How to Make Sponge Dosa Recipe in Kannada: ಬಹುತೇಕ ಜನರು ಮೃದುವಾದ ಮತ್ತು ರುಚಿಕರವಾದ ದೋಸೆ ಇಷ್ಟಪಡುತ್ತಾರೆ. ಕೆಲವರು ಮೃದುವಾದ ದೋಸೆಗಳನ್ನು ತಿನ್ನಲು ಹೋಟೆಲ್‌ಗಳಿಗೆ ತೆರಳುತ್ತಾರೆ. ನೀವು ಕೆಲವು ಟಿಪ್ಸ್ ಅನುಸರಿಸಿದರೆ ಸಾಕು ಮನೆಯಲ್ಲಿ ಸ್ಪಂಜ್ ದೋಸೆ ಸಿದ್ಧಪಡಿಸಬಹುದು. ಎಣ್ಣೆ, ಮೊಸರು, ಉದ್ದಿನ ಬೇಳೆ, ಅಡುಗೆ ಸೋಡಾ ಈ ದೋಸೆಗೆ ಬೇಕಾಗಿಲ್ಲ. ಮಕ್ಕಳು ಬೆಳಗಿನ ಉಪಾಹಾರಕ್ಕಾಗಿ ಮೃದುವಾದ ದೋಸೆಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಹಾಗಾದರೆ ಸರಳವಾಗಿ ಸ್ಪಂಜ್ ದೋಸೆ ರೆಡಿ ಮಾಡುವುದು ಹೇಗೆ ಎಂಬುದನ್ನು ಈಗ ನೋಡೋಣ.
ಸ್ಪಾಂಜ್ ದೋಸೆಕ್ಕೆ ಬೇಕಾಗುವ ಪದಾರ್ಥಗಳು:
- ಅಕ್ಕಿ - ಒಂದೂವರೆ ಕಪ್
- ಒಂದು ಟೀಸ್ಪೂನ್ - ಮೆಂತೆ
- ಚುರುಮುರಿ (Puffed Rice) - ಮೂರು ಕಪ್ಗಳು
- ರುಚಿಗೆ ತಕ್ಕಷ್ಟು ಉಪ್ಪು
ಸ್ಪಾಂಜ್ ದೋಸೆ ತಯಾರಿಸುವ ವಿಧಾನ:
- ಮೊದಲು ಒಂದು ಬಟ್ಟಲಿನಲ್ಲಿ ಅಕ್ಕಿ ಮತ್ತು ಮೆಂತ್ಯ ಕಾಳುಗಳನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆಯಿರಿ. ನಂತರ ನೀರು ಹಾಕಿ, 5 ಗಂಟೆಗಳ ಕಾಲ ನೆನೆಸಬೇಕು.
- ಈಗ ನೆನೆಸಿದ ಅಕ್ಕಿಯನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ಹಿಟ್ಟಿನ ಮಿಶ್ರಣವನ್ನು ದೊಡ್ಡ ಪಾತ್ರೆಯಲ್ಲಿ ಸುರಿಯಿರಿ.
- ಈಗ ಇನ್ನೊಂದು ಪಾತ್ರೆಯಲ್ಲಿ ಚುರುಮುರಿ ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ನಂತರ ಅವುಗಳಿಂದ ನೀರನ್ನು ಹಿಂಡಿ ಮತ್ತು ಮಿಕ್ಸಿಂಗ್ ಬೌಲ್ನಲ್ಲಿ ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಅಕ್ಕಿ ಹಿಟ್ಟಿಗೆ ಚುರುಮುರಿ ಪೇಸ್ಟ್ನ್ನು ಸೇರಿಸಿ ಮತ್ತು ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ. ನಂತರ ಬೌಲ್ ಅನ್ನು ಮುಚ್ಚಿ ಹಾಗೂ ಅದನ್ನು 8 ಗಂಟೆಗಳ ಕಾಲ ಹುದುಗಿಸಲು ಬಿಡಬೇಕಾಗುತ್ತದೆ.
- ದೋಸೆ ಮಾಡುವ ಮೊದಲು ಹಿಟ್ಟಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. (ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ)
- ನಂತರ ಒಲೆಯ ಮೇಲೆ ನಾನ್ ಸ್ಟಿಕ್ ದೋಸೆ ಪ್ಯಾನ್ ಇಟ್ಟು ಬಿಸಿ ಮಾಡಿ. ಸ್ವಲ್ಪ ಬಿಸಿಯಾದ ನಂತರ ಸ್ವಲ್ಪ ಹಿಟ್ಟು ತೆಗೆದುಕೊಂಡು ದಪ್ಪ ದೋಸೆದಂತೆ ಹರಡಿ.
- ಸೆಟ್ ದೋಸೆಯ ರೀತಿಯಲ್ಲಿ ಹಾಕಿದ ನಂತರ ಮುಚ್ಚಿಟ್ಟು ಸ್ವಲ್ಪ ಹೊತ್ತು ಬೇಯಲು ಬಿಡಿ. ನಂತರ ದೋಸೆ ಇನ್ನೊಂದು ಬದಿಗೆ ಸೌಟಿನಿಂದ ತಿರುಗಿಸಿ ಸ್ವಲ್ಪ ಹೊತ್ತು ಬೆಂದ ನಂತರ ತಟ್ಟೆಗೆ ತೆಗೆದುಕೊಳ್ಳಿ.
