ಕೋಲ್ಕತ್ತಾ: ಪ್ರಗತಿಯಲ್ಲಿರುವ ಮೆಟ್ರೋ ಕಾಮಗಾರಿಯಿಂದ ನಗರದ ಬೋ ಬಜಾರ್ ಬಳಿಯ ಕೆಲ ಕಟ್ಟಡಗಳಲ್ಲಿ ಇಂದು ಬೆಳಿಗ್ಗೆ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಉಂಟಾಗಿದೆ. ಆದ್ದರಿಂದ ತಕ್ಷಣವೇ 10 ಕಟ್ಟಡಗಳ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡ ತಕ್ಷಣವೇ ನಿವಾಸಿಗಳು ಕೆಲ ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಮೆಟ್ರೋ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಮುನ್ನೆಚ್ಚರಿಕಾ ಸ್ಥಳದಲ್ಲೇ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಸ್ಥಳೀಯ ಜನಪ್ರತಿನಿಧಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2019ರಲ್ಲಿ ಮೆಟ್ರೋ ಕಾಮಗಾರಿಯಿಂದ ಬಿವ್ಬಜಾರ್ ಬಳಿಕ ಇದೇ ರೀತಿಯ ಘಟನೆ ನಡೆದಿತ್ತು.
(ಓದಿ: ಭಾರತ ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ.. ರೈಲ್ವೆ ಸಮಯ ವಿಸ್ತರಿಸಿದ ದೆಹಲಿ ಮೆಟ್ರೋ)