ETV Bharat / bharat

ಸಾಕಿ ಸಲುಹಿದ ಚಿಕ್ಕಮ್ಮನಿಗೆ 'ಬೆಳ್ಳಿ ಚಪ್ಪಲಿ' ಉಡುಗೊರೆ ನೀಡಿದ ಯುವಕ! - ಚಿಕ್ಕಮ್ಮನಿಗೆ ಬೆಳ್ಳಿ ಚಪ್ಪಲಿ ಉಡುಗೊರೆ ನೀಡಿದ ವ್ಯಕ್ತಿ

ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡು ಚಿಕ್ಕಮ್ಮನ ಬಳಿ ಬೆಳೆದ ಯುವಕನೋರ್ವ ಇದೀಗ ಅವರಿಗೆ ಪ್ರೀತಿಯ ಸೂಚಕವಾಗಿ ವಿಶೇಷ ಉಡುಗೊರೆ ನೀಡಿದ್ದಾನೆ.

silver slippers
silver slippers
author img

By

Published : Nov 5, 2020, 10:17 PM IST

ಕೊಲ್ಹಾಪೂರ (ಮಹಾರಾಷ್ಟ್ರ): ಪ್ರೀತಿಯ ಸೂಚಕವಾಗಿ ಕೊಲ್ಹಾಪುರದ ಯುವಕನೋರ್ವ ತನ್ನ ಚಿಕ್ಕಮ್ಮನಿಗೆ ಬೆಳ್ಳಿ ಚಪ್ಪಲಿ ಉಡುಗೊರೆಯಾಗಿ ನೀಡಿದ್ದಾನೆ. ಈ ಚಪ್ಪಲಿ ತಯಾರಿಸಲು ಯುವರಾಜ್​ ಘೋರ್ಪಾಡೆ ಎಂಬಾತ ಕೊಲ್ಹಾಪುರದ ವಿಶೇಷ ಆಭರಣ ವ್ಯಾಪಾರಿಯನ್ನು ಸಂಪರ್ಕಿಸಿದ್ದಾನೆ.

ಜಯಶ್ರೀ ಅವರಿಗೆ 240 ಗ್ರಾಂ ತೂಕದ ಒಂದು ಜೋಡಿ ಬೆಳ್ಳಿ ಚೆಪ್ಪಲಿ ಉಡುಗೊರೆಯಾಗಿ ನೀಡಿದ್ದು, ಇದರ ಬೆಲೆ ಸುಮಾರು 20 ಸಾವಿರ ರೂ. ಆಗಿದೆ. 2010ರಲ್ಲಿ ಚಿಕ್ಕ ವಯಸ್ಸಿನವನಾಗಿದ್ದ ವೇಳೆ ಯುವರಾಜ್​ ಹೆತ್ತವರನ್ನ ಕಳೆದುಕೊಂಡ ನಂತರ ಆತನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಈ ವೇಳೆ ಈತನ ಜವಾಬ್ದಾರಿ ಹೊತ್ತುಕೊಂಡಿದ್ದು ಗಂಡನನ್ನು ಕಳೆದುಕೊಂಡಿದ್ದ ಜಯಶ್ರಿ. ಸಾಂಗ್ಲಿಯಲ್ಲಿ ಜೆರಾಕ್ಸ್​​ ಅಂಗಡಿ ನಡೆಸುತ್ತಿದ್ದ ಇವರು, ಯುವರಾಜ್​ನನ್ನು ತನ್ನ ಮಗನಂತೆ ಬೆಳೆಸಿದ್ದಾರೆ.

ಈಟಿವಿ ಭಾರತ್​ ಜತೆ ಮಾತನಾಡಿರುವ ಯುವರಾಜ್, ನನ್ನ ತಾಯಿ ನಿಧನದ ಬಳಿಕ ಚಿಕ್ಕಮ್ಮ ನನ್ನನ್ನು ನೋಡಿಕೊಂಡಿದ್ದು, ಯಾವಾಗಲೂ ಅನಾಥನಂತೆ ಭಾವಿಸಲಿಲ್ಲ. ಹಾಗಾಗಿ ಕೃತಜ್ಞತೆ ವ್ಯಕ್ತಪಡಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.