ನೈನಿತಾಲ್: ಭಾರತೀಯ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಮಗಳು ವಾಮಿಕಾ ಜತೆಗೆ ಉತ್ತರಾಖಂಡ್ ಪ್ರವಾಸದಲ್ಲಿದ್ದಾರೆ. ಇಲ್ಲಿನ ಜಗದ್ವಿಖ್ಯಾತ ಆಶ್ರಮ ನೈನಿತಾಲ್ ಜಿಲ್ಲೆಯ ಕೈಂಚಿ ಬಾಬಾ ನೀಮ್ ಕರೌಲಿ ಆಶ್ರಮಕ್ಕೆ ಕೊಹ್ಲಿ ಕುಟುಂಬ ಸಮೇತ ಭೇಟಿ ನೀಡಿ ವಿಶ್ರಾಂತಿ ಪಡೆದರು.
ಹೆಲಿಕಾಪ್ಟರ್ ಮೂಲಕ ಭವಾಲಿಯ ಸೈನಿಕ ಶಾಲೆ ಹೆಲಿಪ್ಯಾಡ್‌ಗೆ ಬಂದಿಳಿದ ಕೊಹ್ಲಿ, ಪತ್ನಿ ಜತೆಗೆ ಬಾಬಾ ನೀಮ್ ಕರೌಲಿ ಮಹಾರಾಜರ ಆಶ್ರಮಕ್ಕೆ ತಲುಪಿದರು. ಬಾಬಾ ನೀಮ್ ಕರೌಲಿ ಧಾಮ್‌ನಲ್ಲಿ ಕೊಹ್ಲಿ, ಅನುಷ್ಕಾ ಶರ್ಮಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಹನುಮಾನ್ ಚಾಲೀಸ್ ಪಠಿಸಿದರು. ಈ ವೇಳೆ, ಬಾಬಾ ನೀಮ್ ಕರೌಲಿ ಆರತಿಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅಭಿಮಾನಿಗಳು ಜಮೆ: ವಿರಾಟ್ ಮತ್ತು ಅನುಷ್ಕಾ ದೇವಸ್ಥಾನಕ್ಕೆ ಆಗಮಿಸಿದ ಮಾಹಿತಿ ಅರಿತ ನೂರಾರು ಅಭಿಮಾನಿಗಳು ದೇವಸ್ಥಾನದ ದ್ವಾರದ ಎದುರು ಜಮಾಯಿಸಿದ್ದರು. ಆದರೆ, ಅಭಿಮಾನಿಗಳನ್ನು ಭೇಟಿ ಮಾಡಲು ಒಪ್ಪದ ಸೆಲಿಬ್ರಿಟಿ ಅನುಷ್ಕಾ ,ವಿರಾಟ್ ಮುಕ್ತೇಶ್ವರಕ್ಕೆ ತೆರಳಿದರು. ಆದರೆ, ದೇವಸ್ಥಾನ ಸಮಿತಿ ಪದಾಧಿಕಾರಿಗಳು ವಿರಾಟ್ ಮತ್ತು ಅನುಷ್ಕಾ ಜತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಬಾಬಾರ ಭಕ್ತರಲ್ಲಿ ಕೊಹ್ಲಿ ಒಬ್ಬರು: ನೀಮ್ ಕರೌಲಿ ಬಾಬಾರ ಭಕ್ತರಲ್ಲಿ ದೇಶವಾಸಿಗಳು ಮಾತ್ರವಲ್ಲ ವಿದೇಶಿಯರೂ ಇದ್ದಾರೆ. ಹಿಂದೆ ಪಿಎಂ ಮೋದಿ, ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್, ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮತ್ತು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಂಥ ಸೆಲೆಬ್ರಿಟಿಗಳು ಸಹ ಬಂದಿದ್ದರು. ಅದರಲ್ಲಿ ಈಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹೆಸರು ಕೂಡ ಸೇರ್ಪಡೆಯಾಗಿದೆ.
ನೀಮ್ ಕರೌಲಿ ಬಾಬಾ ಆಶ್ರಮ: ಕೈಂಚಿ ಧಾಮ್ ಉತ್ತರಾಖಂಡದ ಹಿಮಾಲಯದ ತಪ್ಪಲಿನಲ್ಲಿರುವ ಆಶ್ರಮ. ಇದು ನೈನಿತಾಲ್ ಜಿಲ್ಲೆಯಲ್ಲಿದೆ. ಅತ್ಯಂತ ಶಾಂತ, ಶುಭ್ರ ಸ್ಥಳ ಮತ್ತು ಇಲ್ಲಿನ ಹಸಿರು ಹೊದಿಕೆ ಆಕರ್ಷಿಸುತ್ತದೆ. ಸಮುದ್ರ ಮಟ್ಟದಿಂದ 1400 ಮೀಟರ್ ಎತ್ತರದ ಈ ಆಶ್ರಮವು ನೈನಿತಾಲ್ - ಅಲ್ಮೋರಾ ರಸ್ತೆಯ ಕೈಂಚಿ ಧಾಮ್ ಎಂದೇ ಜನಪ್ರಿಯವಾಗಿದೆ. ಬಾಬಾ ನೀಮ್ ಕರೌಲಿ ಮಹಾರಾಜರು ಹನುಮಾನ್ ಜಿ ಭಕ್ತರಾಗಿದ್ದಾರೆ.
