ETV Bharat / bharat

ದೀದಿಗೆ ಶಾಕ್​ ಮೇಲೆ ಶಾಕ್​​: ಬಿಜೆಪಿ ಸೇರಿದ ಟಿಎಂಸಿ ಸಚಿವ ಹಾಗೂ ಶಾಸಕ!

author img

By

Published : Mar 10, 2021, 6:47 PM IST

ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದ್ದು, ತೃಣಮೂಲ ಕಾಂಗ್ರೆಸ್​ನ ಮತ್ತಿಬ್ಬರು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ.

TMC MLA Gaurishankar
TMC MLA Gaurishankar

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವು ವಾರಗಳು ಮಾತ್ರ ಬಾಕಿ ಉಳಿದಿದೆ. ಇದರ ಮಧ್ಯೆ ಪಕ್ಷಾಂತರ ಪರ್ವ ಜೋರಾಗಿದೆ. ತೃಣಮೂಲ ಕಾಂಗ್ರೆಸ್​ನ ಇಬ್ಬರು ಮುಖಂಡರು ಇದೀಗ ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್​​ನಲ್ಲಿ ಸಚಿವರಾಗಿದ್ದ ಬಚ್ಚು ಹನ್ಸಾಡ್​​ ಹಾಗೂ ಶಾಸಕ ಗೌರಿ ಶಂಕರ್​ ದತ್ತಾ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್​​ ಘೋಷ್​ ಅವರ ಸಮ್ಮುಖದಲ್ಲಿ ಕಮಲ ಪಕ್ಷಕ್ಕೆ ಜೈ ಎಂದರು.

ನಟ, ನಟಿಯರಿಗೂ ಬಿಜೆಪಿ ಗಾಳ..

ಇದರ ಜತೆಗೆ ಬೆಂಗಾಳಿ ನಟಿ ರಾಜಶ್ರೀ ರಾಜಬನ್ಸಿ ಹಾಗೂ ಬನ್ನಿ ಸೆನ್‌ಗುಪ್ತಾ, ಟಿಎಂಸಿ ಸಂಸದೆ ಪ್ರತೀಮಾ ಮಂಡನ್​ ಸಹೋದರಿ ಜಯಂತಿ ಕೂಡ ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ದೀದಿಗೆ ಬಿಗ್​ ಶಾಕ್: ಮತ್ತೆ ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ! ​

ಕಳೆದ ಕೆಲ ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್​ನ ಅನೇಕ ಶಾಸಕರು, ಸಚಿವರು ಬಿಜೆಪಿ ಸೇರಿಕೊಂಡಿದ್ದರು. ಇಲ್ಲಿಯವರೆಗೆ ಒಟ್ಟು 26 ಟಿಎಂಸಿ ಶಾಸಕರು ಹಾಗೂ ಇಬ್ಬರು ಸಂಸದರು ಬಿಜೆಪಿ ಸೇರಿಕೊಂಡಿದ್ದು, ಇವರ ಜತೆಗೆ ಅನೇಕ ನಟ-ನಟಿಯರು ಹಾಗೂ ಕ್ರಿಕೆಟರ್ಸ್​ ಕೂಡ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮಾರ್ಚ್​ 8ರಂದು ತೃಣಮೂಲ ಕಾಂಗ್ರೆಸ್​ನ ಐವರು ಶಾಸಕರಾದ ಸೋನಾಲಿ ಗುಹಾ, ದೀಪೆಂದು ಬಿಸ್ವಾಸ್​, ರವೀಂದ್ರನಾಥ್​ ಭಟ್ಟಾಚಾರ್ಯ, ಜತು ಲಾಹಿರಿ ಹಾಗೂ ಸರಲಾ ಮುರ್ಮು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್​ ಹಾಗೂ ಸುವೇಂದು ಅಧಿಕಾರಿ ಸಮ್ಮುಖದಲ್ಲಿ ಇವರು ಕಮಲ ಸೇರಿದ್ದರು.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ ಹಾಗೂ ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​ ಮಾಡಿದೆ. ಪ್ರಮುಖವಾಗಿ ಟಿಎಂಸಿ ಕೆಲ ಶಾಸಕರು ಹಾಗೂ ಸಚಿವರಿಗೆ ಟಿಕೆಟ್​ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.