ETV Bharat / bharat

ವೈಟ್‌ಬಾಲ್​ ಕ್ರಿಕೆಟ್​ನಲ್ಲಿ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​, ಜಡೇಜಾ ಅದ್ಭುತ ಆಲ್​ರೌಂಡರ್​: ಉದಾನ್​ - ಶ್ರೀಲಂಕಾ ಆಲ್​ರೌಂಡರ್​ ಉದಾನ್​

ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್ ಎಂದು ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬೌಲರ್​ ಇಸುರು ಉದಾನ್ ಹೇಳಿದ್ದಾರೆ.

Isuru Udana
Isuru Udana
author img

By

Published : Jan 15, 2021, 7:17 PM IST

ಅಬುದಾಬಿ: ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ ಹಾಗೂ ರವೀಂದ್ರ ಜಡೇಜಾ ಉತ್ತಮ ಆಲ್​ರೌಂಡರ್​ ಎಂದು ಶ್ರೀಲಂಕಾ ಮಧ್ಯಮ ಕ್ರಮಾಂಕದ ಬೌಲರ್​ ಇಸುರು​ ಉದಾನ್​ ಹೇಳಿದ್ದಾರೆ.

ಇದನ್ನೂ ಓದಿ: ಟೆಸ್ಟ್​ನಲ್ಲಿ 40 ರಿಂದ 50 ಓವರ್​ ಎಸೆಯಲು ಸಿದ್ಧ: ವಾಷಿಂಗ್ಟನ್ ಸುಂದರ್​

ಮಿಚೆಲ್‌​ ಸ್ಟಾರ್ಕ್​ ವಿಶ್ವದ ಉತ್ತಮ ಬೌಲರ್​ ಎಂದು ಅವರು ಹೇಳಿದ್ದಾರೆ. ಮುಂಬರುವ ಅಬುದಾಬಿ ಟಿ10 ಕ್ರಿಕೆಟ್ ಲೀಗ್​ನಲ್ಲಿ ಕ್ರಿಸ್​ ಗೇಲ್ ನೇತೃತ್ವದ ತಂಡವನ್ನು ಇಸುರು ಉದಾನ್​ ಎದುರಿಸಲಿದ್ದು, ಬಾಂಗ್ಲಾ ಟೈಗರ್ಸ್​ ತಂಡದ ಪರ ಆಡಲಿದ್ದಾರೆ. ಈ ಪಂದ್ಯ ಜನವರಿ 28ರಂದು ಶೇಖ್​ ಜಾಯೆದ್​​ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕ್ರಿಸ್‌​ ಗೇಲ್​ ವಿರುದ್ಧ ತಾವು ಉತ್ತಮ ಪ್ಲಾನ್ ಮಾಡಿಕೊಂಡಿದ್ದು, ಬೌಲಿಂಗ್​ನಲ್ಲಿ ಅವರ ವಿಕೆಟ್ ಪಡೆದುಕೊಳ್ಳಲು ಹೊಸ ಯೋಜನೆ ರೂಪಿಸಿರುವುದಾಗಿ ಅವರು ತಿಳಿಸಿದ್ದಾರೆ. ಜೊತೆಗೆ ತಮ್ಮದು ಉತ್ತಮ ತಂಡವೆಂದೂ ಹೇಳಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ರನ್ನಿಂಗ್ ಮಾಡುವುದು ಹಾಗೂ ಜಿಮ್​ಗೆ ಹೋಗುವುದು ತುಂಬಾ ಕಠಿಣವಾಗಿತ್ತು. ಈ ಸಮಯದಲ್ಲಿ ನಾವು ಆತ್ಮವಿಶ್ವಾಸ ಕಾಯ್ದುಕೊಳ್ಳುವುದು ಅತೀ ಅವಶ್ಯವಾಗಿತ್ತು ಎಂದರು.

ಇಸುರು ಉದಾನ್​ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಭಾಗವಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.