1964 ರಲ್ಲಿ ಆಶ್ರಮ ನಿರ್ಮಾಣ: 20ನೇ ಶತಮಾನದ ಮಹಾನ್ ಸಂತರಲ್ಲಿ ನೀಮ್ ಕರೌಲಿ ಬಾಬಾ ಒಬ್ಬರು ಎನ್ನಲಾಗಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್‌ಪುರ ಗ್ರಾಮದಲ್ಲಿ ಜನಿಸಿದ್ದ ಬಾಬಾರು, ಕೈಂಚಿ ಧಾಮ್ ಆಶ್ರಮವನ್ನು 1964 ರಲ್ಲಿ ನೈನಿತಾಲ್‌ನ ಭವಾಲಿ 7 ಕಿಮೀ ದೂರದಲ್ಲಿ ಸ್ಥಾಪಿಸಿದ್ದರು.
ಮಾರ್ಗ್ ಜುಕರ್‌ಬರ್ಗ್ ನೂ ಬಾಬಾರ ಭಕ್ತ: 1961 ರಲ್ಲಿ ಮಾರ್ಗ್ ಜುಕರ್‌ಬರ್ಗ್ ಅವರು ಮೊದಲ ಬಾರಿಗೆ ಆಗಮಿಸಿದ್ದರು. ಬಾಬಾನ ಪವಾಡಗಳು ಉತ್ತರಾಖಂಡದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಚರ್ಚೆಯಾಗುತ್ತಿವೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಾಬಾರ ಬಗ್ಗೆ ಚರ್ಚಿಸಿದ್ದರು.
ಬಾಬಾರ ಪವಾಡ: ಬಾಬಾ ನೀಮ್ ಕರೌಲಿಯ ಬಗ್ಗೆ ಅದ್ಭುತ ಕಥೆಗಳನ್ನು ಹೇಳಲಾಗುತ್ತಿದೆ. ಒಮ್ಮೆ ಭಂಡಾರದ ಸಮಯದಲ್ಲಿ ತುಪ್ಪದ ಕೊರತೆ ಉಂಟಾದಾಗ ಬಾಬಾ ಅವರ ಆದೇಶದ ಮೇರೆಗೆ ಕೆಳಗೆ ಹರಿಯುವ ನದಿಯಿಂದ ನೀರನ್ನು ತುಂಬಿದ ಡಬ್ಬದಲ್ಲಿ ನೀರನ್ನು ತರಲಾಯಿತು. ಅದನ್ನು ಪ್ರಸಾದಕ್ಕೆ ಬಳಸಿದಾಗ ನೀರು ತುಪ್ಪವಾಗಿ ಮಾರ್ಪಟ್ಟಿತ್ತು.
ಮತ್ತೊಂದು ದಂತಕಥೆ ಪ್ರಕಾರ, ಬಾಬಾ ತನ್ನ ಭಕ್ತರೊಬ್ಬರಿಗೆ ಬಿಸಿಲಿನಲ್ಲಿ ಮೋಡದ ಹೊದಿಕೆ ಮಾಡಿ ತನ್ನ ಗಮ್ಯಸ್ಥಾನಕ್ಕೆ ಕರೆದೊಯ್ದರು. ಬಾಬಾರ ಭಕ್ತ ಮತ್ತು ಪ್ರಸಿದ್ಧ ಬರಹಗಾರ ರಿಚರ್ಡ್ ಆಲ್ಬರ್ಟ್ ಅವರು ಬರೆದ 'ಮಿರಾಕಲ್ ಆಫ್ ಲವ್' ಎಂಬ ಪುಸ್ತಕದಲ್ಲಿ ಬಾಬಾರ ಪವಾಡ ವಿವರಿಸಿದ್ದಾರೆ. ಜೂನ್‌ನಲ್ಲಿ ಉತ್ತರಾಖಂಡದ ಕೈಂಚಿ ಧಾಮದಲ್ಲಿ ವಾರ್ಷಿಕ ಸಮಾರಂಭದಲ್ಲಿ ಭಕ್ತರ ದೊಡ್ಡ ಗುಂಪು ಭಾಗವಹಿಸುತ್ತದೆ. ಈ ಕೈಂಚಿ ಧಾಮಕ್ಕೆ ವಿವಿಧ ರಾಜ್ಯಗಳಿಂದ ಅನುಯಾಯಿಗಳು ಇಲ್ಲಿಗೆ ತಲುಪುತ್ತಾರೆ.
ಇದನ್ನೂ ಓದಿ:ಐಪಿಎಲ್ 2023: ಚೆನ್ನೈ ತಂಡಕ್ಕೆ ಮಹೇಂದ್ರ ಸಿಂಗ್ ದೋನಿ ನಾಯಕನಾಗಿ ಘೋಷಣೆ