಇರಲಿಲ್ಲ. ಪ್ರೀತಿ ನಿಶ್ಕಲ್ಮಶ. ದೃಢವಾಗಿದ್ದರೆ ಅದು ಎರಡು ಮನಸ್ಸುಗಳನ್ನು ಮತ್ತೆ ಸೇರಿಸುತ್ತದೆ..

Koovi, canine reunites with family
ಕೂವಿ
author img

By

Published : Apr 20, 2021, 4:37 PM IST

ಇಡುಕ್ಕಿ(ಕೇರಳ) : ಪ್ರಪಂಚವು ಪ್ರೀತಿಯಿಂದ ಆವರಿಸಿಕೊಂಡಿದೆ ಎಂಬ ಮಾತು ಸುಳ್ಳಲ್ಲ. ಪ್ರೀತಿಯಿಂದ ಯುದ್ಧವನ್ನೇ ಗೆಲ್ಲಬಹುದು. ಇನ್ನು ಪ್ರಾಣಿಗಳ ಪ್ರೇಮ ನಿಶ್ಕಲ್ಮಶ.

ಇದು ಸುಮಾರು 8 ತಿಂಗಳ ಹಿಂದಿನ ಘಟನೆ. ಕೇರಳದ ಇಡುಕ್ಕಿಯ ಪೆಟ್ಟಿಮುಡಿ ಎಂಬಲ್ಲಿ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಕೂವಿ ಎಂಬ ನಾಯಿಯು ಭೂಕುಸಿತ ಆದ ಸ್ಥಳದಲ್ಲಿ ತನ್ನ ಯಜಮಾನನಿನಾಗಿ ತೀವ್ರ ಹುಡುಕಾಟದಲ್ಲಿ ತೊಡಗಿತ್ತು.

8 ತಿಂಗಳ ಬಳಿಕ ತನ್ನ ಯಜಮಾನಿಯನ್ನ ಸೇರಿದ ಕೂವಿ..

ಇದೇ ಸಂದರ್ಭ ಕೂವಿ ರಾಷ್ಟ್ರೀಯ ವಿಪತ್ತು ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಗೆ ಆ ಸ್ಥಳದಲ್ಲಿ ಎರಡು ವರ್ಷದ ಬಾಲಕಿಯ ಶವವನ್ನು ಪತ್ತೆ ಹಚ್ಚಲು ಸಹಾಯ ಮಾಡಿತ್ತು. ಹಾಗಾಗಿ, ಕೂವಿಯನ್ನು ಪೊಲೀಸರ ಶ್ವಾನ ತರಬೇತುದಾರ ಅಜಿತ್ ಮಾಧವನ್ ಅವರು ತಮ್ಮ ಬಳಿ ಇರಿಸಿಕೊಂಡು, ನೋಡಿಕೊಳ್ಳುತ್ತಿದ್ದರು.

ಇತ್ತ ಕೂವಿಯ ಯಜಮಾನನ ಕುಟುಂಬದ ಪಳನಿಯಮ್ಮ ಎಂಬಾಕೆ ಮಾತ್ರ ಆ ಘಟನೆಯಲ್ಲಿ ಬದುಕುಳಿದಿದ್ದರು. ಪಳನಿಯಮ್ಮ ತಮ್ಮ ನಾಯಿಗಾಗಿ ಹಂಬಲಿಸುತ್ತಿದ್ದ ವಿಚಾರ ತಿಳಿದು ಬಂತು. ಅದನ್ನು ಗಮನಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಪೊಲೀಸ್ ತಂಡಕ್ಕೆ ಕೂವಿಯನ್ನು ಹಸ್ತಾಂತರಿಸುವಂತೆ ಸೂಚನೆ ನೀಡಿದರು.

ಅಂತೆಯೇ ಪೊಲೀಸ್​ ತಂಡ ಕೂವಿಯನ್ನು ಪಳನಿಯಮ್ಮನಿಗೆ ಹಸ್ತಾಂತರಿಸಿತು. 8 ತಿಂಗಳ ಬಳಿಕ ತನ್ನ ಮನೆಯಾಕೆಯನ್ನು ಕಂಡ ಶ್ವಾನಕ್ಕೂ, ತಮ್ಮ ಮುದ್ದು ಕೂವಿಯನ್ನು ಕಂಡ ಪಳನಿಯಮ್ಮನ ಸಂತೋಷಕ್ಕೂ ಪಾರವೇ ಇರಲಿಲ್ಲ. ಪ್ರೀತಿ ನಿಶ್ಕಲ್ಮಶವಾಗಿದ್ದು, ದೃಢವಾಗಿದ್ದರೆ ಅದು ಎರಡು ಮನಸ್ಸುಗಳನ್ನು ಮತ್ತೆ ಸೇರಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.