ಪುರಿ, ಒಡಿಶಾ : ವಿಶ್ವ ವಿಖ್ಯಾತ ಕೊನಾರ್ಕ್ ದೇವಾಲಯಕ್ಕೆ ಮೇ 31ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಕೊನಾರ್ಕ್‌ನ ಭಾರತೀಯ ಪುರಾತತ್ವ ಕೇಂದ್ರದ ಹಿರಿಯ ಅಧಿಕಾರಿ ನೀರಜ್ ಸಿಂಗ್ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ಪ್ರವೇಶ ಇಲ್ಲ ಎಂದಿದ್ದಾರೆ.
ಸಂಸ್ಕೃತಿ ಸಚಿವಾಲಯದ ನಿರ್ದೇಶನದ ಮೇರೆಗೆ ಭಾರತೀಯ ಪುರಾತತ್ವ ಕೇಂದ್ರ ಏಪ್ರಿಲ್ 15ರಂದು ಪುರಿಯಲ್ಲಿ ಜಗನ್ನಾಥ ದೇವಸ್ಥಾನ, ಕೊನಾರ್ಕ್‌ನ ಸೂರ್ಯ ದೇವಾಲಯ ಮತ್ತು ಭುವನೇಶ್ವರದ ಲಿಂಗರಾಜ್ ದೇವಸ್ಥಾನವನ್ನು ಮೇ 15ರವರೆಗೆ ಮುಚ್ಚಲು ಆದೇಶಿಸಿತ್ತು.
ಇದನ್ನೂ ಓದಿ: ಕೋವಿಡ್ ನಿಯಮ ಮೀರಿ 'ಬಿಗ್ಬಾಸ್' ಶೂಟಿಂಗ್: ಸೆಟ್ ಸೀಜ್ ಮಾಡಿದ ಅಧಿಕಾರಿಗಳು
ಈಗ ಹೊಸ ಆದೇಶವನ್ನು ಭಾರತೀಯ ಪುರಾತತ್ವ ಕೇಂದ್ರ ಹೊರಡಿಸಿದ್ದು, ಮೇ 30ವರೆಗೆ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.