- ಉಳಿದ ಹಿಟ್ಟಿನೊಂದಿಗೆ ಸರಳವಾಗಿ ಇದೇ ರೀತಿ ದೋಸೆ ಮಾಡಿಕೊಳ್ಳಿ. ತುಂಬಾ ನಯವಾದ ದೋಸೆಗಳು ನಿಮ್ಮ ಮುಂದಿ ರೆಡಿ.
- ಈ ದೋಸೆಗಳನ್ನು ತೆಂಗಿನಕಾಯಿ ಚಟ್ನಿ, ಶೇಂಗಾ ಚಟ್ನಿ ಹಾಗೂ ಟೊಮೆಟೊ ಚಟ್ನಿಯೊಂದಿಗೆ ಸಂಯೋಜಿಸಿದಾಗ ಈ ದೋಸೆಗಳು ತುಂಬಾ ರುಚಿ ಆಗಿರುತ್ತವೆ.
- ನೀವು ಬಯಸಿದರೆ, ಮನೆಯಲ್ಲಿ ಈ ದೋಸೆಗಳನ್ನು ಟ್ರೈ ಮಾಡಿ ನೋಡಿ.
ಟೇಸ್ಟಿಯಾದ ಟೊಮೆಟೊ ಚಟ್ನಿಗೆ ಬೇಕಾಗುವ ಸಾಮಗ್ರಿ:
- ಎಣ್ಣೆ
- ಬೆಳ್ಳುಳ್ಳಿ ಎಸಳು - 5
- ಉಪ್ಪು - ರುಚಿಗೆ ತಕ್ಕಷ್ಟು
- ಹುರಿದ ಟೊಮೆಟೊ - 3 ತೆಳುವಾಗಿ ಕತ್ತರಿಸಿ ಇಟ್ಟುಕೊಳ್ಳಿ
- ಹುಣಸೆಹಣ್ಣು - ಸಣ್ಣ ನಿಂಬೆ ಗಾತ್ರ
- ಒಣ ಮೆಣಸಿನಕಾಯಿ - 6ರಿಂದ 7
- ಸಾಸಿವೆ- ಟೀಸ್ಪೂನ್
- ಉದ್ದಿನಬೇಳೆ -ಅರ್ಧ ಟೀಸ್ಪೂನ್
- ಕರಿಬೇವಿನ ಎಲೆಗಳು- ಸ್ವಲ್ಪ
- ಒಂದು ಒಣ ಕೆಂಪು ಮೆಣಸಿನಕಾಯಿ
ಟೊಮೆಟೊ ಚಟ್ನಿ ತಯಾರಿಸುವುದು ಹೇಗೆ?:
- ಮೊದಲು ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆಯಿಂದ ಬಿಸಿ ಮಾಡಿ.
- ನಂತರ ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಮತ್ತು ಬಣ್ಣ ಬದಲಾಗುವವರೆಗೆ ಹುರಿಯಿರಿ. ಒಣ ಕೆಂಪು ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
- ನಂತರ ಟೊಮೆಟೊ ಚೂರುಗಳನ್ನು ಸೇರಿಸಿ ಹಾಗೂ ಮೃದುವಾಗುವವರೆಗೆ ಹುರಿಯಿರಿ.
- ಟೊಮೆಟೊ ಮೃದುವಾದ ಬಳಿಕ ಹುಣಸೆಹಣ್ಣು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ.
- ನಂತರ ಸ್ಟವ್ ಆಫ್ ಮಾಡಿ ಈ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
- ಈಗ ಟೊಮೆಟೊ ಮಿಶ್ರಣವನ್ನು ಮಿಕ್ಸಿಂಗ್ ಜಾರ್‌ಗೆ ಹಾಕಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ.
- ನಂತರ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಎರಡರಿಂದ ಮೂರು ಚಮಚ ಎಣ್ಣೆಯನ್ನು ಹಾಕಿ
- ಎಣ್ಣೆ ಬಿಸಿಯಾದ ನಂತರ ಒಂದು ಚಮಚ ಸಾಸಿವೆ ಹಾಗೂ ಅರ್ಧ ಚಮಚ ಉದ್ದಿನ ಬೇಳೆ ಹಾಕಿ.
- ಬಳಿಕ ಕರಿಬೇವಿನ ಸೊಪ್ಪು ಹಾಗೂ ಒಂದು ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ.
- ಒಗ್ಗರಣೆ ಸಿದ್ಧವಾದ ನಂತರ, ಟೊಮೆಟೊ ಮಿಶ್ರಣವನ್ನು ಸೇರಿಸಿ.
- ಒಂದು ನಿಮಿಷ ಸರಿಯಾಗಿ ಬೆರೆಸಿದ ನಂತರ, ದಪ್ಪವಾದ ಟೊಮೆಟೊ ಚಟ್ನಿ ಸಿದ್ಧವಾಗುತ್ತದೆ.
- ಈ ಟೊಮೆಟೊ ಚಟ್ನಿಯೊಂದಿಗೆ ಬಿಸಿ ಸ್ಪಂಜ್ ದೋಸೆ ಸೇವಿಸಿದ ರುಚಿ ಮಾತ್ರ ಅದ್ಭುತವಾಗಿರುತ್ತದೆ.